ಅಪ್ರಾಪ್ತ ಯುವತಿಗೆ ಲೈಂಗಿಕ ಕಿರುಕುಳ: ಬಿಜೆಪಿ ಮುಖಂಡನಿಗೆ ಜಾಮೀನು ರಹಿತ ವಾರಂಟ್

ರಾಷ್ಟ್ರೀಯ

ಉತ್ತರ ಪ್ರದೇಶ: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಿಜೆಪಿ ಸ್ಥಳೀಯ ಮುಖಂಡರೊಬ್ಬರ ವಿರುದ್ಧ ಲೈಂಗಿಕ ಅಪರಾಧಗಳ ತಡೆ ಕಾಯ್ದೆ ಪೋಕ್ಸೊ ಅಡಿಯ ವಿಶೇಷ ನ್ಯಾಯಾಲಯ ಜಾಮೀನು ರಹಿತ ಬಂಧನದ ಆದೇಶ ಹೊರಡಿಸಿದೆ

ಅಪ್ರಾಪ್ತ ಯುವತಿಯು ನ್ಯಾಯವಾದಿ ರಮೇಶ್‌ ಚಂದ್‌ ಗುಪ್ತಾ ಎಂಬುವರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.ಗುಪ್ತಾ ಅವರ ಸಂಬಂಧಿ ಮತ್ತು ಬಿಜೆಪಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ್ ಗುಪ್ತಾ ಮಾರ್ವಾಡಿ ಹಾಗೂ ಉತ್ತರಪ್ರದೇಶ ಗ್ರಾಹಕರ ಸಹಕಾರ ಘಟಕದ ಉಪಾಧ್ಯಕ್ಷ ಸಂಜೀವ್‌ ಗೋಯಲ್‌ ಸಿಕ್ಕಾ ಅವರು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾರೆ.ವಕೀಲ ಗುಪ್ತಾ ಅವರನ್ನು ಜೂನ್ 21ರಂದು ಬಂಧಿಸಿದ್ದು,ಅರವಿಂದ್‌ ಗುಪ್ತಾ ತಲೆಮರೆಸಿಕೊಂಡಿದ್ದಾನೆ. ಸಂಜೀವ್‌ ವಿರುದ್ಧದ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಯುವತಿ ಮೇಲೆ ವಕೀಲ ಗುಪ್ತಾ ದೌರ್ಜನ್ಯ ಎಸಗುತ್ತಿರುವ ವಿಡಿಯೊ ಬಹಿರಂಗವಾಗಿತ್ತು. ಬಳಿಕ ಆಕೆಯು ಸಂಶಯಾಸ್ಪದ ರೀತಿಯಲ್ಲಿ ಕಾಣೆಯಾಗಿದ್ದರು. ಈ ಕುರಿತು ಆಕೆಯ ಸಹೋದರ ಮೇ 27ರಂದು ವಿುರಠ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜೂನ್‌ 15ರಂದು ಆಕೆಯನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮೂವರ ವಿರುದ್ಧ ನ್ಯಾಯಾಧೀಶರ ಮುಂದೆ ಯುವತಿ ಹೇಳಿಕೆ ನೀಡಿದ್ದರು.