ಸುರತ್ಕಲ್ ಟೋಲ್ ಗೇಟ್ ಮುಚ್ಚಿ ಇಂದಿಗೆ ಅರ್ಧ ವರ್ಷ ಆಯಿತು ಜನರ ಜೇಬಿಗೆ ಬರೋಬ್ಬರಿ 27 ಕೋಟಿ ರೂಪಾಯಿ ಉಳಿಯಿತು.
ಆದರೆ ಮಂಗಳೂರಿನಿಂದ ಉಡುಪಿ ಕುಂದಾಪುರ ಕಡೆಗೆ ಹೋಗಿ ಬರುವ ಖಾಸಗಿ ಬಸ್ಸುಗಳು (express) ಸುರತ್ಕಲ್ ಟೋಲ್ ಸುಂಕದ ಹೆಸರಲ್ಲಿ ಪ್ರಯಾಣಿಕರಿಂದ ಪ್ರತಿ ಟಿಕೇಟಿನ ಮೇಲೆ ₹5 ಹೆಚ್ಚುವರಿ ಯಾಗಿ ಪಡೆಯುತ್ತಿದ್ದ ಹಣವನ್ನು ಸುರತ್ಕಲ್ ಗೇಟ್ ಮುಚ್ಚಿ 6ತಿಂಗಳು ಕಳೆದರೂ ಖಾಸಗಿ ಬಸ್ ಅಪರೇಟರುಗಳು ಲೂಟಿ ಮಾಡುತ್ತಿದ್ದಾರೆ. 6 ತಿಂಗಳಿಂದ ಪ್ರಯಾಣಿಕರ ಜೇಬಿನಿಂದ ಸುಲಿಗೆ ಮಾಡಿದ ಹಣದ ಲೆಕ್ಕ ಇದೆಯಾ? ಜನರ ಹೋರಾಟದಿಂದ ಟೋಲ್ ಗೇಟ್ ಬಂದ್ ಆಗಿರೋದು ಇದರ ಪ್ರಯೋಜನ ಬಸ್ಸಲ್ಲಿ ಹೋಗುವ ಸಾಮಾನ್ಯ ಜನರಿಗೂ ಸಿಗಬೇಕು. ಟೋಲ್ ಮುಚ್ಚಿದ ಕೂಡಲೇ ಬಸ್ ದರ ಇಳಿಸಲು ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಯನ್ನು ಒತ್ತಾಯ ಮಾಡಿದ್ದೆವು ಆದರೆ 6 ತಿಂಗಳಾದರೂ ಸಾರಿಗೆ ಪ್ರಾಧಿಕಾರದ ಸಭೆ ನಡೆದಿಲ್ಲ ಬಸ್ ದರನೂ ಇಳಿದಿಲ್ಲ.
ರಾಜ್ಯ ಸರಕಾರ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಪ್ರಯಾಣದ ಕೊಡುಗೆ ನೀಡಿದೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಆಡಳಿತದಲ್ಲಿದ್ದಾಗಲೇ ಈ ಬಗ್ಗೆ ಏನೂ ಮಾಡದ ಪ್ರತಿಪಕ್ಷ ಬಿಜೆಪಿ ಟೋಲ್ ಲೂಟಿಯ ಪರವಾಗಿಯೇ ಇಂದಿಗೂ ಇದೆ. ಹಾಗಾಗಿ ಪ್ರತಿಪಕ್ಷ ಬಿಜೆಪಿಯಿಂದ ನಿರೀಕ್ಷೆ ಮಾಡಿದರೆ ಮೂರ್ಖತನವಾದೀತು.
ಇದೀಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕ ಸುರತ್ಕಲ್ ಟೋಲ್ ಗೇಟ್ ಹೋರಾಟ ಸಮಿತಿಯ ಜೊತೆಯಲ್ಲಿ ಟೋಲ್ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿತ್ತು ಟೋಲ್ ತೆರವಿನ ಲಾಭವನ್ನು ಸಾಮಾನ್ಯ ಪ್ರಯಾಣಿಕರಿಗೆ ದೊರಕಿಸಿಕೊಡುವ ಜವಾಬ್ದಾರಿಯನ್ನು ಜಿಲ್ಲಾ ಕಾಂಗ್ರೆಸ್ ವಹಿಸಬೇಕು ಆ ಮೂಲಕ ಟೋಲ್ ಹೋರಾಟದಲ್ಲಿ ಕಾಂಗ್ರೆಸ್ಸಿನ ನೈಜ ಬದ್ಧತೆ ಇತ್ತು ಎಂಬುದನ್ನು ತೋರಿಸಬೇಕು. ಇದಕ್ಕೂ ಹೋರಾಟವೇ ಮಾಡಬೇಕೆಂದಾದರೆ ಜಿಲ್ಲೆಯ ಜನರಿಗೆ ಬದಲಾವಣೆಯ ಹಿಡುವಳಿ ಶೂನ್ಯ ಎಂದೇ ಭಾವಿಸಿ ಹೋರಾಟವನ್ನೇ ಮುಂದುವರಿಸುತ್ತೇವೆ