ಸಕ್ರೆಬೈಲ್ ಆನೆ ಬಿಡಾರದ ಬಳಿ ಇಂದು ಸಂಜೆ 5:00 ಗಂಟೆ ಸುಮಾರಿಗೆ ಕಾರು ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ನವದುರ್ಗ ಬಸ್ಗೆ ಶಿವಮೊಗ್ಗದ ಕಡೆಯಿಂದ ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಪೂರ್ತಿಯಾಗಿ ನುಜ್ಜುಗುಜ್ಜಾಗಿದೆ. ಖಾಸಗಿ ಬಸ್ ರಸ್ತೆಯ ಇನ್ನೊಂದು ಪಕ್ಕಕ್ಕೆ ಸರಿದು ನಿಂತಿದೆ.ಸಂಜೆ ಐದು ಗಂಟೆಯ ಹೊತ್ತಿಗೆ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಆನೆ ಕ್ಯಾಂಪ್ಗೂ ಮೊದಲು ಸಿಗುವ ಫಿಶ್ ಹೋಟೆಲ್ನ ಸಮೀಪ ಘಟನೆ ಸಂಭವಿಸಿದೆ. ಆಕ್ಸಿಡೆಂಟ್ನಲ್ಲಿ ಕಾರಿನಲ್ಲಿದ್ದ ನಾಲ್ವರಿಗೂ ಗಾಯಗಳಾಗಿದ್ದು, ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ಧಾರೆ. ಕಾರಿನಲ್ಲಿದ್ದವರು ಮಂಗಳೂರು ತಾಲೂಕಿನ ಎಡಪದಪು,ಗಂಜಿಮಠ ನಿವಾಸಿಗಳೆಂದು ತಿಳಿದು ಬಂದಿದೆ.
ಅನಾರೋಗ್ಯದಲ್ಲಿದ್ದ ವ್ಯಕ್ತಿಯ ಆರೋಗ್ಯ ವಿಚಾರಿಸಿ ಹಿಂತಿರುಗುವ ಸಮಯದಲ್ಲಿ ಈ ದುರ್ಘಟನೆ ನಡೆದಿರುತ್ತದೆ.ಅಪಘಾತಕ್ಕೆ ಬಸ್ಸಿನ ಅತೀ ವೇಗವೇ ಕಾರಣವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುತ್ತಾರೆ.

ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಗಾಯಾಳುಗಳು ಗಂಜಿಮಠದ ಇಸ್ಮಾಯಿಲ್ ಹಾಗೂ ಬಾರ್ದಿಲ ನಿವಾಸಿ ಎಂಬ ಮಾಹಿತಿ ಇದೆ.