ಸಾವಿರ, ಸಾವಿರ ಕೋಟಿ ಒಡೆಯ ತಹಶೀಲ್ದಾರ್‌ ಅಜಿತ್‌ ರೈ.!ಲೋಕಾಯುಕ್ತ ಅಧಿಕಾರಿಗಳಿಗೆ ಶಾಕ್.!

ಕರಾವಳಿ

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕೆಆರ್‌ಪುರಂ ತಹಶೀಲ್ದಾರ್‌ ಅಜಿತ್‌ ರೈ ಮನೆಯಲ್ಲಿರುವ ಸ್ವತ್ತುಗಳನ್ನು ನೋಡಿ ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿದ್ದಾರೆ.ಅಜಿತ್ ರೈ ಬಳಿ ಹಲವಾರು ರ್ಯಾಡೋ ವಾಚ್‌ ಪತ್ತೆಯಾಗಿದೆ.ವಾಚ್ ಗಳ ಬೆಲೆ 5 ಲಕ್ಷ ಕ್ಕೂ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ. ದಾಳಿ ವೇಳೆ ಸಿಕ್ಕ ಅಷ್ಟೂ ವಾಚ್ ಗಳ ಬೆಲೆ ಬರೋಬ್ಬರಿ ಹತ್ತು ಲಕ್ಷ ರೂ ಅಧಿಕ ಎಂದು ಅಂದಾಜಿಸಲಾಗಿದೆ.

ತಪಾಸಣೆಯ ಬೇಳೆ ಅಜಿತ್ ರೈ ಬ್ರಾಂಡ್ ಲೋಗೋ ಸೀಕ್ರೇಟ್ ರಿವೀಲ್ ಆಗಿದೆ. ASR ಹೆಸರಿನಲ್ಲಿ ಅಜಿತ್ ರೈ ಅಫಿಶಿಯಲ್ ಲೋಗೋ ತಯಾರಿಸಿದ್ದರು. ಎಎಸ್‌ಆರ್‌ ಎಂದರೆ ಅಜಿತ್‌ ಸೌಮ್ಯಾ ರೈ.ತನ್ನ ಹೆಸರಿನ ಜೊತೆ ಪತ್ನಿ ಸೌಮ್ಯ ಹೆಸರನ್ನು ಸೇರಿಸಿ ಅಜಿತ್ ರೈ ಲೋಗೋ ವಿನ್ಯಾಸ ಮಾಡಿದ್ದರು.ತನ್ನ ಬೈಕ್,ಕಾರ್ ಹಾಗೂ ಇತರೇ ವಸ್ತುಗಳಿಗೆ ವಿಶೇಷವಾಗಿ ಅಜಿತ್‌ ರೈ ಲೋಗೋ ಡಿಸೈನ್ ಮಾಡಿ ಅಂಟಿಸುತ್ತಿದ್ದರು.ಆಡಿ, ಬೆನ್ಜ್ ಕಾರುಗಳ ಲೋಗೋ ಮಾದರಿಯಲ್ಲಿ ವಿನ್ಯಾಸ ಮಾಡಿದ್ದನ್ನು ನೋಡಿ ಲೋಕಾಯುಕ್ತ ಅಧಿಕಾರಿಗಳು ಶಾಕ್‌ ಆಗಿದ್ದಾರೆ.

ಸಹಕಾರ ನಗರದಲ್ಲಿ 50 ಲಕ್ಷದ ಲೀಸ್‍ನ ಮನೆಯಲ್ಲಿ ವಾಸ,ಗೆಳೆಯ ಗೌರವ್ ಹೆಸರಲ್ಲಿ ದೇವನಹಳ್ಳಿ ಬಳಿ 96 ಎಕರೆಯ ರೇಸ್ ಕ್ಲಬ್,ಸೋದರ ಅಶೀತ್ ರೈ ಹೆಸರಲ್ಲಿ ಬೇನಾಮಿ ಆಸ್ತಿ,ದೇವನಹಳ್ಳಿಯ ಮತ್ತೊಂದು ಕಡೆ 44 ಎಕರೆಯ ಫಾರ್ಮ್ ಹೌಸ್,ದೊಡ್ಡ ದೊಡ್ಡ ಕಂಪನಿಗಳಿಗೆ ಜಮೀನು ಕೊಡಿಸಿ ದುಡ್ಡು ಮಾಡ್ತಿದ್ದ ಅಜಿತ್ ರೈ,ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರದಲ್ಲಿ ನೂರಾರು ಎಕರೆ ಜಮೀನು ಇರಬಹುದು ಎಂಬ ಶಂಕೆ.ನೂರಾರು ಎಕರೆ ಜಮೀನಿನ ಮೌಲ್ಯ 1000ಕೋಟಿಗೂ ಹೆಚ್ಚು ಎಂಬ ಅಂದಾಜು.1368 ಸೀರಿಸ್‍ನ ಐಷಾರಾಮಿ ಕಾರುಗಳು, ಬೈಕ್‍ಗಳು,4 ಫಾರ್ಚೂನರ್ ಕಾರುಗಳು,4 ಥಾರ್, 3 ಐಷಾರಾಮಿ ಬೈಕ್.ಅಜಿತ್ ರೈ ಬಳಿ ಕೊಟ್ಯಾಂತರ ಮೌಲ್ಯದ ವಾಹನಗಳು ಪತ್ತೆಯಾಗಿದೆ.

ಅಜಿತ್​ ರೈಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 40 ಲಕ್ಷ ನಗದು, 700 ಗ್ರಾಂ ಚಿನ್ನ, 1.90 ಕೋಟಿ ಮೌಲ್ಯದ ವಸ್ತುಗಳು, ಐಷಾರಾಮಿ ಕಾರು ಮತ್ತು ಬೈಕ್​ಗಳನ್ನು ವಶಕ್ಕೆ ಪಡೆದಿದ್ದರು.ಎಲ್ಲಾ ವಾಹನಗಳಿಗೂ ಒಂದೇ ನಂಬರ್ ರಿಜಿಸ್ಟರ್ ಇದೆ. ಆದರೆ ಇದ್ಯಾವುದಕ್ಕೂ ಅಜಿತ್​ ರೈ ಲೆಕ್ಕ ಕೊಡುತ್ತಿಲ್ಲ ಎನ್ನಲಾಗಿದೆ.ದಾಳಿ ವೇಳೆ ಅಜಿತ್ ರೈಗೆ ಸೇರಿದ 200 ಎಕರೆಗೂ ಅಧಿಕ ವಿವಿಧ ಆಸ್ತಿ ಪತ್ರಗಳು ಲಭ್ಯವಾಗಿವೆ.ಇದೀಗ ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಕೆ.ಆರ್‌ ಪುರ ತಹಸೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.