ಸುರತ್ಕಲ್ – ಬಿ.ಸಿ ರೋಡ್ ಮರಣದ ಹೆದ್ದಾರಿ.ರಸ್ತೆ, ಚರಂಡಿಯಂತಹ ಸಣ್ಣ ವಿಚಾರಗಳ ಕುರಿತು ಪ್ರಶ್ನಿಸಬೇಡಿ…

ಕರಾವಳಿ

ಮಳೆಗಾಲದ ಮೊದಲ ತಿಂಗಳ ಮಳೆಗೆ ಮಂಗಳೂರಿನ ಬಿ ಸಿ ರೋಡ್ ನಿಂದ ಸುರತ್ಕಲ್ ಟೋಲ್ ಗೇಟ್ ವರಗಿನ ರಾಷ್ಟ್ರೀಯ ಹೆದ್ದಾರಿ ಪೂರ್ತಿ ಗುಂಡಿಗಳು ಬಿದ್ದಿವೆ.ಕೆಲವು ಗುಂಡಿಗಳಂತೂ ಅರ್ಧ ಅಡಿ ಆಳ, ಕೆಲವು ಮೀಟರ್ ಗಟ್ಟಲೆ ಅಗಲ. ಮಳೆ ಸುರಿಯುತ್ತಿರುವಾಗಲಂತೂ ರಸ್ತೆಯಲ್ಲಿ ನೀರು ತುಂಬಿ ಗುಂಡಿಗಳು ಗೋಚರಿಸುವುದೇ ಇಲ್ಲ. ಕೆಲವು ಗುಂಡಿಗಳು ದಿಢೀರಾಗಿ ಎದುರುಗೊಂಡು ವಾಹನ ಸವಾರರನ್ನು ಕಕ್ಕಾಬಿಕ್ಕಿಯಾಗಿಸುತ್ತದೆ.

ದ್ವಿಚಕ್ರ ವಾಹನ ಸವಾರರಂತೂ ಈ ಗುಂಡಿಗಳನ್ನು ಗಮನಿಸದಿದ್ದರೆ ಕೆಳಗೆ ಬೀಳಲೇಬೇಕು. ಕಾರು, ಟ್ರಕ್ಕುಗಳು ಗುಂಡಿಗೆ ಬಿದ್ದ ರಭಸಕ್ಕೆ ರಸ್ತೆಯಲ್ಲೆ ಕೆಟ್ಟು ನಿಲ್ಲುತ್ತಿವೆ. ಲಕ್ಷಾಂತರ ರೂಪಾಯಿ ಖರ್ಚು ಬೇರೆ. ಒಟ್ಟಾರೆ ಸುರತ್ಕಲ್ ಬಿ ಸಿ ರೋಡ್ ರಾಷ್ಟ್ರೀಯ ಹೆದ್ದಾರಿ ಸಂಚಾರ ಈಗ ಮೃತ್ಯುವಿನೊಂದಿಗೆ ಸರಸ. ಅದೀಗ ಮರಣದ ಹೆದ್ದಾರಿ. ಇನ್ನೂ ಮೂರು ತಿಂಗಳ ಮಳೆಗಾಲ ಬಾಕಿ ಇದೆ ಅಂದಾಗ ಆಗುವ ಅನಾಹುತ ಅಂದಾಜಿಗೆ ನಿಲುಕದು.

ಇಲ್ಲಿ ಹಾಕಿರುವ ಗುಂಡಿಗಳ ಚಿತ್ರ ಪಣಂಬೂರು, ಬೈಕಂಪಾಡಿ ನಡುವಿನ ಒಂದು ಕಿ ಮೀ ಅಂತರದ್ದು ಮಾತ್ರ. ಒಟ್ಟು ಮೂವತ್ತೇಳು ಕಿ ಮೀ ಉದ್ದದ ಈ ರಾಷ್ಟ್ರೀಯ ಹೆದ್ದಾರಿಯ ಒಟ್ಟು ದುರವಸ್ಥೆ ಅಂದಾಜಿಗೆ ನಿಲುಕದು. ಇಷ್ಟು ಅನಾಹುತ, ಹೆದ್ದಾರಿಯಲ್ಲೇ ಮೃತ್ಯು ಕೂಪ ನಿರ್ಮಾಣಗೊಂಡಿದ್ದರೂ ಆಡಳಿತ ವಿರೋಧಿ ಅಲೆಯನ್ನೂ ಎದುರಿಸಿ ದೊಡ್ಡ ಅಂತರದಲ್ಲಿ ಗೆದ್ದ ಬಿಜೆಪಿ ಶಾಸಕರುಗಳು ಸಣ್ಣ ಶಬ್ದವನ್ನೂ ಎತ್ತಿಲ್ಲ.

ಅವರು ರಸ್ತೆ, ಚರಂಡಿಯಂತಹ ಸಣ್ಣ ವಿಚಾರಗಳ ಕುರಿತು ಪ್ರಶ್ನಿಸಬೇಡಿ…. ಎಂದು ಹೇಳಿಯೇ ಚುನಾವಣೆ ಗೆದ್ದವರು. ಅದರಿಂದ ಅವರು ಹೆದ್ದಾರಿ ಮೃತ್ಯು ಗುಂಡಿಗಳ ಕುರಿತು ಅವರು ಮಾತಾಡುವುದಿಲ್ಲ. ಅದೇನಿದ್ದರೂ ಜನಪರ ಸಂಘಟನೆಗಳ ಕೆಲಸ ಅಂತಾಗಿದೆ. ಈಗ ಮತ್ತೆ ಹೋರಾಟಕ್ಕಿಳಿಯುವುದೇ ನಮ್ಮ ಮುಂದಿರುವ ದಾರಿ.

ಮುನೀರ್ ಕಾಟಿಪಳ್ಳ
ಸಂಚಾಲಕರು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