ಬಿಜೆಪಿ ಸರ್ಕಾರ ಅಧಿಕಾರದ ಅವದಿಯಲ್ಲಿ ನಡೆಸಿದ್ದ ನಮ್ಮ ಬೆಂಗಳೂರು ಹಬ್ಬದಲ್ಲಿ ಭಾರಿ ಅವ್ಯವಹಾರ ನಡೆದಿತ್ತು ಎಂದು ಆರೋಪಗಳು ಕೇಳಿಬಂದಿದೆ. ಬೆಂಗಳೂರಿನಲ್ಲಿ ನಡೆದ ಹಬ್ಬಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುಮಾರು 5.60 ಕೋಟಿ ವೆಚ್ಚಮಾಡಿದೆ.ಸರಳವಾಗಿ ನಮ್ಮ ಬೆಂಗಳೂರು ಹಬ್ಬ ಆಚರಿಸುವುದಾಗಿ ಹೇಳಿದ್ದ ಅಂದಿನ ಬಿಜೆಪಿ ಸರ್ಕಾರ, 2022ರ ಮಾರ್ಚ್ 25 ಮತ್ತು 26 ರಂದು ಈ ಹಬ್ಬವನ್ನು ಹಮ್ಮಿಕೊಂಡಿತ್ತು.ಕಬ್ಬನ್ ಪಾರ್ಕ್ ಹಾಗೂ ವಿಧಾನಸೌಧದ ಆವರಣದಲ್ಲಿ ನಮ್ಮ ಬೆಂಗಳೂರು ಹಬ್ಬ ನಡೆದಿತ್ತು. ಬೆಂಗಳೂರಿನ ಸಂಸ್ಕೃತಿ, ಕಲೆ ಹಾಗೂ ಪರಂಪರೆಯನ್ನು ಇಲ್ಲಿ ನೆಲೆಸಿರುವವರಿಗೆ ಪರಿಚಯಿಸುವುದು ಈ ಹಬ್ಬದ ಮುಖ್ಯ ಉದ್ದೇಶವಾಗಿತ್ತು. ಈ ಹಬ್ಬದ ನಿರ್ವಹಣೆಯನ್ನು ಇಲಾಖೆ ಸಂಸ್ಥೆಯೊಂದಕ್ಕೆ ನೀಡಿತ್ತು. ಇದರಿಂದಾಗಿ ಕುರ್ಚಿ ಟೇಬಲ್ ಸೇರಿ ಹಬ್ಬಕ್ಕೆ ಬೇಕಾದ ವಸ್ತುಗಳಿಗೆ ದುಪ್ಪಟ್ಟು ಹಣ ಪಾವತಿಸಲಾಗಿದೆ ಎಂದು ಕಲಾವಿದರು ಆರೋಪಿಸಿದ್ದಾರೆ.
ನಮ್ಮ ಬೆಂಗಳೂರು ಹಬ್ಬಕ್ಕೆ ಸಂಬಂಧಿಸಿದಂತೆ ಇಲಾಖೆಯು ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ & ಅಡ್ವರ್ಟೈಸಿಂಗ್ ಲಿಮಿಟೆಡ್ ಗೆ ಹಣ ಪಾವತಿಸಿದೆ. ಪ್ಲಾಸ್ಟಿಕ್ ಕುರ್ಚಿಗಳಿಗೆ ಬೇಕಾಬಿಟ್ಟಿ ಬಾಡಿಗೆ ಪಾವತಿಸಿದರೆ, ಟೇಬಲ್‌ಗಳಿಗೂ ಒಟ್ಟಾರೆ ಹಣ ಸಂದಾಯವಾಗಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ದರಕ್ಕಿಂತ ಅಧಿಕ ಪಟ್ಟು ಸಂದಾಯ ಮಾಡಲಾಗಿದೆ. ವಿಧಾನಸೌಧದಲ್ಲಿ ನಡೆದ ಮುಖ್ಯ ಕಾರ್ಯಕ್ರಮದಲ್ಲಿ ಅತಿ ಗಣ್ಯರಿಗಾಗಿ ಹಾಕಲಾಗಿದ್ದ 50 ಸೋಫಾಗಳಿಗೆ 12,50 ಲಕ್ಷ ಪಾವತಿಸಲಾಗಿದೆ. ಬ್ಯಾಂಕ್ವೆಟ್ ಕುರ್ಚಿಗಳಿಗೆ ತಲಾ 200 ರೂ ಬಾಡಿಗೆ ಪಾವತಿಸಲಾಗಿದೆ. ಹಬ್ಬದ ಎರಡು ಪ್ರವೇಶ ಕಮಾನು ಹಾಗೂ ವೇದಿಕೆಯ ಹಿಂದಿನ ಪರದೆಗೆ 7,32,50 ಲಕ್ಷ ಹಣ ಬಿಲ್ ಮಾಡಲಾಗಿದೆ ಎಂಬ ಆರೋಪವಿದೆ.
