ಬಾಳೆಹೊನ್ನೂರಿನ ಜನನಾಯಕನಿಗೆ ಒಲಿಯಲಿ ‘ಅಧ್ಯಕ್ಷ’ ಪಟ್ಟ.!

ರಾಜ್ಯ

ಬಾಳೆಹೊನ್ನೂರಿನ ಸುತ್ತಮುತ್ತ ಮಿಂಚಿನ ಸಂಚಾರ ಉಂಟು ಮಾಡುವ ಹೆಸರಿದ್ದರೆ ಅದು ಶಾಫಿಯವರದ್ದು. ಬಿ ಕಣಬೂರು ಗ್ರಾಮ ಪಂಚಾಯತ್ ನಲ್ಲಿ ಅತ್ಯಂತ ಕಿರಿಯ ಪಂಚಾಯತ್ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಸತತ ಮೂರು ಬಾರಿ ಪಂಚಾಯತ್ ಸದಸ್ಯರಾಗಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಮೆ ಶಾಫಿಯವರದ್ದು.

ಜನನಾಯಕ ಕಂ ಸಮಾಜಸೇವಕ ಶಾಫಿ ತಮ್ಮ ಕ್ಷೇತ್ರದ ಜನರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವ ಮೂಲಕ ಕ್ಷೇತ್ರಾದ್ಯಂತ ಹವಾ ಸೃಷ್ಟಿಸಿದ್ದಾರೆ. ಮೂಲಭೂತ ಸೌಕರ್ಯ ಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಜನಾನುರಾಯಿಯಾಗಿದ್ದಾರೆ. ವಿಧವಾ ವೇತನ, ವೃದ್ಧಾಪ್ಯ ವೇತನ ದಂತಹ ಸರಕಾರಿ ಯೋಜನೆಗಳನ್ನು ತನ್ನ ಕ್ಷೇತ್ರದ ಜನತೆ ಸದುಪಯೋಗಪಡಿಸಲು ಮನೆ ಮನೆಗೆ ತೆರಳಿ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ, ವಿದ್ಯಾರ್ಥಿಗಳಿಗೆ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರಗಳನ್ನು ಸಕಾಲದಲ್ಲಿ ಸಿಗುವಂತೆ ಮಾಡುವಲ್ಲಿ ಇವರ ಪಾತ್ರ ಮೆಚ್ಚುವಂಥದ್ದು.

ಕೊರೊನಾದಂತಹ ಸಮಯದಲ್ಲಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿ ತನ್ನ ವಾರ್ಡಿನ ಜನರಿಗೆ ರೇಷನ್ ಕಿಟ್, ರೋಗಿಗಳಿಗೆ ಆಮ್ಲಜನಕ ವ್ಯವಸ್ಥೆ ಮಾಡುವ ಮೂಲಕ ಮಾದರಿ ಜನಪ್ರತಿನಿಧಿ ಎನಿಸಿಕೊಂಡಿದ್ದಾರೆ.

ರಕ್ತದ ಅವಶ್ಯಕತೆಯನ್ನು ಮನಗಂಡು ಇತರ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಿ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿ, ಜನ ಮನಗಳಲ್ಲಿ ಅಚ್ಚಳಿಯದ ನಾಯಕ ಎನಿಸಿಕೊಂಡಿದ್ದಾರೆ. ಮಲೆನಾಡಿನಲ್ಲಿ ಮಳೆಯಿಂದ ತತ್ತರಿಸಿ ಹೋದ ಜನರಿಗೆ ಸರ್ಕಾರ ಸೌಲಭ್ಯಗಳನ್ನು ಒದಗಿಸಿಕೊಟ್ಟಂತಹ‌ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೇವಲ ರಾಜಕಾರಣ ಮಾತ್ರವಲ್ಲ ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಸಂಘಟನಾ ಚತುರ ಎನಿಸಿಕೊಂಡಿದ್ದಾರೆ.
ಪ್ರಸ್ತುತ‌ ಬ್ಯಾರಿ ಒಕ್ಕೂಟದ ತಾಲೂಕು ಅಧ್ಯಕ್ಷ, ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ, ಬಿ.ಕಣಬೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಮಲೆನಾಡು ಗಲ್ಫ್ ಟ್ರಸ್ಟ್ ಬಾಳೆಹೊನ್ನೂರು ಇದರ ಸಹ ಕಾರ್ಯದರ್ಶಿ, ಜೆಸಿಐ ಬಾಳೆಹೊನ್ನೂರು ಇದರ ನಿರ್ದೇಶಕ, ಟೀಮ್ ಜಾಗೃತ್ ಇದರ ಸಂಘಟನಾ ಕಾರ್ಯದರ್ಶಿಯಾಗಿ ಹತ್ತಾರು ಸಂಘಟನೆಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಗುರುತಿಸಿ ಕೊಂಡಿದ್ದಾರೆ.