ಪುತ್ತೂರಿನ ಪೆರ್ಲಂಪಾಡಿ ಎಂಬಲ್ಲಿ ಮೆಡಿಕಲ್ ಶಾಪ್ ಗೆ ಪೂರ್ವ ತಯಾರಿ ಹಿನ್ನೆಲೆ ಕೆಲಸಕ್ಕೆ ಕಾರ್ಯಗಳಿಗೆ ಸಹಾಯ ಮಾಡಲು ಚರಣ್ ರಾಜ್ ಮತ್ತು ತನ್ನ ಸ್ನೇಹಿತ ನವೀನ್ ಕುಮಾರ್ ಪೆರ್ಲಂಪಾಡಿಗೆ ಮೆಡಿಕಲ್ ಶಾಪ್ ಬಳಿ ಕೆಲಸದಲ್ಲಿ ತೊಡಗಿದ್ದ ವೇಳೆ ಚರಣರಾಜ್ ರೈ ರವರು ಹೊರಗಡೆ ಬಂದು ಕಾರಿನ ಬಳಿ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದಾಗ ಯಾರೋ ಬಂದು ಹಲ್ಲೆ ಮಾಡಿದ್ದು ಚರಣ್ ಬೊಬ್ಬೆ ಹೊಡೆಯುವುದನ್ನು ಕೇಳಿ ನವೀನ್ ಕುಮಾರ್ ಹೊರಗೆ ಬಂದಾಗ ಚರಣ್ ರಾಜ್ ರೈ ರವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ. ಸಂ. 49/22 ರಂತೆ ಪ್ರಕರಣ ದಾಖಲಿಸಿ,ಸದರಿ ಪ್ರಕರಣದಲ್ಲಿ ಪ್ರಜ್ವಲ್ ರವರನ್ನು ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಡಿಯಲ್ಲಿ 7ನೇ ಆರೋಪಿಯನ್ನಾಗಿ ಪ್ರಕರಣದಲ್ಲಿ ದಾಖಲಿಸಲಾಗಿತ್ತು ಸದರಿ 7ನೇ ಆರೋಪಿಯು ಮಾನ್ಯ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ನ್ಯಾಯಾಲಯ ಪುತ್ತೂರು ಇಲ್ಲಿಗೆ ನಿರೀಕ್ಷಣ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಸದ್ರಿ ಅರ್ಜಿಯನ್ನು ಮಾನ್ಯ ಐದನೇ ಹೆಚ್ಚುವರಿ ನ್ಯಾಯಾಧೀಶರ ನ್ಯಾಯಾಲಯ ಪುತ್ತೂರು ಇವರು ತಿರಸ್ಕರಿಸಿದ್ದರು.
ನಂತರ 7ನೇ ಆರೋಪಿಯಾದ ಪ್ರಜ್ವಲ್ ರವರು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು ಸದ್ರಿ ಅರ್ಜಿಯನ್ನು ಕೈಗೆತ್ತಿಕೊಂಡು ಮಾನ್ಯ ನ್ಯಾಯಾಲಯವು 7ನೇ ಆರೋಪಿಯಾದ ಪ್ರಜ್ವಲ್ ರವರಿಗೆ ಹೈಕೋರ್ಟ್ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರು ಆಗಸ್ಟ್ ಮೂರರಂದು ಷರತ್ತು ಬದ್ಧ ಜಾಮೀನು ಮಂಜೂರು ಗೊಳಿಸಿದ್ದಾರೆ.ಆರೋಪಿಯ ಪರವಾಗಿ ವಕೀಲರಾದ ರಾಜಶೇಖರ ಎಸ್ ಮತ್ತು ಪುತ್ತೂರಿನ ಮಹೇಶ್ ಕಜೆ ರವರು ವಾದಿಸಿದ್ದರು.