ಪ್ರಧಾನಿ ವಿರುದ್ಧ ನಿಂದನೆಯ ಮಾತುಗಳು ಅವಹೇಳನಕಾರಿಯೇ ಹೊರತು ದೇಶದ್ರೋಹವಲ್ಲ: ಕರ್ನಾಟಕ ಹೈಕೋರ್ಟ್

ರಾಷ್ಟ್ರೀಯ

ಬೀದರಿನ ಶಾಲಾ ಆಡಳಿತ ಮಂಡಳಿ ವಿರುದ್ಧದ ದೇಶದ್ರೋಹ ಪ್ರಕರಣವೊಂದನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಲಾದ ನಿಂದನೆಯು ಅವಹೇಳನಕಾರಿ ಮತ್ತು ಬೇಜವಾಬ್ದಾರಿಯಿಂದ ಕೂಡಿದೆ. ಆದರೆ ಅದನ್ನು ದೇಶದ್ರೋಹ ಎಂದು ಕರೆಯಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ವಿವಿಧ ಧಾರ್ಮಿಕ ಗುಂಪುಗಳ ನಡುವಿನ ಸಾಮರಸ್ಯವನ್ನು ಕದಡಿದಾಗ ಹೇರಲಾಗುವ ಸೆಕ್ಷನ್ 153 (ಎ) ಈ ಪ್ರಕರಣದಲ್ಲಿ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಬೆಂಗಳೂರು, ಶಾಲಾ ಆಡಳಿತ ಮಂಡಳಿಯೊಂದರ ವಿರುದ್ಧದ ದೇಶದ್ರೋಹದ ಪ್ರಕರಣವನ್ನು ರದ್ದುಗೊಳಿಸಿರುವ ಕರ್ನಾಟಕ ಹೈಕೋರ್ಟ್, ʼಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಳಸಲಾಗಿರುವ ಶಬ್ಧಗಳು ಅವಹೇಳನಕಾರಿಯಾಗಿವೆ ಮತ್ತು ಬೇಜವಾಬ್ದಾರಿಯಿಂದ ಕೂಡಿವೆ ಆದರೆ ಅದು ದೇಶದ್ರೋಹವಲ್ಲʼ ಎಂದು ಹೇಳಿದೆ. ನ್ಯಾಯಮೂರ್ತಿ ಚಂದನಗೌಡರು ತಮ್ಮ ತೀರ್ಪಿನಲ್ಲಿ ‘ಪ್ರಧಾನಿ ಅವರ ವಿರುದ್ಧ ನಿಂದನೀಯ ಮಾತುಗಳನ್ನು ಹೇಳುವುದು ಅವಹೇಳನಕಾರಿ ಮಾತ್ರವಲ್ಲ ಬೇಜವಾಬ್ದಾರಿಯೂ ಆಗಿದೆ. ಸರ್ಕಾರದ ನೀತಿಗಳ ಬಗ್ಗೆ ಸಕಾರಾತ್ಮಕ ಟೀಕೆಗಳು ಸಮರ್ಥನೀಯ. ಆದರೆ ಸಾಂವಿಧಾನಿಕ ಹುದ್ದೆಗಳಲ್ಲಿ ಕುಳಿತಿರುವ ಜನರು ಆಡಳಿತದ ನಿರ್ಧಾರಗಳನ್ನು ಟೀಕಿಸುವಂತಿಲ್ಲ. ವಿಶೇಷವಾಗಿ ಅದು ಒಂದು ಗುಂಪಿಗೆ ಇಷ್ಟವಾಗಿಲ್ಲ ಎನ್ನುವ ಕಾರಣಕ್ಕೆ. ಶಾಲೆಯ ಆರೋಪಿಯೊಬ್ಬ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅದರ ವೀಡಿಯೋವನ್ನು ಅಪ್‌ಲೋಡ್ ಮಾಡಿದ ನಂತರ ಶಾಲೆಯಲ್ಲಿ ನಡೆದ ನಾಟಕವು ಮುನ್ನೆಲೆಗೆ ಬಂದಿದೆ ಎನ್ನುವುದನ್ನು ಹೈಕೋರ್ಟ್ ಹೇಳಿದೆ.

ಬೀದರ್ ನ ಶಾಹೀನ್ ಉರ್ದು ಮಾಧ್ಯಮ ಪ್ರಾಥಮಿಕ ಶಾಲೆಯು, 4, 5 ಮತ್ತು 6ನೇ ತರಗತಿಯ ವಿದ್ಯಾರ್ಥಿಗಳು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಜನವರಿ 21, 2020ರಂದು ಶಾಲೆಯಲ್ಲಿ ನಾಟಕವನ್ನು ಪ್ರದರ್ಶಿಸಿದ್ದರು. ಈ ಕುರಿತು ಎವಿಬಿಪಿ ಕಾರ್ಯಕರ್ತ ನೀಲೇಶ್ ರಕ್ಷಾಲಾ ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಸೆಕ್ಷನ್ 504,505(2), 124ಎ (ದೇಶದ್ರೋಹ), 153ಎ ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ಅಥವಾ ಸಾರ್ವಜನಿಕರನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಅರ್ಜಿದಾರರು ಈ ಕ್ರಮ ಕೈಗೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಅದಕ್ಕಾಗಿಯೇ ಸೆಕ್ಷನ್ 124 ಎ (ದೇಶದ್ರೋಹ) ಮತ್ತು ಸೆಕ್ಷನ್ 505 (2) ಕ್ಕೆ ಸಾಕಷ್ಟು ಷರತ್ತುಗಳ ಕೊರತೆಯಿಂದಾಗಿ, ಈ ಸೆಕ್ಷನ್‌ಗಳನ್ನು ಹೇರುವುದು ನ್ಯಾಯಸಮ್ಮತವಲ್ಲ ಎಂದು ನ್ಯಾಯಾಲಯ ಹೇಳಿದೆ. ಮಕ್ಕಳನ್ನು ಸರ್ಕಾರದ ವಿರುದ್ಧ ಟೀಕಿಸುವುದಕ್ಕೆ ಬಳಸದೆ ದೂರವಿಡುವಂತೆಯೂ ಹೈಕೋರ್ಟ್ ತನ್ನ ಆದೇಶದಲ್ಲಿ ಶಾಲೆಗೆ ಸೂಚನೆ ನೀಡಿದೆ.