ಪುತ್ತೂರು: ಪತ್ರಕರ್ತನ ಮೇಲೆ ದಾಳಿ ನಡೆಸಿ, ಮೊಬೈಲ್ ಪುಡಿಗೈದ ಪ್ರಕರಣ: ಜರ್ನಲಿಸ್ಟ್ ಯೂನಿಯನ್ ಪ್ರತಿಭಟನೆ ಎಚ್ಚರಿಕೆ

ಕರಾವಳಿ

ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಅಪಾಯಕಾರಿ ರೀತಿಯಲ್ಲಿ ಮರದ ಕೊಂಬೆಗಳನ್ನು ತೆರವುಗೊಳಿಸುವ ಮೆಸ್ಕಾಂ ಸಿಬ್ಬಂದಿಗಳ ಚಿತ್ರಿಕರಿಸುತ್ತಿದ್ದ ಪತ್ರಕರ್ತರ ಮೊಬೈಲನ್ನು ಕಸಿದು ಹಾನಿಗೊಳಿಸಿದ ಘಟನೆ ಪುತ್ತೂರು ಕಸಬಾ ನಗರ ಠಾಣಾ ಬಪ್ಪಳಿಗೆಯ ಗುಂಪಕಲ್ಲು ಎಂಬಲ್ಲಿ ನಡೆದಿದೆ.

ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ ವಾಹಿನಿಯ ವರದಿಗಾರ ನಿಶಾಂತ್ ಬಿಲ್ಲಂಪದವು ಅವರ ಮೇಲೆ ಹಲ್ಲೆ ನಡೆದಿದೆ.ಜು .15 ರ ಸಂಜೆ ಬಪ್ಪಳಿಗೆಯಲ್ಲಿರುವ ಗುಂಪಕಲ್ಲು ಅಂಬಿಕಾ ವಿದ್ಯಾಸಂಸ್ಥೆಯ ಸಮೀಪ ಪುತ್ತೂರಿನಿಂದ ಬಲ್ನಾಡು ತೆರಳುವ ರಸ್ತೆಯಲ್ಲಿ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತಿತ್ತು. ಮೆಸ್ಕಾಂ ನಿಂದ ಈ ಕೆಲಸದ ಗುತ್ತಿಗೆ ಪಡೆದಿರುವ ಕಂಟ್ರಾಕ್ಟರ್ ದಾರನ ಕಾರ್ಮಿಕರು ಈ ಕೆಲಸ ಮಾಡುತಿದ್ದರು. ಆದರೇ ಅವರ್ಯಾರು ಮೆಸ್ಕಾಂ ನ ಮಾನದದಂಡದ ಪ್ರಕಾರ ಅಗತ್ಯ ಸುರಕ್ಷತಾ ಸಾಧನಗಳನ್ನು ಬಳಸಿರಲಿಲ್ಲ. ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿ ವಿದ್ಯುತ್‌ ತಂತಿಯ ಪಕ್ಕ ಕೆಲಸದಲ್ಲಿ ನಿರತರಾಗಿದ್ದರು.

ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ ವಾಹಿನಿಯ ವರದಿಗಾರ ನಿಶಾಂತ್ ಬಿಲ್ಲಂಪದವು ವರದಿ ಮಾಡುತ್ತಿರುವ ಕುರಿತು ಮೆಸ್ಕಾಂ ಹಿರಿಯ ಅಧಿಕಾರಿಗಳಿಗೆ ತಿಳಿಸಿ ವಿಡಿಯೋ ಚಿತ್ರಿಕರಿಸಿದ್ದಾರೆ. ಆಗಲೇ ಮೆಸ್ಕಾಂ ಸಿಬ್ಬಂದಿಗಳಿಗಬ್ಬರು ಕ್ರೇನ್ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಓರ್ವ ಸ್ಥಳೀಯ ವ್ಯಕ್ತಿ ನಿಶಾಂತ್ ಬಿಲ್ಲಂಪದವು ಅವರ ಕೈಯಿಂದ ಮೊಬೈಲ್ ಕಸಿದು ಹಾನಿಗೊಳಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಜರಗಿಸದೇ ಇದ್ದಲ್ಲಿ ಎಲ್ಲಾ ಪತ್ರಕರ್ತರ ಸಂಘವನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ಪ್ರಧಾನ ಕಾರ್ಯದರ್ಶಿ ಸಂತೋಷ್ ಮೊಟ್ಟೆತ್ತಡ್ಕ ಮತ್ತು ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.