ಸಚಿವ ಜಮೀರ್ ಅಹ್ಮದ್ ಕಾರ್ಯವೈಖರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮೆಚ್ಚುಗೆ

ರಾಜ್ಯ

ಸಚಿವರ ವಿರುದ್ಧ ಆಕ್ರೋಶ ಹೊರತಾಗಿಯೂ ವಕ್ಫ್ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ಸಚಿವ ಜಮೀರ್ ಅಹ್ಮದ್ ಖಾನ್ ಕಾರ್ಯವೈಖರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿ ಎಲ್ ಪಿ) ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಯಾವುದೇ ಶಾಸಕರು ಭೇಟಿಯಾದರೂ ಅವರು ಅತ್ಯಂತ ಗೌರವ ಹಾಗೂ ಸೌಜನ್ಯದಿಂದ ನಡೆಸಿಕೊಳ್ಳುತ್ತಾರೆ. ಅಗತ್ಯ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡಿಸಿ ಕೊಡುತ್ತಾರೆ. ಈ ವಿಚಾರದಲ್ಲಿ ಜಮೀರ್ ಮಾದರಿ ಎಂದು ಹಿರಿಯ ಶಾಸಕ ಸಿ.ಎಸ್. ನಾಡಗೌಡ ಹೇಳಿದ್ದಾರೆ.ಇದಕ್ಕೆ ಕಾಂಗ್ರೆಸ್ ನ ಇತರ ಶಾಸಕರೂ ದನಿಗೂಡಿಸಿದರು.ಜಮೀರ್ ಅಹ್ಮದ್ ಕಾರ್ಯವೈಖರಿಯನ್ನು ಶಾಸಕ ಕಂಪ್ಲಿ ಗಣೇಶ್ ಕೂಡ ವಿಶೇಷವಾಗಿ ಪ್ರಸ್ತಾಪಿಸಿದರು ಎನ್ನಲಾಗಿದೆ.