ತಾರತಮ್ಯ ಆರೋಪ: ಇಲಾಖೆಯು ಟೆಂಡರ್ ಕರೆಯದ ಸಂಸ್ಥೆಯೊಂದಕ್ಕೆ ಕಾರ್ಯಕ್ರಮ ನಿರ್ವಹಣೆಯ ಅವಕಾಶ ನೀಡಿ, ಹಣ ಪಾವತಿಸಿರುವುದಕ್ಕೂ ಸಾಂಸ್ಕೃತಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಚಲನಚಿತ್ರ ಗಾಯಕರ ಬ್ಯಾಂಡ್‌ಗಳು ಹಾಗೂ ಜಾನಪದ ಸೇರಿ ವಿವಿಧ ಸಾಂಪ್ರದಾಯಿಕ ಕಲಾ ಪ್ರಕಾರಗಳ ತಂಡಗಳಿಗೆ ಪಾವತಿಸಿದ ಗೌರವಧನದಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.ಭಟ್ ಹಾಗೂ ಸಜ್ಜು ಅವರ ಬ್ಯಾಂಡ್ ಹಾಗೂ ರಿಯಾಲಿಟಿ ಶೋಗಳ ಗಾಯಕರಿಗೆ ಒಟ್ಟು 7,41 ಲಕ್ಷ ಪಾವತಿಸಿದರೆ, ಇಲಾಖೆ ವತಿಯಿಂದ ಎರಡು ದಿನ ಪ್ರದರ್ಶನ ನೀಡಿದ ಕಲಾ ತಂಡಗಳು ಹಾಗೂ ಕಲಾವಿದರಿಗೆ ಒಟ್ಟು 7,25 ಲಕ್ಷ ನೀಡಲಾಗಿದೆ. ನಿಯಮಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿರುವ ಸಂಘ-ಸಂಸ್ಥೆಗಳಿಗೆ ಧನಸಹಾಯ ನೀಡದ ಇಲಾಖೆ, ಬೆಂಗಳೂರು ಹಬ್ಬದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದೆ. ಜಾನಪದ ಸೇರಿ ವಿವಿಧ ಸಾಂಪ್ರದಾಯಿಕ ಕಲೆಗಳನ್ನು ಕಡೆಗಣಿಸಿ, ಚಲನಚಿತ್ರದ ಗಾಯಕರಿಗೆ ಮಣೆ ಹಾಕಲಾಗಿತ್ತು ಎಂದು ಅಸಮಾಧಾನ ವ್ಯಕ್ತವಾಗಿದೆ.
ನಮ್ಮ ಬೆಂಗಳೂರು ಹಬ್ಬದ ಬಗ್ಗೆ, ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿರುವುದಕ್ಕೆ 7,25 ಲಕ್ಷ ಪಾವತಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಬ್ಬದ ಒಟ್ಟು 18 ವಿಡಿಯೊ ಪೋಸ್ಟ್ ಮಾಡಲಾಗಿದ್ದು,ಎರಡು ಸಾವಿರ ಆಮಂತ್ರಣ ಮುದ್ರಸಲಾಗಿದೆ.ಮೊತ್ತ 13 ಲಕ್ಷ ಪಾವತಿಸಲಾಗಿದೆ, ಇದೇ ರೀತಿ ವಿದ್ಯುತ್ ದೀಪಗಳು ಸೇರಿ ವಿವಿಧ ವಸ್ತುಗಳು ಹಾಗೂ ಉಪಕರಣಗಳಿಗೆ ಹೆಚ್ಚಿನ ಬಾಡಿಗೆ ಪಾವತಿಸಲಾಗಿದೆ ಎಂದು ಆಕ್ಷೇಪ ವ್ಯಕ್ತವಾಗಿದೆ.