ಮಂಗಳೂರಿನ ಹೃದಯ ಭಾಗದಲ್ಲಿ ಏನುಂಟು.? ಏನಿಲ್ಲ.? ಕೆಲವು ಅಕ್ರಮ ದಂಧೆಗಳನ್ನು ಮಟ್ಟಹಾಕಿದ ಪೊಲೀಸ್ ಇಲಾಖೆ ಮಟ್ಕಾ ದಂಧೆಯನ್ನು ಮಟ್ಟ ಹಾಕದೆ ರಾಜಾರೋಷವಾಗಿ ನಡೆಯಲು ಬಿಟ್ಟಿರುವುದು ಪೊಲೀಸ್ ಇಲಾಖೆಯನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ.
ನಗರದ ಹೃದಯ ಭಾಗವಾದ ಸ್ಟೇಟ್ ಬ್ಯಾಂಕ್, ಹಂಪನಕಟ್ಟೆ, ಸುರತ್ಕಲ್, ಲೇಡಿಗೋಷನ್ ಬಳಿ ಲಿಂಕಿಂಗ್ ಟವರ್ ಏರಿಯಾಗಳಲ್ಲಿ ಅವ್ಯಾಹತವಾಗಿ ಮಟ್ಕಾ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದೆ.
ಲೇಡಿಗೋಷನ್ ಬಳಿಯ ಕೆಲವು ಏರಿಯಾಗಳಲ್ಲಿ ಯಾರಿಗೂ ಅನುಮಾನ ಬರದಂತೆ ಮಟ್ಕಾಕುಳಗಳು ಮಟ್ಕಾ ನಂಬರ್ ಬರೆಯುವ ದಂಧೆ ನಡೆಸುತ್ತಿದ್ದಾರೆ. ಕೇರಳದಿಂದ ಬಂದಿರುವ ಇಸ್ಪೀಟ್, ಧೋ ನಂಬರ್ ಕಿಂಗ್ ಪಿನ್ ವೊಬ್ಬ ಪೊಲೀಸ್ ಇಲಾಖೆಯನ್ನು ಕ್ಯಾರೇ ಮಾಡದೇ ನಗರದ ಹಲವಾರು ಕಡೆ ಮಟ್ಕಾ ದಂಧೆ ಯನ್ನು ರಾಜಾರೋಷವಾಗಿ ನಡೆಸುತ್ತಿದ್ದಾನೆ ಅನ್ನುವ ಆರೋಪಗಳಿವೆ.
ಇಷ್ಟೆಲ್ಲಾ ನಡೆಯುತ್ತಿದ್ದರೂ, ಈ ಮಟ್ಕಾ ದಂಧೆಯ ಕಿಂಗ್ ಪಿನ್ ಗಳನ್ನು ಮಟ್ಟ ಹಾಕಲು ಸಾಧ್ಯವೇ ಇಲ್ಲವೇ ಎಂಬುದು ಸಾರ್ವಜನಿಕ ವಲಯದ ಮಾತಾಗಿದೆ. ಇಸ್ಪೀಟ್ ದಂಧೆ ಮಟ್ಟ ಹಾಕಿದ ಹಾಗೆ ಈ ಮಟ್ಕಾ ದಂಧೆಯನ್ನು ಕೂಡ ಪೊಲೀಸ್ ಇಲಾಖೆ ನಿಲ್ಲಿಸಬೇಕು ಎಂದು ಜನರ ಅಭಿಪ್ರಾಯವಾಗಿದೆ
ದಿನಗೂಲಿ ಮಾಡುವ ನೌಕರರಿಂದ ಹಿಡಿದು, ದಿನಕ್ಕೆ 200, 300 ರೂಪಾಯಿ ದುಡಿಯುವ ಜನರು ಈ ಮಟ್ಕಾ ದಂಧೆಗೆ ಹಣ ಸುರಿಸಿ ಮನೆಯವರು ಬೀದಿಪಾಲಾಗುವ ಪರಿಸ್ಥಿತಿ ಮಂಗಳೂರಿನ ಜನತೆಗೆ ಎದುರಾಗಿದೆ.
ಪೊಲೀಸ್ ಇಲಾಖೆ ಇನ್ನಾದರೂ ಇಂತಹ ಅನೇಕ ಮಟ್ಕಾ ದಂಧೆಯ ಬಗ್ಗೆ ಕಣ್ಣು ಹಾಯಿಸಿ ಎಲ್ಲಾ ಈ ರೀತಿಯ ಮಟ್ಕಾ ಅಕ್ರಮಕ್ಕೆ ಕಡಿವಾಣ ಹಾಕಿ, ಅಕ್ರಮ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಬಡಜನರ ಬದುಕು ಬೀದಿಪಾಲಾಗದಂತೆ ಕಾಪಾಡಬೇಕಾಗಿದೆ.