ಇದುವರೆಗೂ ಸಾರ್ವಜನಿಕರು ಆರೋಗ್ಯ, ಆಸ್ತಿ ರಕ್ಷಣೆ, ಅಪಘಾತ ಹೀಗೆ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ವಿಮೆ ಮಾಡಿಸಬೇಕಿತ್ತು. ಈಗ ಇದಕ್ಕೆ ಅಂತ್ಯ ಹಾಡಲು ನಿರ್ಧರಿಸಲಾಗಿದ್ದು ಈ ಎಲ್ಲ ಕವರೇಜ್ ಗಳನ್ನು ಒಳಗೊಂಡ ಸಮಗ್ರ ಏಕ ವಿಮಾ ಪಾಲಿಸಿ ಪರಿಚಯಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಈ ಕುರಿತಂತೆ ಜನರಲ್ ಇನ್ಸೂರೆನ್ಸ್ ಕೌನ್ಸಿಲ್ ಮತ್ತು ಲೈಫ್ ಇನ್ಸೂರೆನ್ಸ್ ಕೌನ್ಸಿಲ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಸದ್ಯದಲ್ಲೇ ಸಮಗ್ರ ಕವರೇಜ್ ವಿಮೆ ಪರಿಚಯಿಸಲು ಸಿದ್ಧತೆ ನಡೆದಿದೆ.
ಇದುವರೆಗೂ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ವಿಮೆ ಮಾಡಿಸುತ್ತಿದ್ದ ಕಾರಣ ಸಾರ್ವಜನಿಕರಿಗೆ ಹೊರೆಯಾಗಿ ಪರಿಣಮಿಸುತ್ತಿತ್ತು. ಇದೀಗ ಕೈಗೆಟುಕುವ ಬೆಲೆಯಲ್ಲಿ ಎಲ್ಲವನ್ನು ಕವರ್ ಮಾಡುವ ಒಂದೇ ಪಾಲಿಸಿ ಆರಂಭಿಸಲು ವಿಮಾ ಕಂಪನಿಗಳಿಗೆ ಐಆರ್ ಡಿಎಐ ಅನುಮೋದನೆ ನೀಡಲಿದೆ.