ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಹೆಚ್ ಸಿ.ಪ್ರಶಾಂತ ಕೆ ಎನ್ ರವರು 1997 ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡವರು.ಈ ಹಿಂದೆ ಕೊಲ್ಲೂರು ಪೊಲೀಸ್ ಠಾಣೆ ಯಲ್ಲಿ ಕರ್ತವ್ಯ ನಿರ್ವಹಿಸಿ ಈಗ ಕಾಕ ೯ಳ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದವರು
ಸುಮಾರು 15 ವರ್ಷಗಳಿಂದ ಸಕ್ಕರೆ ಖಾಯಿಲೆ ಯಿಂದ ಬಳಲಿಕೊಂಡಿದ್ದವರು. ದಿನಾಂಕ. 9/7/2023 ರಿಂದ ಆಕಸ್ಮಿಕ ರಜೆಯಲ್ಲಿದ್ದವರು ದಿನಾಂಕ. 15/07/2023 ರಂದು ರಾತ್ರಿ ಮನೆಯಲ್ಕಿ ಊಟ ಮಾಡಿಕೊಂಡ ಬಳಿಕ ಮಲಗಿದ್ದವರು ರಾತ್ರಿ 10 ಗಂಟೆಯಿಂದ ದಿನಾಂಕ 16/07/2023 ಬೆಳಿಗ್ಗೆ 05:15 ಗಂಟೆಯ ಮದ್ಯಾವದಿಯಲ್ಲಿ ಶುಗರ್ ಕಾಯಿಲೆ ಬಗ್ಗೆ ಮನನೊಂದು ಮನೆಯ ಹಿಂಬದಿ ತಗಡು ಶೀಟ್ ಮಾಡಿಗೆ ನೈಲಾನ್ ಹಗ್ಗ ಕಟ್ಡಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಮೃತರಿಗೆ ಸುಮಾರು 49 ವರ್ಷ ವಯಸ್ಸಾಗಿದ್ದು. ಅವಿವಾಹಿತ ರಾಗಿರುತ್ತಾರೆ. ಒಬ್ನರು ಅಕ್ಕ ಮತ್ತು ಮೂರು ಜನ ತಂಗಿಯಂದಿರು ಹಾಗೂ ತಾಯಿ ಜೊತೆ ಇದ್ದು ಅಕ್ಕ ಹಾಗೂ ತಂಗಿಯಂದಿರಿಗೆ ಮದುವೆ ಆಗಿರುತ್ತದೆ.ಮೃತ ಪ್ರಶಾಂತ್ ರವರು ತಮಗಿರುವ ವೀಪರೀತ ಮಧುಮೇಹ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆಯೇ ಹೊರತು ಮೃತರ ಮರಣದಲ್ಲಿ ಬೇರೆ ಸಂಶಯ ಇರುವುದಿಲ್ಲ ಎಂದು ಮೃತರ ತಾಯಿ ಮೋಹಿನಿರವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.