ಭೂಮಾಪನ ಇಲಾಖೆ ಅಧೀಕ್ಷಕ ಕೆ.ಟಿ. ಶ್ರೀನಿವಾಸ ಮೂರ್ತಿಯ ಹೆಸರಲ್ಲಿ ಐದು ಮದ್ಯದಂಗಡಿ ಲೋಕಾಯುಕ್ತ ಪೊಲೀಸರಿಂದ ಪತ್ತೆ

ರಾಜ್ಯ

ಬೆಂಗಳೂರು ಕೆ.ಆರ್. ಪುರ ತಾಲ್ಲೂಕಿನ ಭೂಮಾಪನ ಇಲಾಖೆ ಅಧೀಕ್ಷಕ ಕೆ.ಟಿ. ಶ್ರೀನಿವಾಸ ಮೂರ್ತಿರವರು ಐದು ಮದ್ಯದಂಗಡಿ ಹೊಂದಿರುವುದನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.
ಈ ಅಧಿಕಾರಿಯು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತ ಬೆಂಗಳೂರು ನಗರ ಪೊಲೀಸ್ ಘಟಕದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.

ತುಮಕೂರು ಜಿಲ್ಲೆಯ 14 ಸ್ಥಳಗಳ ಮೇಲೆ ಮಂಗಳವಾರ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು,ತುಮಕೂರು ಜಿಲ್ಲೆಯ ಐದು ಕಡೆಗಳಲ್ಲಿ ಶ್ರೀನಿವಾಸಮೂರ್ತಿ ಮದ್ಯದಂಗಡಿಗಳನ್ನು ಹೊಂದಿರುವುದನ್ನು ಪತ್ತೆಹಚ್ಚಿದ್ದಾರೆ.ಇನ್ನು ಹಲವು ಕಡೆಗಳಲ್ಲಿ ಸ್ಥಿರಾಸ್ತಿಗಳನ್ನು ಖರೀದಿಸಿರುವ ದಾಖಲೆಗಳೂ ಪತ್ತೆಯಾಗಿದೆ. ಬೆಂಗಳೂರಿನ ಅಂದ್ರಹಳ್ಳಿ, ಹೆಣ್ಣೂರು, ಕೊತ್ತನೂರು ಸೇರಿದಂತೆ ಹಲವೆಡೆ ನಿವೇಶನ, ಮನೆ ಹೊಂದಿರುವುದು ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.