ನಿವೃತ್ತ ಅಧಿಕಾರಿಗೆ ಹನಿಟ್ರ್ಯಾಪ್ ಮಾಡಿ 82 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದ ಅಕ್ಕ, ತಂಗಿ ಸೇರಿ ಮೂವರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿ ನಿವಾಸಿ ಅಣ್ಣಮ್ಮ (40), ಸ್ನೇಹಾ (25) ಮತ್ತು ಆಕೆಯ ಪತಿ ಲೋಕೇಶ್ (30) ಬಂಧಿತ ಆರೋಪಿಗಳಾಗಿದ್ದಾರೆ. ಸ್ನೇಹಿತರ ಮೂಲಕ ನಿವೃತ್ತ ಅಧಿಕಾರಿಗೆ ಅಣ್ಣಮ್ಮ ಪರಿಚಯವಾಗಿತ್ತು. ಆಕೆಯ ಪುತ್ರನಿಗೆ ಕ್ಯಾನ್ಸರ್ ಇದ್ದ ಕಾರಣ ಮಾಹಿತಿ ತಿಳಿದ ಅಧಿಕಾರಿ 5000 ರೂಪಾಯಿ ನೆರವು ನೀಡಿದ್ದರು.
ಹೋಟೆಲ್ ಗೆ ಅಧಿಕಾರಿಯನ್ನು ಕರೆಸಿಕೊಂಡಿದ್ದ ಅಣ್ಣಮ್ಮ ಸಲುಗೆಯಿಂದ ದೃಶ್ಯದ ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಿ ಹಣ ದೋಚಿದ್ದಾಳೆ. ಅದೇ ವೀಡಿಯೋವನ್ನು ಸಹೋದರಿ ಸ್ನೇಹಾಗೆ ಕಳುಹಿಸಿ ಆಕೆಯಿಂದಲೂ ಬ್ಲಾಕ್ ಮೇಲ್ ಮಾಡಿಸಿ ಹಣ ಸುಲಿಗೆ ಮಾಡಿದ್ದಾರೆ. ಹೀಗೆ 82 ಲಕ್ಷ ರೂಪಾಯಿ ದೋಚಿದ್ದ ಅಕ್ಕ, ತಂಗಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.