ಉಪ್ಪಿನಂಗಡಿ: 7ವರ್ಷಗಳ ಹಿಂದಿನ ಸಾರ್ವಜನಿಕ ಶಾಂತಿ ಭಂಗ ಪ್ರಕರಣ ಆರೋಪಿಗಳು ದೋಷ ಮುಕ್ತ

ಕರಾವಳಿ

ಆರೋಪಿಗಳ ಪರ ವಾದ ಮಂಡಿಸಿದ ನ್ಯಾಯವಾದಿ ಮಹೇಶ್ ಕಜೆ

2016 ರಂದು ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಗಾಂಧಿ ಪಾರ್ಕ್ ಬಳಿ ಇರುವ ರೆಹಮಾನ್ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳು ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ಬೈದು ಕೈ ಮಿಲಾಯಿಸಿಕೊಂಡು ಸಾರ್ವಜನಿಕ ಶಾಂತಿ ಭಂಗ ಮಾಡಿದ್ದ ಆರೋಪದಡಿಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 325/16 ರಂತೆ ಮುಖದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿ,ತನಿಖಾಧಿಕಾರಿಯವರು ಪ್ರಕರಣದ ಕುರಿತು ಸಮಗ್ರ ತನಿಖೆಯನ್ನು ಮಾಡಿ ದೋಷಾರೋಪಣ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಅದರಂತೆ ಸಂಬಂಧ ಪಟ್ಟ ಕೇಸಿನ ಒಟ್ಟು ಏಳು ಪ್ರತ್ಯಕ್ಷ ಸಾಕ್ಷಿಗಳನ್ನು ವಿಚಾರಣೆ ನಡೆಸಿ ಸರಿ ಸುಮಾರು 5 ದಾಖಲೆಗಳನ್ನು ಗುರುತಿಸಿಕೊಂಡಿದ್ದು,ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯದ ಮುಂದೆ ಅಭಿಯೋಜನ ಪರವಾದ ಹಾಗೂ ಒಂದನೇ ಆರೋಪಿ ಮಹಮ್ಮದ್ ಅಶ್ರಫ್ ರವರ ಪರವಾಗಿ ಕಜೆ’ಲಾ’ಚೇಂಬರ್ಸ್ ಇದರ ಮುಖ್ಯಸ್ಥರಾದ ನ್ಯಾಯವಾದಿ ಮಹೇಶ್ ಕಜೆ ಹಾಗೂ 2 ಮತ್ತು 3 ನೇ ಆರೋಪಿಗಳ ಪರವಾಗಿ ನ್ಯಾಯವಾದಿ ಕೆ.ಎಂ ಸಿದ್ದೀಕ್ ರವರು ವಾದಿಸಿ,ಇವರ ವಾದವನ್ನು ಆಲಿಸಿದ ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿ ಪುತ್ತೂರು ದ.ಕ ನ್ಯಾಯಾಧೀಶರಾದ ಶ್ರೀ ಶಿವಣ್ಣ ಎಚ್ ಆರ್ ರವರು ಸದ್ರಿ ವಾದ ವಿವಾದವನ್ನು ಪರಿಗಣಿಸಿ ದಿನಾಂಕ 15.07.2023 ರಂದು ಸದ್ರಿ ಪ್ರಕರಣದ ಆರೋಪಿಗಳನ್ನು ದೋಷ ಮುಕ್ತಗೊಳಿಸಿ ಆದೇಶ ನೀಡಿರುತ್ತಾರೆ.