ಇದು ರೀಲ್ ಕೇರಳ ಸ್ಟೋರಿಯಲ್ಲ.. ರಿಯಲ್ ತೀರ್ಥಹಳ್ಳಿ ಸ್ಟೋರಿ.!

ರಾಜ್ಯ

ಮಲೆನಾಡಲ್ಲಿ ‘ಕಿಕ್’ ಹೊಡೆದ ಬಿಜೆಪಿ ವಿದ್ಯಾರ್ಥಿ ಮುಖಂಡನ ಸೆಕ್ಸ್ ಸಿಡಿ.!

ರಜೆ ಮುಗಿದು ಕಾಲೇಜು ಏನೋ ತೆರೆದಿದೆ. ಆದರೆ ಮಲೆನಾಡಿನ ತೀರ್ಥಹಳ್ಳಿಯಲ್ಲಿ ಬಲಪಂಥೀಯ ವಿದ್ಯಾರ್ಥಿ ಮುಖಂಡನ ಸೆಕ್ಸ್ ರಾಕೆಟ್ ಗಳು ಒಂದೊಂದಾಗಿ ಹೊರಬರುತ್ತಿದೆ. ಎಬಿವಿಪಿ ಸಂಘಟನೆ ಹೆಸರಿನಲ್ಲಿ ವಿದ್ಯಾರ್ಥಿನಿಯರನ್ನು ಸಂಘಟನೆಗೆ ಸೇರಿಸಿಕೊಂಡು ಹೋರಾಟ, ಪ್ರತಿಭಟನೆ ಹೆಸರಿನಲ್ಲಿ ಈತ ‘ಕಾಮದಾಟ’ ಮಾಡುತ್ತಿದ್ದದ್ದೆ ಹೆಚ್ಚು. ಮಲೆನಾಡಿನ ಪ್ರತಿಯೊಬ್ಬರ ಮೊಬೈಲಿನಲ್ಲಿ ಇದೀಗ ಈತನ ಕಾಮಕಾಂಡ ಒಂದೊಂದಾಗಿ ಬಯಲಾಗುತ್ತಿದೆ.

ತೀರ್ಥಹಳ್ಳಿ ಎಂಬುದು ಸಮಾಜವಾದಕ್ಕೆ ಹೆಸರಾದ ಊರು. ಆದರೆ ಇಲ್ಲಿ ಧರ್ಮ, ಸಂಸ್ಕೃತಿ ಹೆಸರಿನಲ್ಲಿ ಮುಖವಾಡ ತೊಟ್ಟ ಕೆಲ ಅವಿವೇಕಿಗಳ ಕುಕೃತ್ಯದಿಂದಾಗಿ ಮಲೆನಾಡು ತಲೆತಗ್ಗಿಸುವಂತಾಗಿದೆ.

ಸದ್ಯ ಈಗ ನಾವು ಹೇಳೋಕೆ ಹೊರಟಿರುವುದು ತೀರ್ಥಹಳ್ಳಿ ಭಾಗದಲ್ಲಿ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಎಬಿವಿಪಿ ಸಂಘಟನೆ ಮೂಲಕ ಕಟ್ಟಲು ಹೊರಟಿರುವ ಅಧ್ಯಕ್ಷನ ಸೆಕ್ಸ್ ಸ್ಕ್ಯಾಂಡಲ್ ಬಗ್ಗೆ. ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಲು ವಿದ್ಯಾರ್ಥಿಗಳನ್ನು ಬಳಸಿಕೊಂಡು ಸಂಘಟನೆ ಮಾಡುವುದು ಮಾಮೂಲು. ರಾಜಕಾರಣಿಗಳ ಸಖ್ಯವೋ ಏನೋ ಅವರ ಶಿಷ್ಯಂದಿರು ಕೂಡ ಅದೇ ರೀತಿ ‘ಮೇಯುವ’ ಕೆಲಸಕ್ಕೆ ಇಳಿದಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಮುಂಚೂಣಿ ಯುವ ನಾಯಕನ ಕಾಮದಾಟ ಇದೀಗ ಇಲ್ಲಿನ ಪಡ್ಡೆ ಹೈಕಳ ಮೊಬೈಲ್ ಗಳಲ್ಲಿ ಗುಪ್ತ್ ಗುಪ್ತಾಗಿ ಹರಿದಾಡುತ್ತಿದೆ.

ಬಿಜೆಪಿ ಪಕ್ಷ, ಎಬಿವಿಪಿ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ತೀರ್ಥಹಳ್ಳಿ ಘಟಕದ ಅಧ್ಯಕ್ಷ ‘ಕಠೋರ ಹಿಂದೂ ಹುಲಿಯ’ ಬ್ಲಾಕ್ ಮೇಲ್ ದಂಧೆಗೆ ಹಲವಾರು ಹಿಂದೂ ಯುವತಿಯರು ತತ್ತರಿಸಿದ್ದಾರೆ. ಈತನ ಮಹಾಪುರುಷರ ಸ್ಲೋಗನ್ ‘ಭೇಟಿ ಪಡಾವೋ ಭೇಟಿ ಬಚಾವೋ’ ಯಥಾವತ್ ಪಾಲಿಸಿಕೊಂಡಿದ್ದಾನೆ.!

