ವಾಮಂಜೂರು ಅಣಬೆ ಫ್ಯಾಕ್ಟರಿಯನ್ನು ತಕ್ಷಣ ಬಂದ್‌ ಮಾಡುವಂತೆ ಜಿಲ್ಲಾಧಿಕಾರಿ ಆದೇಶ

ಕರಾವಳಿ

:ಮಂಗಳೂರು ನಗರದ ಹೊರವಲಯದ ಆಶ್ರಯ ನಗರದ ಬಳಿ ಕಾರ್ಯಾಚರಿಸುತ್ತಿರುವ ಅಣಬೆ ಫ್ಯಾಕ್ಟರಿಯನ್ನು ತಕ್ಷಣ ಬಂದ್‌ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. 

ಅಣಬೆ ಪ್ಯಾಕ್ಟರಿಯ ದುರ್ವಾಸನೆಯಿಂದ ಸ್ಥಳೀಯ ಜನರಿಗೆ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶ್ವಾಸಕೋಶ ನೋವು, ತಲೆನೋವು, ವಾಂತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಜನರು ಎದುರಿಸುವಂತಾಗಿದೆ. ಜಿಲ್ಲಾಧಿಕಾರಿಯವರು ಘಟಕ ಮುಚ್ಚುವ ಕುರಿತಂತೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಭಾನುವಾರ ವಾಮಂಜೂರಿನ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿಗಳು ಧರಣಿ ನಿರತರನ್ನು ಕಂಡು ಮಾತನಾಡಿ, ಇಲ್ಲಿನ ಪರಿಸ್ಥಿತಿಯನ್ನು ಮನಗಂಡು ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲವನ್ನು ಪರಿಗಣಿಸಿ ಘಟಕ ಮುಚ್ಚಲು ಆದೇಶಿಸುವುದಾಗಿ ಘೋಷಿಸಿದರು.ಮಂಗಳೂರು ನಗರದ ಹೊರವಲಯದ ಆಶ್ರಯ ನಗರದ ಬಳಿ ಕಾರ್ಯಾಚರಿಸುತ್ತಿರುವ ಅಣಬೆ ಫ್ಯಾಕ್ಟರಿಯನ್ನು ತಕ್ಷಣ ಬಂದ್‌ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.