ಬಜಪೆ ಪೊಲೀಸರ ಕಾರ್ಯಾಚರಣೆ,ಮಾದಕ ವಸ್ತು ಸಹಿತ ಆರೋಪಿಯ ಬಂಧನ; ಏಳು ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ವಶ

ಕರಾವಳಿ

ಮಂಗಳೂರು ನಗರದ್ಯಾಂತ “ಮಾದಕ ವ್ಯಸನ ಮುಕ್ತ ಮಂಗಳೂರು” ಮಾಡುವ ನಿಟ್ಟಿನಲ್ಲಿ ಮೇಲಾಧಿಕಾರಿಗಳು ನೀಡಿದ ಸೂಚನೆಯಂತೆ ಬಜಪೆ ಠಾಣಾ ಪೊಲೀಸರು ಮುರ ನಗರದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಸಮಯದಲ್ಲಿ ನಂಬರ್ ಫ್ಲೇಟ್ ಇಲ್ಲದ ಕಂದು ಬಣ್ಣದ ಸ್ವಿಫ್ಟ್ ಕಾರನ್ನು ಚಾಲಕನಿಗೆ ನಿಲ್ಲಿಸಲು ಸೂಚನೆ ನೀಡಿದಾಗ ಕಾರು ಚಾಲಕನು ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿದ ಪರಿಣಾಮ, ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ನಿಂತಿದ್ದು ತಕ್ಷಣ ಪೊಲೀಸರು ಕಾರಿನ ಬಳಿ ತೆರಳಿ ಕಾರಿನಿಂದ ಓಡಿ ಹೋದ ಇಬ್ಬರು ವ್ಯಕ್ತಿಗಳ ಪೈಕಿ ಸೂರಿಂಜೆ ನಿವಾಸಿ ಅಬ್ದುಲ್ ಅಝೀಜ್ ಎಂಬಾತನನ್ನು ವಶಕ್ಕೆ ಪಡೆದು ಕಾರನ್ನು ಪರಿಶೀಲನೆ ಮಾಡಿದಾಗ ಕಾರಿನಲ್ಲಿ ಸುಮಾರು 250 ಗ್ರಾಂ ತೂಕದ ಮಾದಕ ವಸ್ತು ಚರಸ್ ಪತ್ತೆಯಾಗಿರುತ್ತದೆ.

ತಪ್ಪಿಸಿಕೊಂಡಾತ ಮೂಡಬಿದ್ರೆ ತೋಡಾರು ನಿವಾಸಿ ಕ್ಯಾಬರೇ ಪೈಜಲ್ ಆಗಿರುತ್ತಾನೆ.ಆಪಾಧಿತರಿಂದ ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ತಪ್ಪಿಸಿಕೊಂಡಿರುವ ಕ್ಯಾಬರೇ ಪೈಜಲ್ ಎಂಬವನ ಪತ್ತೆಯ ಬಗ್ಗೆ ಪೊಲೀಸರು ವ್ಯಾಪಕ ಕಾರ್ಯಚರಣೆ ನಡೆಸುತ್ತಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಕುಲದೀಪ್ ಕುಮಾರ್ ಜೈನ್, ರವರ ಮಾರ್ಗದರ್ಶನದಂತೆ,DCP ಗಳಾದ ಅಂಶು ಕುಮಾರ್ (ಕಾ&ಸು) ದಿನೇಶ್ ಕುಮಾರ್ (ಅ & ಸಂ) ಮಂಗಳೂರು ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ನಾಯ್ಕ್ ರವರ ನಿರ್ದೇಶನದಂತೆ, ಕಾರ್ಯಚರಣೆಯಲ್ಲಿ ಬಜಪೆ ಠಾಣಾ ಪಿ.ಐ. ಪ್ರಕಾಶ್ ರವರ ನೇತ್ರತ್ವದ ತಂಡ ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.