ತನ್ನದೇ ನೇತೃತ್ವದ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾದ ವಿದ್ಯಾರ್ಥಿನಿಯರನ್ನು ಸಂಘಟನೆ ಹೆಸರಿನಲ್ಲಿ ಪರಿಚಯಮಾಡಿಕೊಂಡು, ಆತ್ಮೀಯನಾಗಿ, ಹಿಂದುತ್ವದ ಕೊಮುದ್ವೇಷದ ಅಮಲೇರಿಸಿ ನಂತರ ಅವರನ್ನು ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸುತ್ತಿದ್ದ. ಈತನ ‘ಹೀರೋಯಿಸಂ’ ನೋಡಿ ಮರುಳಾದ ಒಂದಷ್ಟು ವಿಧ್ಯಾರ್ಥಿನಿಯರು ಈತನ ಬ್ಲಾಕ್ಮೇಲ್ ಬಲೆಗೆ ಬಿದ್ದು ಈಗ ತಾವು ಮಾಡಿದ ತಪ್ಪಿಗೆ ಕೊರಗುತ್ತಿದ್ದಾರೆ.

ಇವಿಷ್ಟೇ ಅಲ್ಲ ಆತ ಕೆಲವು ಹೆಣ್ಣು ಮಕ್ಕಳಿಗೆ ವಿಡಿಯೋ ಕಾಲ್ ಮಾಡಿ, ನಗ್ನವಾಗಿಸಿ ಅದನ್ನು ರೆಕಾರ್ಡ್ ಮಾಡಿ ಬ್ಲಾಕ್ಮೇಲ್ ಮಾಡಲು ಶುರುವಿಟ್ಟುಕೊಂಡದ್ದೇ ಈಗ ದೊಡ್ಡ ಸುದ್ದಿಯಾಗಿ ತೀರ್ಥಹಳ್ಳಿ ಭಾಗದ ಜನ ಬಾಯಿ ಮೇಲೆ ಬೆರಳಿಡುವಂತಹ ಕೆಲಸವಾಗಿದೆ.

ಈಗಾಗಲೇ ಈ ‘ಕಠೋರ ಹಿಂದೂ ಹುಲಿ’ಯ ಬ್ಲಾಕ್ಮೇಲ್ ಮಾದರಿಯ ಹಲವಾರು ವಿಡಿಯೋಗಳು ಇದ್ದು, ಸಧ್ಯ ಇದೀಗ 2 ವಿಡಿಯೋಗಳು ಸೋಶಿಯಲ್ ಮೀಡಿಯಾ ಹಾಗೂ ವಾಟ್ಸ್ ಆಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದೆ. ಆಘಾತಕಾರಿ ವಿಚಾರವೆಂದರೆ ತನ್ನ ನೇತೃತ್ವದ ಸಂಘಟನೆಯಲ್ಲೇ ಗುರುತಿಸಿಕೊಂಡ ಹತ್ತಾರು ಯುವತಿಯರ ಜೊತೆಗೆ ಈತ ಈ ರೀತಿಯ ಕೃತ್ಯ ನಡೆಸಿ ನಂತರ ಹಣಕ್ಕೆ ಮತ್ತು ಮಂಚಕ್ಕೆ ಕರೆದು ಬ್ಲಾಕ್ಮೇಲ್ ಮಾಡಲು ಶುರು ಮಾಡಿಕೊಂಡಿದ್ದ ಎಂಬುದು ಈ ಭಾಗದ ಜನ ಮಾತಾಡುತ್ತಿದ್ದಾರೆ. ತನ್ನ ಬಲೆಗೆ ಬಿದ್ದ ಪ್ರತೀ ಹೆಣ್ಣು ಮಕ್ಕಳ ಬಳಿಯೂ ಹತ್ತು, ಇಪ್ಪತ್ತು ಮೂವತ್ತು ಸಾವಿರಕ್ಕೆ ಈತ ಬ್ಲಾಕ್ಮೇಲ್ ಮಾಡುತ್ತಿದ್ದ ಬಗ್ಗೆಯೂ ವಂಚನೆಗೊಳಗಾದ ಯುವತಿಯರು ಈಗ ಕಣ್ಣೀರಿಡುತ್ತಿದ್ದಾರಂತೆ. ಜೊತೆಗೆ ಆತನ ನೇತೃತ್ವದ ವಿಧ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ತಮ್ಮ ಬಗ್ಗೆ ತಾವೇ ಶಪಿಸಿಕೊಳ್ಳುತ್ತಿದ್ದಾರೆ.

