ಪಂಚರಂಗಿ ಕಂಡಕ್ಟರ್ ನ ಅಸಲಿ ಮುಖ.. ಮೆಸ್ಸೇಜ್ ಕಳುಹಿಸಿ ಧರ್ಮದೇಟು ತಿಂದ ಧರ್ಮ ರಕ್ಷಕ.!

ಕರಾವಳಿ

ನಿನ್ನೆಯಷ್ಟೇ ಗುರುಪುರ ಕೈಕಂಬ ಬಳಿಯ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರು, ಸ್ಥಳೀಯರ ಮಧ್ಯೆಯೇ ಯುವಕನೊಬ್ಬ ಬಸ್ಸನ್ನು ತಡೆದು ಪಂಚರಂಗಿಯೊಬ್ಬನಿಗೆ ತಪರಾಕಿ ಹಾಕುವ ವಿಡಿಯೋ ವೊಂದು ವೈರಲ್ ಆಗಿತ್ತು. ಗಡ್ಡಧಾರಿ ಬಸ್ ಕಂಡಕ್ಟರ್ ಗೆ ವಾಚಾಮಗೋಚರವಾಗಿ ಬೈಯ್ಯುವ,ಪಂಚರಂಗಿ ಬಸ್ ಕಂಡಕ್ಟರ್ ತುಟಿಕ್ ಪಿಟಿಕ್ ಎನ್ನದೆ ಇರುವ ವಿಡಿಯೋ ಇದಾಗಿತ್ತು.

ಅಸಲಿಗೆ ಜನನಿಬಿಡ ಪ್ರದೇಶದಲ್ಲಿಯೇ ಭಜರಂಗಿ ಕಂಡಕ್ಟರ್ ಗೆ ಯುವಕನೊಬ್ಬ ಸಖತ್ ಶಾಸ್ತಿ ಮಾಡುವ ಹಿಂದೆ ಆತನ ಪತ್ನಿಗೆ ಅಶ್ಲೀಲ ಮೆಸ್ಸೇಜ್ ಕಳುಹಿಸಿದ್ದು ಕಾರಣವಾಗಿತ್ತು‌.! ಅನ್ಯಕೋಮಿನ ವಿವಾಹಿತ ಮಹಿಳೆಯೊಬ್ಬಳಿಗೆ ಪಂಚರಂಗಿ ಕಂಡಕ್ಟರ್ ಮೆಸ್ಸೇಜ್ ಕಳುಹಿಸಿ ಸ್ವತಃ ಆಕೆಯ ಗಂಡನಿಂದಲೇ ಧರ್ಮದೇಟು ತಿಂದಿದ್ದ.

ಆತನಿಗೆ ಬರೀ 39 ವರ್ಷ ವಯಸ್ಸು. ವಿದ್ಯಾರ್ಥಿ ಜೀವನದಲ್ಲೇ ಎಬಿವಿಪಿ ಮೂಲಕ ಗುರುತಿಸಿ ಕೊಂಡಿದ್ದ ಶಿವ ಧನುಪೂಜೆ ಬಡಕಬೈಲ್, ಮುಡಾಯಿಕೋಡಿ, ಬೆಳ್ಳೂರು ಪ್ರದೇಶಗಳಲ್ಲಿ ನಖರಾ ಮಾಡುವ ಮೂಲಕ ಸುದ್ದಿಗೆ ಬಂದಿದ್ದ ಈತ. ಈ ಭಾಗದಲ್ಲಿ ಧರ್ಮವನ್ನು ಗುತ್ತಿಗೆ ಪಡೆದ ರೀತಿಯಲ್ಲಿ ಭಜರಂಗಿ ಆಗಿ ಬದಲಾಗಿದ್ದ.

ಶಿವ ಧನುಪೂಜೆ ಅನ್ನುವ ಈತ ಮೊದಲಿಗೆ ಕ್ರೈಂ ಲೀಸ್ಟಲ್ಲಿ ಹೆಸರು ಬಂದಿದ್ದು ರಿಕ್ಷಾ ಚಾಲಕ ಇಕ್ಬಾಲ್ ಮರ್ಡರ್ ಪ್ರಕರಣದಲ್ಲಿ. ಆರೋಪಿಗಳ ಜೊತೆ ಶಿವು ಸಖ್ಯ ಬೆಳೆಸಿಕೊಂಡಿದ್ದ ಅನ್ನುವ ಕಾರಣಕ್ಕೆ ಪೊಲೀಸರು ಲಿಫ್ಟ್ ಮಾಡಿ ಕೊನೆಗೆ ಬಿಡುಗಡೆಗೊಳಿಸಿದ್ದರು. ಆನಂತರ ಸ್ಥಳೀಯವಾಗಿ ಕೆಲವು ಗಲಾಟೆ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ ಅನ್ನುವ ಆರೋಪ ಈತನ ಮೇಲೆ ಕೇಳಿ ಬಂದಿತ್ತು. ಎನ್ ಆರ್ ಸಿ, ಸಿಎಎ ಸಂದರ್ಭದಲ್ಲಿ ಸ್ಥಳೀಯ ಪ್ರಮುಖ ದೇವಾಲಯವೊಂದರ ಜಾತ್ರೆಯಲ್ಲಿ ಮುಸಲ್ಮಾನರು ವ್ಯಾಪಾರ ಮಾಡಬಾರದು ಎಂದು ಗಟ್ಟಿ ಧ್ವನಿಯಲ್ಲಿ ಹೋರಾಟಕ್ಕೆ ಇಳಿದಿದ್ದ.

ಇತ್ತೀಚಿಗೆ ಗಂಜಿಮಠ ಸಮೀಪದ ವಿವಾದೀತ ಮಸೀದಿ ವಿಚಾರ ಸಂದರ್ಭದಲ್ಲೂ ಅದು ಮಸೀದಿಯೇ ಅಲ್ಲ, ಅದೊಂದು ದೇವಸ್ಥಾನ ಎಂದು ಮೊದಲಿಗೆ ಪಂಚಾಯತ್ ಗೆ ಮನವಿ ನೀಡಿದ್ದ ಹಿಂದೂ ಯುವ ಸೇನೆಯ ನೇತೃತ್ವ ವಹಿಸಿದ್ದು ಇದೇ ಶಿವು ಧನುಪೂಜೆ! ಖಾಸಗಿ ಬಸ್ಸಿನಲ್ಲಿ ಕಂಡಕ್ಟರ್.

ಆದರೆ ಇದೀಗ ತನ್ನ ನೈಜ ಅನಾವರಣವನ್ನು ಬಿಚ್ಚಿಟ್ಟಿದ್ದಾನೆ. ಧರ್ಮದ ಗುತ್ತಿಗೆ ಹೆಸರಿನಲ್ಲಿ ಇಂತಹವರು ಮಾಡುವುದು ಮಾತ್ರ ಪರರ ಹೆಂಗಸರ ಮೇಲೆ ಕಣ್ಣು ಹಾಕುವುದು.