ಮಂಗಳೂರು:ಚೂರಿ ಇರಿತ ಪ್ರಕರಣ, ಆರೋಪಿಗೆ ಜಾಮೀನು

ಕರಾವಳಿ

ಫ್ರೀ ಫೈರ್ ಗೇಮ್‌ನಲ್ಲಿ ಸೋಲಿಸಿದ ವಿಚಾರದಲ್ಲಿ ವ್ಯಕ್ತಿಯೋರ್ವರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರತ್ಯುಷ್ ಸಾಲಿಯಾನ್ ಎಂಬವರು ಆರೋಪಿ ಸಂಜಯ್ ಪೂಜಾರಿ ಎಂಬವರನ್ನು ಮೊಬೈಲ್‌ನಲ್ಲಿ ಫ್ರೀ ಫೈರ್ ಆನ್‌ಲೈನ್‌ ಗೇಮ್‌ನಲ್ಲಿ ಸೋಲಿಸಿದ ವಿಚಾರವಾಗಿ ಈ ಕೃತ್ಯ ಎಸೆಯಲಾಗಿತ್ತು.

ನಂದಿಗುಡ್ಡೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಪ್ರತ್ಯುಷ್ ರವರನ್ನು ಆರೋಪಿ ಸಂಜಯ್ ಪೂಜಾರಿ ತಡೆದು ನಿಲ್ಲಿಸಿ ಚೂರಿಯಿಂದ ತಿವಿದು ಗಾಯಗೊಳಿಸಿದ್ದರೆಂದು
ದೂರಿನಲ್ಲಿ ತಿಳಿಸಲಾಗಿತ್ತು.ಮೇ.17 ರಂದು ಪ್ರಕರಣ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.ಆರೋಪಿಯ ಪರವಾಗಿ ನ್ಯಾಯವಾದಿ ಮಹೇಶ್ ಕಜೆ ಮತ್ತು ಮಹೇಶ್ ಜೋಗಿರವರು ವಾದಿಸಿದ್ದರು.