ಮಂಗಳೂರು ನಗರದಲ್ಲಿ 20 ರಿಂದ 25 ಯುನಿಸೆಕ್ಸ್ ಸೆಲೂನ್ ‌ಹೆಸರಿನ ಸೆಕ್ಸ್ ಮಸಾಜ್ ಸೆಂಟರ್ ಗಳು.!

ಕರಾವಳಿ

ಬುದ್ದಿವಂತರ ಜಿಲ್ಲೆಗೆ ಕಪ್ಪು ಚುಕ್ಕೆ.!

ಮಂಗಳೂರು ನಗರದಲ್ಲಿ ನಾಯಿಕೊಡೆಗಳಂತೆ, ಇಲಾಖೆಯ ಕಣ್ಣು ತಪ್ಪಿಸಿ ರಾಜಾರೋಷವಾಗಿ ಹಲವಾರು ಮಸಾಜ್ ಸೆಂಟರ್ ಗಳು ಕಾರ್ಯಾಚರಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯ ಇದೆ.

ಯುನಿಸೆಕ್ಸ್ ಸೆಲೂನ್, ಬ್ಯೂಟಿ ಸ್ಪಾ, ಫ್ಯಾಮಿಲಿ ಸೆಲೂನ್ ಹೆಸರಿನಲ್ಲಿ ಬಾಗಿಲು ತೆಗೆದಿರುವ ಮಸಾಜ್ ಸೆಂಟರ್ ಗಳ ಕಥೆ ಬರೆಯುವುದಾದರೆ ಅದೊಂದು ಕಾದಂಬರಿಯಾದೀತು. ಕಟ್ಟಡದೊಳಗೆ ನಡೆಯುತ್ತಿರುವುದು ಅಪ್ಪಟ ಸೆಕ್ಸ್ ದಂಧೆ. ಒಂದೊಂದು ಮಸಾಜ್ ಸೆಂಟರ್ ನೊಳಗಡೆ ಏಳೆಂಟು ರೂಮುಗಳಿದ್ದು, ಐದಾರು ಚೆಂದುಳ್ಳಿ ಚೆಲುವೆಯರನ್ನಿಟ್ಟು ದಂಧೆ ನಡೆಸಲಾಗುತ್ತಿದೆ. ಮಸಾಜ್ ‌ಹೆಸರಿನಲ್ಲಿ ಅಲ್ಲಿ ನಡೆಯುತ್ತಿರುವುದು ಅಪ್ಪಟ ಸೆಕ್ಸ್. ಹುಡುಗನೊಬ್ಬ ಬಟ್ಟೆ ಬಿಚ್ಚಿ ಬೆತ್ತಲಾಗಿ ಮಲಗಿರುತ್ತಾನೆ. ಹುಡುಗಿಯೊಬ್ಬಳು ಉಬ್ಬು ತಗ್ಗುಗಳನ್ನು ಕಾಣುವಂತೆ ಅರ್ಧಂಬರ್ಧ ಡ್ರೆಸ್ ಹಾಕಿಕೊಂಡು ಹುಡುಗನ ಬಾಡಿಯ ಮೇಲೆ ಕೈಯಾಡಿಸುತ್ತಾರೆ. ಹುಡುಗ ಮಾತ್ರ ನಿಟ್ಟುಸಿರು ಬಿಡುತ್ತಾ ಸುಖ ಪಡೆಯುತ್ತಾನೆ. ಹುಡುಗಿಯ ಕೈ ಹುಡುಗನ ತಾಗಬಾರದ ಜಾಗಕ್ಕೆ ತಾಗಿದರಂತೂ ಅಲ್ಲೊಂದು ಜಂಗಿ ಕುಸ್ತಿ ನಡೆಯುತ್ತದೆ. ಅಪ್ಪಟ ಕಾಮಕೇಳಿಯಾಟದ ದೃಶ್ಯಗಳು ನಡೆಯುತ್ತದೆ.

ಇದು ಮಂಗಳೂರಿನ ಬಹುತೇಕ ಯುನಿಸೆಕ್ಸ್ ಸೆಲೂನ್, ಬ್ಯೂಟಿ ಸ್ಪಾ, ಫ್ಯಾಮಿಲಿ ಸೆಲೂನ್ ನೇಮ್ ಬೋರ್ಡ್ ಹಾಕಿಕೊಂಡು ನಡೆಸುವ ಅಕ್ರಮ ಚರ್ಮದಂಧೆ. ಅದರಲ್ಲಿ ಕೆಲವು ಪ್ರಭಾವೀಗಳ ಮಸಾಜ್ ಸೆಂಟರ್ ಗಳು ಇವೆ. ಇವರ್ಯಾರು ಇಲಾಖೆಗೆ ಕ್ಯಾರೇ ಎನ್ನದೇ ಮಸಾಜ್ ದಂಧೆ ನಡೆಸುತ್ತಾರೆ.ಯಾವುದೇ ಪರವಾನಿಗೆ,ಸಂಭಂದ ಪಟ್ಟ ಇಲಾಖೆಯ ಅನುಮತಿ ಪಡೆಯದೆ ಸ್ಪಾ,ಸೆಲೂನ್ ಹೆಸರಲ್ಲಿ ಅಕ್ರಮ ಚಟುವಟಿಕೆ,ಸಂಬಂದ ಪಟ್ಟವರಿಗೆ ತಿಂಗಳ ಮಾಮೂಲು ಸಂದಾಯ.

