ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನ ಕಳ್ಳತನ,ಕಾರು ಸಮೇತ ಇಬ್ಬರು ಆರೋಪಿಗಳ ಬಂಧನ

ಕರಾವಳಿ

ಬಡಗ ಎಡಪದವು ನಿವಾಸಿ ಚಂದ್ರ ಗೌಡ ಎಂಬವರ ಮೇಯಲು ಬಿಟ್ಟ ಮೂರು ದನಗಳನ್ನು ದಿನಾಂಕ 15.08.2023 ರಂದು ಮಧ್ಯರಾತ್ರಿ ದೂಮಚಡವು ಎಂಬಲ್ಲಿಂದ ಆರೋಪಿಗಳು ಕಳವು ಮಾಡಿ,ಹಿಂಸಾತ್ಮಕವಾಗಿ ಕಾರಿನಲ್ಲಿ ತುಂಬಿಕೊಂಡು ಹೋಗಿದ್ದು, ಈ ದೃಶ್ಯವಳಿಗಳು ಸಿಸಿ ಕ್ಯಾಮಾರದಲ್ಲಿ ರೆಕಾರ್ಡ್ ಆಗಿ, ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಒಳಗಾಗಿತ್ತು. ಈ ಪ್ರಕರಣದ ಪತ್ತೆಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳ ಸೂಚನೆಯಂತೆ ಕಾರ್ಯಚರಣೆ ನಡೆಸಿದ ಬಜಪೆ ಪೊಲೀಸರು ದಿನಾಂಕ: 19-08-2023 ರಂದು ಶಾಂತಿಗುಡ್ಡೆ ಬಳಿ ಕೃತ್ಯಕ್ಕೆ ಬಳಸಿದ 5 ಲಕ್ಷ ಮೌಲ್ಯದ ಕಾರು ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಬಂಟ್ವಾಳ ಸಂಗಬೆಟ್ಟು ನಿವಾಸಿ ಪುಚ್ಚೇರಿ ಮೊಹಮ್ಮದ್ ಆರೀಪ್ ಮತ್ತು ಕೊಣಾಜೆ ಮಲಾರ್ ನಿವಾಸಿ ಇರ್ಪಾನ್ ಎಂದು ತಿಳಿದುಬಂದಿದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ ಕುಲದೀಪ್ ಕುಮಾರ್ ಜೈನ್ ರವರ ಮಾರ್ಗದರ್ಶನದಂತೆ,DCPಅಂಶು ಕುಮಾರ್,ದಿನೇಶ್ ಕುಮಾರ್,ಮಂಗಳೂರು ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ನಾಯ್ಕ್ ರವರ ನಿರ್ದೇಶನದಂತೆ,ಬಜಪೆ ಠಾಣಾ ಪಿ.ಐ. ಪ್ರಕಾಶ್ , ಪಿ.ಎಸ್.ಐ.ಗುರು ಕಾಂತಿ,ರೇವಣ್ಣ ಸಿದ್ದಪ್ಪ, ಕುಮಾರೇಶನ್, ಶ್ರೀಮತಿ ಲತಾ, ಸಿಬ್ಬಂದಿಗಳಾದ ರಾಮ ಪೂಜಾರಿ, ಸುಜನ್, ಸಂತೋಷ್ ಡಿ.ಕೆ. ಪುರುಶೋತ್ತಮ, ದುರ್ಗಾ ಪ್ರಸಾದ್, ಬಸವರಾಜ್ ಪಾಟೀಲ್, ಸುರೇಶ್, ಚಿದಾನಂದ, ಈರಣ್ಣ, ಅನಿಲ್, ಪ್ರೇಮ್, ಆನಂದ್, ಕು: ವಿಧ್ಯಾ ನೇತ್ರತ್ವದ ತಂಡ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.