ಆಢಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಹೊಸ ಪ್ರಯೋಗ; ಪ್ರತಿ ತಾಲೂಕಿಗೊಬ್ಬರು KAS ಶ್ರೇಣಿಯ ಅಧಿಕಾರಿ ಉಸ್ತುವಾರಿ

ರಾಜ್ಯ

ರಾಜ್ಯಾಧ್ಯಂತ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನ, ಜನಪರ ಯೋಜನೆಗಳ ಜಾರಿ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೆ ಎಎಸ್ ಅಧಿಕಾರಿಗಳೆಲ್ಲರೂ ರಾಜ್ಯದವರೇ ಆಗಿರುತ್ತಾರೆ. ರಾಜ್ಯದ ಅಭಿವೃದ್ಧಿಗೆ ಅವರಿಗೆ ವಿಶೇಷ ಆಸಕ್ತಿ ಇರುತ್ತದೆ. ಇಂತಹ ಅಧಿಕಾರಿಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಚಿಂತನೆಯನ್ನುನಡೆಸಿದ್ದಾರೆ.

ಈಗಾಗಲೇ ಪ್ರತಿ ಜಿಲ್ಲೆಗೆ ಓರ್ವ ಐಎಎಸ್ ಅಧಿಕಾರಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ. ಅವರು ಸರ್ಕಾರ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಪ್ರಕೃತಿ ವಿಕೋಪದಂತ ಸಂದರ್ಭದಲ್ಲಿ ಅನೇಕರು ಜಿಲ್ಲೆಗೆ ಭೇಟಿ ನೀಡುತ್ತಿಲ್ಲ. ಈ ಎಲ್ಲಾ ಕಾರಣದಿಂದಾಗಿ ಕೆಎಎಸ್ ಅಧಿಕಾರಿಗಳನ್ನು ತಾಲೂಕಿಗೊಬ್ಬರಂತೆ ನೇಮಕ ಮಾಡಿ ಹೊಣೆಗಾರಿಕೆ ನೀಡಲು ಮುಂದಾಗಿದ್ದಾರೆ.

ತಾಲೂಕಿಗೆ ಒಬ್ಬರಂತೆ ನೋಡಲ್ ಆಫೀಸರ್ ಆಗಿ ನೇಮಕ ಆಗುವಂತ ಕೆಎಎಸ್ ಅಧಿಕಾರಿಗಳು ಪ್ರತಿ ತಿಂಗಳು ಕಡ್ಡಾಯವಾಗಿ ತಾಲೂಕಿಗೆ ಹೋಗಬೇಕು. 2 ದಿನ ವಾಸ್ತವ್ಯ ಮಾಡಬೇಕು. ಬೇರೆ ಬೇರೆ ಇಲಾಖೆಗಳ ಸಮನ್ವಯದೊಂದಿಗೆ ಕೆಲಸ ಮಾಡುವಂತ ಕರ್ತವ್ಯ ನಿರ್ವಹಿಸೋ ಜವಾಬ್ದಾರಿಯನ್ನು ಸರ್ಕಾರ ನೀಡಲಿದೆ.

ಇದಲ್ಲದೇ ನೆರೇಗಾ ಕಾಮಗಾರಿಗಳು, ಹಾಸ್ಟೆಲ್ ಸೌಲಭ್ಯ, ಆರೋಗ್ಯ ಸೇವೆ, ಅಭಿವೃದ್ಧಿ ಯೋಜನೆಗಳು, ಶಾಲಾ-ಕಾಲೇಜುಗಳಿಗೆ ಭೇಟಿ ನೀಡುವಂತ ಕೆಲಸವನ್ನು ಮಾಡಬೇಕಿದೆ. ಜೊತೆಗೆ ತಮ್ಮದೇ ಆದ ನೆಟ್ವರ್ಕ್ ಬೆಳೆಸಿಕೊಂಡು ಸಮನ್ವಯವನ್ನು ತಾಲೂಕಿನಲ್ಲಿ ಸಾಧಿಸಿ, ಯಾವುದೇ ಸಮಸ್ಯೆಯಾಗದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡೋ ಕಾಯಕದಲ್ಲಿ ನಿರತವಾಗಬೇಕಿದೆ.