ಸೈಯದ್ ಬ್ಯಾರಿ ನೇತ್ರತ್ವದಲ್ಲಿ, MEIF ಸರ್ವೇ ತಂಡವು ವಿವಿದ ವಿದ್ಯಾ ಸಂಸ್ಥೆಗಳಿಗೆ ಬೇಟಿ; ಪ್ರಸ್ತಾವಿತ ಶಾಲಾ ನಿವೇಶನಗಳ ಬಗ್ಗೆ ವರದಿ ಸಂಗ್ರಹಿಸಿ,ಯೋಜನೆಗೆ ಸಿದ್ದತೆ.

ಕರಾವಳಿ

MEIF ತಂಡವು ಕಳೆದ ಅಧಿತ್ಯವಾರದಂದು ಮೂಡಬಿದ್ರೆಯ ಬೆಳುವಾಯಿಯಲ್ಲಿನ ಜಮಿಯತುಲ್-ಫಲಾಹ್ ಇದಕ್ಕೆ ಸಂಬಂದ ಪಟ್ಟ ನಿವೇಶನವನ್ನು ಪರಿಶೀಲಿಸಿ,ಈ ನಿವೇಶನದಲ್ಲಿ PUC ಮತ್ತು ವೃತ್ತಿಪರ ಶಿಕ್ಷಣದ ತರಗತಿಗಳನ್ನು ಆರಂಭಿಸುವುದು ಸೂಕ್ತವೆಂದು ಅಭಿಪ್ರಾಯ ಪಟ್ಟು,ಯೋಜನೆಯ ನೀಲಿ ನಕಾಶೆ ತಯಾರಿಸಲು ಸದ್ರಿ ಸಂಸ್ಥೆಗೆ ಸೂಚನೆ ನೀಡಿದರು. ಕರ್ನಿರೆಯ ಅಡುವೆ ಎಂಬಲ್ಲಿ ಪ್ರದೇಶದಲ್ಲಿ EXPERTISE ಸಂಸ್ಥೆಗೆ ಸೇರಿರುವ 10 ಎಕರೆ ಜಾಮೀನನ್ನು ಪರಿಶೀಲಿಸಿ,ಅ ಜಮೀನಿನಲ್ಲಿ CBSE ಪಠ್ಯ ಕ್ರಮದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲು ಮಾಲಕರಾದ ಅಶ್ರಫ್ ಕರ್ನಿರೆ ರವರು ಇಚ್ಚಿಸಿದ್ದು ಅದಕ್ಕಾಗಿ ಸಮಗ್ರ ನೀಲಿ ನಕಾಶೆಯನ್ನು ತಯಾರಿಸಿ ಕಾರ್ಯಪ್ರವರ್ತರಾಗುವುದು ಎಂದು ಅಭಿಪ್ರಾಯ ಪಟ್ಟರು.

ಕನ್ನಂಗಾರಿನಲ್ಲಿ ಶಿವಮೊಗ್ಗದ NATIONAL ಸಂಸ್ಥೆಗೆ ಸಂಬಂದ ಪಟ್ಟ ಜಮೀನನ್ನು ಪರಿಶೀಲಿಸಿದ ತಂಡ ನಂತರ ಜೋಕಟ್ಟೆ ಅಂಜುಮನ್ ವಿದ್ಯಾ ಸಂಸ್ಥೆಯನ್ನು ಸಂದರ್ಶಿಸಿ,ಸದ್ರಿ ಸಂಸ್ಥೆ ತಯಾರಿಸಿದ್ದ 18 ಶಾಲಾ ಕೊಠಡಿಗಳ ಯೋಜನೆಯನ್ನು ಪರಿಶೀಲಿಸಿ,ಸದ್ರಿ ಯೋಜನೆಯ ಅರ್ಧ ಭಾಗವನ್ನು (9 ಕೊಠಡಿ) ಅಲ್ ಮುಝೈನ್ ಸಂಸ್ಥೆಯ ಮಾಲಕರಾದ ಝಕರೀಯ ಜೋಕಟ್ಟೆ ರವರು ರಚಿಸಿಕೊಡುವುದಾಗಿ ಭರವಸೆ ನೀಡಿದರು.ಉಳಿದ ಭಾಗವನ್ನು ಸ್ಥಳೀಯವಾಗಿ ಇತರರ ಸಹಕಾರದೊಂದಿಗೆ ಪೂರ್ಣಗೊಳಿಸುವುದಾಗಿ ಅಂಜುಮಾನ್ ವಿದ್ಯಾ ಸಂಸ್ಥೆಯ ಪದಾಧಿಕಾರಿಗಳು ವಹಿಸಿಕೊಂಡರು.

ವಿವಿದ ಸಂಸ್ಥೆಗಳಿಗೆ ಬೇಟಿ ನೀಡಿದ MEIF ನಿಯೋಗದಲ್ಲಿ ಸೈಯ್ಯದ್ ಬ್ಯಾರಿ,ಮೂಸಬ್ಬ ಬ್ಯಾರಿ,ಬಿ.ಎ ನಝೀರ್,ಸಬಿಹ ಖಾಝಿ,ಬಿ.ಎ ಇಕ್ಬಾಲ್,ಮುಹಮ್ಮದ್ ಬ್ಯಾರಿ,(Ex.ACF),ಝಕರೀಯ ಜೋಕಟ್ಟೆ, ಅಶ್ರಫ್ ಕರ್ನಿರೆ, ಅಂಜುಮನ್ ವಿದ್ಯಾ ಸಂಸ್ಥೆಯ ಪದಾಧಿಕಾರಿಗಳು, ಜಮಿಯತುಲ್ ಫಲಾಹ್ ದ.ಕ ಇದರ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.