ಅಪಘಾತ ಪ್ರಕರಣವೊಂದರ ಆರೋಪಿ ಬಸ್ ಚಾಲಕ ದೋಷಮುಕ್ತ; ವಾದ ಮಂಡಿಸಿದ ನ್ಯಾಯವಾದಿ ಮಹೇಶ್ ಕಜೆ

ರಾಜ್ಯ

2015ರ ಇಸವಿಯಲ್ಲಿ ಉದನೆ ಪೇಟೆ ಎಂಬಲ್ಲಿ ಗುಂಡ್ಯ ಕಡೆಯಿಂದ ಧರ್ಮಸ್ಥಳ ಕಡೆಗೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೆಎಸ್‌ಆರ್‌ಟಿಸಿ ಬಸ್, ಧರ್ಮಸ್ಥಳ ಕಡೆಯಿಂದ ಸುಬ್ರಮಣ್ಯ ಕಡೆಗೆ ಬರುತ್ತಿದ್ದ ಒಮ್ನಿ ಕಾರೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ತೀವ್ರ ತರವಾದ ಗಾಯ ಉಂಟಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.ಇತರ ಪ್ರಯಾಣಿಕರಿಗೂ ಗಂಭೀರ ಗಾಯವಾಗಿದ್ದು.ಘಟನೆಗೆ ಚಾಲಕನ ಅತೀಯಾದ ವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಸರಕಾರಿ ಬಸ್ ಚಾಲಕ ಯಲ್ಲಪ್ಪ ದಳವಾಯಿ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ,ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.

ಸರಿ-ಸುಮಾರು 21 ಸಾಕ್ಷಿಗಳ ವಿಚಾರಣೆ ನಡೆಸಿ,ಸುಮಾರು 21 ದಾಖಲೆಗಳನ್ನು ತಮ್ಮ ಪರವಾಗಿ ಗುರುತಿಸಿದ್ದು,ಸದ್ರಿ ಪ್ರಕರಣಕ್ಕೆ ಸಂಬಂಧಿಸಿ ಸರಕಾರಿ ಬಸ್ ಚಾಲಕನ ಪರವಾಗಿ ಪುತ್ತೂರಿನ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಅವರ ವಾದವನ್ನು ಆಲಿಸಿದ ಹೆಚ್ಚುವರಿ ಸಿವಿಲ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದ ನ್ಯಾಯಾಧೀಶರಾದ ಶಿವಣ್ಣ ಎಚ್.ಆರ್‌ರವರು ಆರೋಪಿ ಯಲ್ಲಪ್ಪ ದಳವಾಯಿರವರನ್ನು ಪ್ರಕರಣದಿಂದ ದೋಷಮುಕ್ತಿಗೊಳಿಸಿ ಆದೇಶ ನೀಡಿದ್ದಾರೆ.