ಪಟ್ಟಾಭಿರಾಮ ಸೋಮಯಾಜಿ ನಿಧನಕ್ಕೆ ಮಂಗಳೂರು ನಾಗರಿಕ ಸಂಘಟನೆಗಳ ಸಂತಾಪ

ಕರಾವಳಿ

ಪಟ್ಟಾಭಿಯವರ ಅಗಲಿಕೆಯು ಕರ್ನಾಟಕದ ಕೋಮುವಾದ ವಿರೋಧಿ ಚಳವಳಿಗೆ ದೊಡ್ಡ ನಷ್ಟ:ಮುನೀರ್ ಕಾಟಿಪಳ್ಳ.

ಪ್ರೊ. ಪಟ್ಟಾಭಿರಾಮ ಸೋಮಯಾಜಿ ಯವರನ್ನು ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾನ್ವಿತರಾಗಿದ್ದರು. ಕನ್ನಡ ಸಾಹಿತ್ಯದ ಪ್ರಖರ ವಿಮರ್ಶಕರಾಗಿದ್ದರು. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಧ್ಯಾಪಕರಾಗಿ, ಸಾರ್ವಜನಿಕ ಚಿಂತಕರಾಗಿ ಬೌದ್ದಿಕ ವಲಯದಲ್ಲಿ ಹೆಸರು ಮಾಡಿದ್ದರು. ಹಿಂದುತ್ವದ ಕೋಮುವಾದದ ಅಪಾಯವನ್ನು ಬಹಳ ನಿಶಿತವಾಗಿ ವಿರೋಧಿಸಿದ್ದರು. ಅಲ್ಪಸಂಖ್ಯಾತರ ಪರಿಸ್ಥಿತಿ ಅತ್ಯಂತ ಅಪಾಯದಲ್ಲಿದೆ ಎಂಬ ಆತಂಕ ಅವರನ್ನು ಕಳವಳಕ್ಕೀಡು ಮಾಡಿತ್ತು. ತಾನು ಪ್ರತಿಪಾದಿಸುತ್ತಿದ್ದ ನಿಲುವುಗಳಿಗೆ ತೋರಿದ ಬದ್ದತೆಗಾಗಿ ಹಿಂದುತ್ವದ ಕೋಮುವಾದಿಗಳಿಂದ ತೀವ್ರ ದಾಳಿಗೂ ಒಳಗಾಗಿದ್ದರು. ಇಂತಹ ದಿಟ್ಟ ನಿಲುವು ಈ ಕಾಲದಲ್ಲಿ ಬಹಳ ಅಪರೂಪವಾದದ್ದು. ಅತ್ಯಂತ ಮಾನವೀಯರಾಗಿದ್ದ ಪಟ್ಟಾಭಿಯವರ ಅಗಲಿಕೆಯು ಕರ್ನಾಟಕದ ಕೋಮುವಾದ ವಿರೋಧಿ ಚಳವಳಿಗೆ ದೊಡ್ಡ ನಷ್ಟ. ಮಂಗಳೂರಿನ ಜನಪರ ಚಳವಳಿಗಳು, ಸೌಹಾರ್ದ ವೇದಿಕೆಗಳು ಅವರ ನಿಧನದ ಸಂದರ್ಭ ಗೌರವ ಪೂರ್ವಕ ಸಂತಾಪಗಳನ್ನು ಸಲ್ಲಿಸುತ್ತದೆ.