ಸಧ್ಯ ಈ ‘ಕಠೋರ ಹುಲಿ’ಯದು ಹೊರ ಬಿದ್ದಿರುವುದು ಎರಡು ವೀಡಿಯೊ. ಆದರೆ ಈ ರೀತಿಯ ಹತ್ತಾರು ವಿಡಿಯೋ ಇಟ್ಟುಕೊಂಡು ಹತ್ತಾರು ಹೆಣ್ಣು ಮಕ್ಕಳ ಬಳಿಯೂ ಈತ ಬ್ಲಾಕ್ಮೇಲ್ ದಂಧೆ ನಡೆಸುತ್ತಿದ್ದ ಎಂಬ ಗುಮಾನಿಯಿದೆ. ಈ ಬಗ್ಗೆ ಈಗ ತೀರ್ಥಹಳ್ಳಿ ವಿದ್ಯಾರ್ಥಿಗಳು ಮತ್ತು ಯುವ ಜನತೆ ಆ ವಿಧ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡ ಯುವತಿಯರ ಬಗ್ಗೆ ಅನುಮಾನದ ಕಣ್ಣಿಂದ ನೋಡುವ ದುಸ್ಥಿತಿ ಬಂದಿದೆ ಎಂದರೆ ತಪ್ಪಿಲ್ಲ.

ಒಟ್ಟಾರೆ ಹೇಳುವುದಾದರೆ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳಲ್ಲಿ ಗುರುತಿಸಿಕೊಂಡವವರು ಹೆಚ್ಚಾಗಿ ಇಂತಹ ಕೃತ್ಯಗಳಲ್ಲಿ ಗುರುತಿಸಿಕೊಂಡು ವಿರೋಧಿಗಳ ಕಡೆಯಿಂದ ‘ಬ್ಲೂಜೆಪಿ’ ಅನ್ನಿಸಿಕೊಳ್ಳುತ್ತಿರುವುದಕ್ಕೆ ಈ ಸ್ಟೋರಿ ಕೂಡಾ ಒಂದು ಹೊಸ ಸೇರ್ಪಡೆ. ಎಚ್ಚರಿಕೆ ವಹಿಸಬೇಕಾದ ಒಂದು ಪ್ರಮುಖ ಅಂಶವೆಂದರೆ ಕಾಲೇಜು ಯುವತಿಯರು ಇಂತವರ ನೇತೃತ್ವದ ಸಂಘಟನೆಗಳಲ್ಲಿ ಗುರುತಿಸಿಕೊಂಡರೂ, ತಾವು ಗುರುತಿಸಿಕೊಳ್ಳುವ ಸಂಘಟನೆ ಮತ್ತು ಅದರ ಮುಖ್ಯಸ್ಥರು ಎಷ್ಟು ಸಾಚಾ ಇದ್ದಾರೆ, ಅಲ್ಲಿ ಗುರುತಿಸಿಕೊಂಡರೆ ತಮ್ಮ ಹೆಸರು ಮತ್ತು ಬೆಲೆಯನ್ನು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳಬಹುದು ಎಂಬುದನ್ನು ಮನನ ಮಾಡಿಕೊಳ್ಳಬೇಕಿದೆ.

ಹಿಂದೂ ಹೆಣ್ಮಕ್ಕಳ ರಕ್ಷಣೆ ಹೆಸರಿನಲ್ಲಿ ಇವರು ಮಾಡುತ್ತಿರುವ ಘನಂದಾರಿ ಕೆಲಸ ಇದು. ‘ಕೇರಳ ಸ್ಟೋರಿ’ ರೀಲ್ ಸಿನೆಮಾ ತೋರಿಸಿ ಹಿಂದೂ ಯುವತಿಯರನ್ನು ಮತೀಯವಾದಕ್ಕೆ ಸೆಳೆಯುವವರು ರಿಯಲ್ ತೀರ್ಥಹಳ್ಳಿ ಸ್ಟೋರಿ ನೋಡಿ ಎಚ್ಚೆತ್ತುಕೊಳ್ಳಬೇಕಿದೆ. ಲವ್ ಜಿಹಾದ್ ಅಂತ ಬೊಬ್ಬಿರಿಯುವವರು ತಮ್ಮದೇ ಸಂಘಟನೆ ನಾಯಕರು ಹಿಂದೂ ಯುವತಿಯರನ್ನು ಮುಕ್ಕುತ್ತಿರುವ ಬಗ್ಗೆ ಬಾಯಿ ಬಿಡಬೇಕಿದೆ. ಇಲ್ಲವಾದರೆ ಇದು ಕೂಡ ಧರ್ಮ ರಕ್ಷಣೆಯ ಭಾಗವ? ಎಂದು ಜನರಾಡಿಕೊಳ್ಳುವಂತಾಗಿದೆ. ಹಿಂದೂ ಯುವತಿಯರೆ ತಮ್ಮ ಬಗಲಲ್ಲಿರುವ ವಿಷಸರ್ಪಗಳ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳಿ.