ಸ್ನೇಹಿತರಿಂದಲೇ ಯುವತಿಯ ಅತ್ಯಾಚಾರ, ಇಬ್ಬರ ಬಂಧನ

ರಾಜ್ಯ

ಸ್ನೇಹಿತರಿಂದಲೇ ಯುವತಿಯ ಅತ್ಯಾಚಾರ ನಡೆದಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ.ಯುವತಿಯ ಪ್ರಿಯಕರ ಹಾಗೂ ಆತನ ಸ್ನೇಹಿತ ಸೇರಿಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 6ರಂದು ಈ ಘಟನೆ ನಡೆದಿದ್ದು, ಗಿರಿನಗರ ಪೊಲೀಸರು ಸದ್ಯ ಪುರುಷೋತ್ತಮ್ ಹಾಗೂ ಚೇತನ್ ಎನ್ನುವ ಆರೋಪಿಗಳನ್ನು ಬಂಧಿಸಿದ್ದಾರೆ.ಮೊಬೈಲ್ ಕೊಡಿಸುವುದಾಗಿ ಪುಸಲಾಯಿಸಿ ಪುರುಷೋತ್ತಮ್, ತನ್ನ ಪ್ರೇಯಸಿಯನ್ನು ರೂಮ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಪುರುಷೋತ್ತಮ್ ಹಾಗೂ ಯುವತಿ ತುಮಕೂರು ಜಿಲ್ಲೆ ಕೊರಟಗೆರೆ ಮೂಲದವರು. ಒಂದು ವರ್ಷದಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.

ಕಳೆದ ವಾರ ಪುರುಷೋತ್ತಮ್ ಪ್ರೇಯಸಿಯಿಂದ ಮೊಬೈಲ್ ಪಡೆದುಕೊಂಡಿದ್ದ. 2 ದಿನಗಳ ಹಿಂದೆ ಯುವತಿ ಪುರುಷೋತ್ತಮ್‌ಗೆ ಕರೆ ಮಾಡಿ ಮೊಬೈಲ್ ಕೇಳಿದ್ದಳು. ಮೊಬೈಲ್ ಕೊಡುವ ನೆಪದಲ್ಲಿ ಜೂನ್ 6ರಂದು ಗಿರಿನಗರದ ಈರಣ್ಣಗುಡ್ಡೆಯ ಸ್ನೇಹಿತನ ರೂಮ್‌ಗೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದಾನೆ. ಪುರುಷೋತ್ತಮ್ ಸ್ನೇಹಿತ ಚೇತನ್ ಸಹ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಯುವತಿ ಚೀರಾಟ ಕೇಳಿ ಅಕಪಕ್ಕದ ಮನೆಯುವರು ಗಿರಿನಗರ ಠಾಣೆ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.