ಹೆಣ್ಣಿನ ಅರೆನಗ್ನ ದೇಹ ಪ್ರದರ್ಶನ ಪ್ರಮಾದವಲ್ಲ: ಕೇರಳ ಹೈಕೋರ್ಟ್

ರಾಷ್ಟ್ರೀಯ

ಮಹಿಳಾ ಹಕ್ಕುಗಳ ಕಾರ್ಯಕರ್ತೆ,ಕೇರಳ ಮೂಲದ ರೆಹಾನಾ ಫಾತಿಮಾ ವಿರುದ್ಧದ ಪೋಕ್ಸೊ ಪ್ರಕರಣವನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ.ಮಹಿಳೆ ತನ್ನ ದೇಹದ ಕುರಿತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಶಕ್ತಳು. ಅದು ಆಕೆಯ ಸಮಾನತೆ ಹಾಗೂ ಖಾಸಗಿತನದ ಮೂಲಭೂತ ಹಕ್ಕು. ನಗ್ನತೆ ಹಾಗೂ ಲೈಂಗಿಕತೆಯನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿ ನ್ಯಾಯಾಲಯ ಮೊಕದ್ದಮೆಯನ್ನು ವಜಾಗೊಳಿಸಿದೆ. 37ರ ಹರೆಯದ ಫಾತಿಮಾಳ ಅರೆ ನಗ್ನ ದೇಹದ ಮೇಲೆ ಆಕೆಯ ಅಪ್ರಾಪ್ತ ಮಕ್ಕಳು ಚಿತ್ರ ಬಿಡಿಸುತ್ತಿರುವ ವಿಡಿಯೊ 2020 ರಲ್ಲಿ ವೈರಲ್ ಆದ ನಂತರ ಆಕೆ ಮೇಲೆ ಕೇಸು ದಾಖಲಿಸಿ ಬಂಧಿಸಲಾಯಿತು.ಆಕೆಯ ಜಾಮೀನು ಅರ್ಜಿಗಳನ್ನು ನಿರಾಕರಿಸಲಾಯಿತು.

ಕೇರಳ ಹೈಕೋರ್ಟ್ ನ್ಯಾಯಾಧೀಶರು ಈ ಕೃತ್ಯವನ್ನು “ಮುಗ್ಧ ಕಲಾತ್ಮಕ ಅಭಿವ್ಯಕ್ತಿ” ಎಂದು ಹೇಳಿದ್ದು ಈ ಕೃತ್ಯವು ಲೈಂಗಿಕ ರೀತಿಯದ್ದು ಎಂಬ ಆರೋಪವನ್ನು ತಳ್ಳಿಹಾಕಿದರು. ಮಕ್ಕಳನ್ನು ಅಶ್ಲೀಲತೆಗೆ ಬಳಸಲಾಗಿದೆ ಎಂದು ತೋರಿಸಲು ಏನೂ ಇಲ್ಲ. ವಿಡಿಯೊದಲ್ಲಿ ಲೈಂಗಿಕತೆಯ ಯಾವುದೇ ಸುಳಿವು ಇಲ್ಲ. ವ್ಯಕ್ತಿಯ ಬೆತ್ತಲೆ ದೇಹದ ಮೇಲೆ ಚಿತ್ರಿಸುವುದು, ಪುರುಷ ಅಥವಾ ಮಹಿಳೆಯಾಗಿದ್ದರೂ, ಅದು ಲೈಂಗಿಕತೆಗೆ ಸಂಬಂಧಿಸಿದ್ದು ಎಂದು ಹೇಳಲಾಗುವುದಿಲ್ಲ ಎಂದಿದೆ ಕೋರ್ಟ್.