ನಾವಿಲ್ಲಿ ಕೆಲವೊಂದು ಮಸಾಜ್ ಸೆಂಟರ್ ಗಳ ಪುರಾಣಗಳನ್ನು ಬಯಲಿಗೆಳೆಯುತ್ತಿದ್ದೇವೆ. ಅಪ್ಪಟ ಇಲ್ಲಿ ನಡೆಯುತ್ತಿರುವುದು ಸೆಕ್ಸ್ ಕರಾಳ ದಂಧೆ.

ಮಂಗಳೂರಿನ ಹೃದಯ ಭಾಗವಾದ ‌ಹಂಪನಕಟ್ಟೆ ಬಳಿ ಮಿಸ್ಚೀಫ್ ಮಾಲಿನಲ್ಲಿದೆ ‘UNIQUE LOUNGE’ ಅನ್ನುವ ಸ್ಪಾ. ಇಲ್ಲಿ ನಡೆಯುತ್ತಿರುವುದು ಅಪ್ಪಟ ಸೆಕ್ಸ್ ಬ್ರೂಥಲ್ ದಂಧೆ. ಬಿಜೈ ಪ್ಲಾಮಾ ಸೆಂಟರ್ ನಲ್ಲಿ ತಲೆ ಎತ್ತಿ ನಿಂತಿದೆ ‘V-XCLUSIVE’ ಯುನಿಸೆಕ್ಸ್ ಸೆಲೂನ್, ಬಿಜೈ ಕಾಪಿಕಾಡ್ ರಸ್ತೆಯ ಪಿಂಟೋ ಚೇಂಬರ್ಸ್ ನಲ್ಲಿದೆ ‘6 SENSE’ ಯುನಿಸೆಕ್ಸ್ ಸೆಲೂನ್, ಇನ್ನು ಬಿಜೈ ಕೆಎಸ್ಸಾರ್ಟಿಸಿ ಯ ಪಕ್ಕದ ಆದಿತ್ಯ ಕಮರ್ಷಿಯಲ್ ಸೆಂಟರ್ ನಲ್ಲಿದೆ ‘COLORS’ ಯುನಿಸೆಕ್ಸ್ ಸೆಲೂನ್.

ಇನ್ನು ಜೈಲ್ ರೋಡಿನ ಪಿಯೋ ಮಾಲಿನ ಕೆಳ ಅಂತಸ್ತಿನಲ್ಲಿ ‘SHRINGAR’ ಅನ್ನುವ ಫ್ಯಾಮಿಲಿ ಸೆಲೂನ್.

ಇನ್ನು ಪಂಪುವೆಲ್ ನ ಲಾಟಸ್ ಗ್ಯಾಲಕ್ಸಿ ಕಟ್ಟಡದಲ್ಲಿರುವ ‘OLIVE’ ಯುನಿಸೆಕ್ಸ್ ಸೆಲೂನ್ ನಲ್ಲಿ ಎಂಟು ರೂಮುಗಳಿದ್ದು ಭರ್ಜರಿಯಾಗಿಯೇ ಸ್ಪಾ ಹೆಸರಿನಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದಾರೆ.

ಬಲ್ಮಠದ ಸೋಮಯಾಜಿ ಬಿಲ್ಡಿಂಗ್ ನಲ್ಲಿ ‘COOL CUT’ ಯುನಿಸೆಕ್ಸ್ ಫ್ಯಾಮಿಲಿ ಸೆಲೂನ್ ರಾಜಾರೋಷವಾಗಿ ಕಾರ್ಯಾಚರಿಸುತ್ತಿದೆ. ತೊಕ್ಕೊಟ್ಟಿನಲ್ಲಿ ‘STYLE ICON’ ‘LOOKES’ ಅನ್ನುವ ಸ್ಪಾ ಕಾರ್ಯಾಚರಿಸುತ್ತಿದೆ.

ಈ ಎಲ್ಲ ಸ್ಪಾ ಗಳಲ್ಲಿ ಅಪ್ಪಟ ಸೆಕ್ಸ್ ಬ್ರೂಥಲ್ ದಂಧೆ. ಇವಿಷ್ಟೇ ಅಲ್ಲ ನಗರದಲ್ಲಿ ಇನ್ನು 20 ರಿಂದ 25 ಮಸಾಜ್ ಸೆಂಟರ್ ಗಳು ಕಾರ್ಯಾಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಇವೆಲ್ಲದರ ಪಿನ್ ಟು ಪಿನ್ ಡೀಟೈಲ್ಸ್ ನಿಮ್ಮ ಮುಂದೆ ತರಲಿದ್ದೇವೆ.

ರಾಜಾರೋಷವಾಗಿ ನಗರದಲ್ಲಿ ಕಾರ್ಯಾಚರಿಸುತ್ತಿರುವ ಮಸಾಜ್ ಹೆಸರಿನ ಸೆಕ್ಸ್ ದಂಧೆಯನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ವಿಫಲವಾಗಿದೆ.ಮಟ್ಕಾ ದಂಧೆಕೋರರನ್ನು ಬೆನ್ನು ಹತ್ತಿದ ಖಡಕ್ಕ್ ಅಧಿಕಾರಿ ಮಂಗಳೂರು ಕಮೀಷನರ್ ಸಾಹೇಬ್ರು,ಈ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕಾಗಿದೆ.