ಬಣ ರಾಜಕೀಯಕ್ಕೆ ಬಿತ್ತು ಬ್ರೇಕ್.! ಬೆಳ್ತಂಗಡಿಯ ಇಬ್ಬರು ಕಾಂಗ್ರೆಸ್ ನಾಯಕರಿಗೆ ಗೇಟ್ ಪಾಸ್

ಕರಾವಳಿ

ಬೆಳ್ತಂಗಡಿ:ಕಾಂಗ್ರೆಸ್ ಪಕ್ಷದ ಗೌರವವನ್ನು ಬೀದಿ ಪಾಲು ಮಾಡಿ,ಬಣ ರಾಜಕೀಯದಲ್ಲಿ ತೊಡಗಿ,ಬೆಳ್ತಂಗಡಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಗಲಾಟೆ ವಿಚಾರ ಕೆಪಿಸಿಸಿಗೆ ತಲುಪಿ, ಇದನ್ನು ಗಂಭೀರವಾಗಿ ಪರಿಗಣಿಸಿದ ಕೆಪಿಸಿಸಿ ಅಧ್ಯಕ್ಷರು ಬೆಳ್ತಂಗಡಿಯ ಇಬ್ಬರು ನಾಯಕರಿಗೆ ಗೇಟ್ ಪಾಸ್ ನೀಡುವ ಮೂಲಕ ಬೆಳ್ತಂಗಡಿಯ ಬಣ ರಾಜಕೀಯಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಇಬ್ಬರಿಗೆ ಗೇಟ್ ಪಾಸ್ ಕೊಟ್ಟು ನೂತನ ಅಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಬಣ ರಾಜಕೀಯಕ್ಕೆ ಬ್ರೇಕ್ ಹಾಕಿದ್ದಾರೆ‌.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಶೈಲೇಶ್ ಕುಮಾರ್ ರವರಿಗೆ ಕೊಕ್ ಕೊಟ್ಟು ಪೆರಾಡಿ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸತೀಶ್ ಕೆ.ಕಾಶಿಪಟ್ನ ರವರನ್ನು,ಗ್ರಾಮೀಣ ಸಮಿತಿ ಅಧ್ಯಕ್ಷ ರಂಜನ್ ಜಿ.ಗೌಡರನ್ನು ಬದಲಾಯಿಸಿ,ಅವರ ಬದಲಿಗೆ ನಾಗೇಶ್ ಕುಮಾರ್ ಗೌಡ ಅವರನ್ನು ಕೆಪಿಸಿಸಿ ನೇಮಕ ಮಾಡುವ ಮೂಲಕ ಉಳಿದವರಿಗೆ ಶಾಕ್ ನೀಡಿದೆ.