ಬಾಂಬೆ, ಕಲ್ಕತ್ತಾ, ಬೆಂಗಳೂರು ನಂತಹ ಮಾಯಾನಗರಿಯಲ್ಲಿ ತಲೆ ಎತ್ತಿ ಕಾರ್ಯಾಚರಿಸುತ್ತಿದ್ದ ಅಕ್ರಮ ಮಸಾಜ್ ಸೆಂಟರ್ ಗಳು ಇದೀಗ ಸೈಲೆಂಟಾಗಿಯೇ ಮಂಗಳೂರಿಗೂ ವಕ್ಕರಿಸಿದೆ.ಮಂಗಳೂರು ನಗರ ಬೆಳೆದಂತೆ ಅನೇಕ ಅಕ್ರಮ, ಅನೈತಿಕ ಚಟುವಟಿಕೆಗಳು ಸಹ ಹೆಚ್ಚಾಗಿದೆ. ಯುನಿಸೆಕ್ಸ್ ಸೆಲೂನ್, ಬ್ಯೂಟಿ ಸ್ಪಾ ಹೆಸರಿನಲ್ಲಿ ಮಸಾಜ್ ಸೆಂಟರ್ ಗಳು ನಗರದ ಹಲವೆಡೆ ನಡೆಯುತ್ತಿದೆ.
ಮೆಲ್ನೋಟಕ್ಕೆ ಅದೊಂದು ಮಜ್ ಬೂತಾದ ಕಟ್ಟಡ. ಒಳಹೊಕ್ಕರೆ ಹೆಣ್ಣು ಗಂಡುಗಳ ಕಾಮದೋಕುಳಿಯಾಟದ ರುದ್ರ ರಮಣೀಯ ದೃಶ್ಯಗಳು. ಆದೇನೂ ಮಸಾಜ್ ಸೆಂಟರ್ ಗಳೋ ಮಜಾ ಕೇಂದ್ರಗಳೋ ಎಂಬ ಅನುಮಾನ. ಕೆಲವೊಂದು ಕಡೆ ಪೊಲೀಸರಿಗೆ ಚಳ್ಳೆಹಣ್ಣು ಹಣ್ಣು ತಿನ್ನಿಸಿ ಬ್ರೂಥಲ್ ದಂಧೆ ಆರಂಭಿಸಿದ್ದಾರೆ ಪಾಖಂಡಿಗಳು.
ಮಂಗಳೂರಿನ ಮಸಾಜ್ ಸೆಂಟರ್ ನ ಒಳಗಡೆ ಕಲರ್ ಕಲರ್ ಹುಡ್ಗೀರು ನುಗ್ಗುತ್ತಿದ್ದಾರೆ. ಅವರ ಹಿಂದಿಂದೆ ಮಾಡ್ರನ್ ಗಂಡಸರು, ಚಿಗುರು ಮೀಸೆ ಮೂಡದ ಯುವಕರು, ಶ್ರೀಮಂತರು, ಪುಡಾರಿಗಳು, ಷೋಕಿಗಳು, ವಿಕೃತರು ದಣಿವಾರಿಸಿಕೊಳ್ಳಲು ನುಗ್ಗುತ್ತಿದ್ದಾರೆ. ಏನಪ್ಪಾ ವಿಶೇಷ ಅಂತ ಮಸಾಜ್ ಸೆಂಟರ್ ಒಳಗೆ ತಲೆ ಹಾಕಿದಿರೋ ಕಿಲಕಿಲ, ರೋಮ್ಯಾನ್ಸ್, ಮುಲುಕಾಟದ ಸದ್ದುಗಳು ಕಿವಿಗಪ್ಪಳಿಸುತ್ತದೆ. ಹುಡುಗನೊಬ್ಬ ಬಟ್ಟೆ ಬಿಚ್ಚಿ ಬೆತ್ತಲಾಗಿ ಮಲಗಿರುತ್ತಾನೆ. ಹುಡುಗಿಯೊಬ್ಬಳು ಉಬ್ಬು ತಗ್ಗುಗಳನ್ನು ಕಾಣುವಂತೆ ಅರ್ಧಂಬರ್ಧ ಡ್ರೆಸ್ ಹಾಕಿಕೊಂಡು ಹುಡುಗನ ಬಾಡಿಯ ಮೇಲೆ ಕೈಯಾಡಿಸುತ್ತಾರೆ. ಹುಡುಗ ಮಾತ್ರ ನಿಟ್ಟುಸಿರು ಬಿಡುತ್ತಾ ಸುಖ ಪಡೆಯುತ್ತಾನೆ. ಹುಡುಗಿಯ ಕೈ ಹುಡುಗನ ತಾಗಬಾರದ ಜಾಗಕ್ಕೆ ತಾಗಿದರಂತೂ ಅಲ್ಲೊಂದು ಜಂಗಿ ಕುಸ್ತಿ ನಡೆಯುತ್ತದೆ. ಅಪ್ಪಟ ಅಲ್ಲಿ ಕಾಮಕೇಳಿಯಾಟದ ದೃಶ್ಯಗಳು ನಡೆಯುತ್ತದೆ
ಇದು ಮಂಗಳೂರಿನ ಬಹುತೇಕ ಯುನಿಸೆಕ್ಸ್ ಸೆಲೂನ್, ಬ್ಯೂಟಿ ಸ್ಪಾ, ಫ್ಯಾಮಿಲಿ ಸೆಲೂನ್ ನೇಮ್ ಬೋರ್ಡ್ ಹಾಕಿಕೊಂಡು ನಡೆಸುವ ಅಕ್ರಮ ಚರ್ಮದಂಧೆ. ಕೆಲವು ವರ್ಷಗಳ ಹಿಂದೆ ನಗರದ ಹಲವೆಡೆ ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದ ಮಸಾಜ್ ಸೆಂಟರ್ ಗೆ ಬೀಗ ಬಿದ್ದ ಮೇಲೆ ಇದೀಗ ವೆರೈಟಿ ವೆರೈಟಿ ಹೆಸರಿನ ಮೂಲಕ ಬಾಗಿಲು ತೆಗೆದು ಯಾವುದೇ ರೀತಿಯ ಅನುಮತಿ, ಪರವಾನಿಗೆ ಏನನ್ನು ಪಡೆಯದೆ ಲೋಕಲ್ ಪೊಲೀಸ್ ಸ್ಟೇಷನ್ ಸೆಟ್ ಮಾಡಿಕೊಂಡು ಅಕ್ರಮ ಚಟುವಟಿಕೆಗಳಿಗೆ ಇಳಿದಿದ್ದಾರೆ.
ತೆರೆಮರೆಯಲ್ಲಿ ಬ್ಯೂಟಿ ಪಾರ್ಲರ್, ಫ್ಯಾಮಿಲಿ ಸೆಲೂನ್ ಹೆಸರಿನಲ್ಲಿ ಮಸಾಜ್ ಪಾರ್ಲರ್ ಗಳು ಗುಪ್ತವಾಗಿ ನಡೆಯುತ್ತಿದೆ. ಮಸಾಜ್ ಪಾರ್ಲರ್ ಗಳೆಂದರೆ ಕೇವಲ ಅದು ಮಸಾಜ್ ಗೆ ಸೀಮಿತವಾಗಿಲ್ಲ. ಇದರ ಸುತ್ತ ದೊಡ್ಡ ಮಾಫಿಯಾ ದಂಡೆ ಇದೆ. ಧೋ ನಂಬರಿನ ಪಾಖಂಡಿಗಳು ಇದ್ದಾರೆ. ಮಸಾಜ್ ಸೆಂಟರ್ ಗಳಲ್ಲಿ ಗುಪ್ತ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಯುವಕ ಯುವತಿಯ ಲಿಪ್ ಕಿಸ್ಸಿಂಗ್ ನಿಂದ ಹಿಡಿದು ಕಾಮರಸ ಚಿಮ್ಮುವ ಘಟನಾವಳಿಗಳನ್ನು ಚಿತ್ರಿಸಿ ನೀಲಿ ಚಿತ್ರವಾಗಿ ತಯಾರಿಸಿ ವಿದೇಶಕ್ಕೆ ರವಾನೆ ಮಾಡಲಾಗುತ್ತದೆ. ಬ್ಲೂ ಫಿಲಂ ದಂಧೆಯ ತಲೆ ಹಿಡುಕರು ಪಾರ್ಲರ್ ಸುತ್ತ ಹೊಂಚು ಹಾಕುತ್ತಿದ್ದಾರೆ. ಕರೆವೆಣ್ಣುಗಳ ವ್ಯಾಪಾರ ನಡೆಯುತ್ತಿದೆ. ಹಗಲು ಹೊತ್ತು ಬಾಡಿ ಮಸಾಜ್ ಗೈದರೆ, ರಾತ್ರಿ ಹೊತ್ತು ಪ್ರತಿಷ್ಠಿತ ಹೋಟೆಲ್ ಗಳಿಗೆ ಶ್ರೀಮಂತರು, ಪುಡಾರಿಗಳ ದೇಹ ತಣಿಸಲು ಮಾರಾಟವಾಗುತ್ತಾರೆ. ಸುಮಾರು 2000 ದಿಂದ 5000 ತೆತ್ತು ಮಸಾಜ್ ಪಾರ್ಲರ್ ಒಳಗೆ ನುಗ್ಗಿದ್ದರೆ ಎಲ್ಲ ರೀತಿಯ ಸುಖ ಅನುಭವಿಸಿ ಹೊರ ಬರಬಹುದಾಗಿದೆ. ಮಂಗಳೂರಿನಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮ ದಂಧೆಗಳಿಗಿಂತ ಮಸಾಜ್ ದಂಧೆಗಳು ಸೇಫಾಗಿ ನಡೆಯುತ್ತದೆ.
ಯಾವುದೇ ರೀತಿಯ ಅನುಮತಿ ಇಲ್ಲದೆ ಇಂತಹ ಚಟುವಟಿಕೆ ನಡೆಯುತ್ತಿರುವುದರ ಬಗ್ಗೆ ಯಾವುದೇ ಕಾನೂನು ಕ್ರಮ ಜರಗುತ್ತಿಲ್ಲ.!? ಇಂತಹ ಅಕ್ರಮ ಮಸಾಜ್ ಸೆಂಟರ್ ಗಳು ಮಂಗಳೂರಿನ ಹಲವೆಡೆ ತಲೆಯೆತ್ತಿರುವುದು ಮಂಗಳೂರಿಗೆ ಕಪ್ಪು ಚುಕ್ಕೆಯಾಗಿದೆ. ಮಂಗಳೂರು ನಗರದ ಗಲ್ಲಿ ಗಲ್ಲಿಗಳಲ್ಲಿ ಅನೇಕ ಅಕ್ರಮ ಮಸಾಜ್ ಸೆಂಟರ್ ಗಳು ರಾಜಾರೋಷವಾಗಿ ನಡೆಯುತ್ತಿದೆ. ದೂರು ಬಂದಾಗ ಸಂಬಂಧಪಟ್ಟ ಇಲಾಖೆ ಎಚ್ಚೆತ್ತು ದಾಳಿ ಮಾಡುತ್ತಾರೆ ನಂತರ ಮತ್ತೆ ಇಂತಹ ಚಟುವಟಿಕೆಗಳು ಮುಂದುವರಿಯುತ್ತವೆ.ನಿಷ್ಠಾವಂತ ಪೊಲೀಸ್ ಅಧಿಕಾರಿ ಎಂದು ಹೆಸರುಗಳಿಸಿರುವ ಮಂಗಳೂರು ನಗರದ ಕಮೀಷನರ್ ಕುಲ್ ದೀಪ್ ಕುಮಾರ್ ಜೈನ್ ರವರು ಇತ್ತ ಗಮನ ಹರಿಸಬೇಕಾಗಿದೆ.