ಮೂಡಬಿದ್ರೆಯಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ನಾಯಕನ ಮೇಲೆಯೇ ಅನೈತಿಕ ಪೊಲೀಸ್ ಗಿರಿ.!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಕರಾವಳಿಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ಅನೈತಿಕ ಪೊಲೀಸ್ ಗಿರಿಯನ್ನು ಹದ್ದುಬಸ್ತಿನಲ್ಲಿಡಲು ಸರ್ಕಾರ ಆ್ಯಂಟಿ ಕಮ್ಯುನಲ್ ವಿಂಗ್ ಅನ್ನು ಸ್ಥಾಪಿಸಿತ್ತು.ಆದರೆ ಆನಂತರವಾದರೂ ಅನೈತಿಕ ಪೊಲೀಸ್ ಗಿರಿ ಗೆ ಬ್ರೇಕ್ ಬಿದ್ದಿದ್ದಿಯಾ? ದಾಖಲೆಗಳು ಇಲ್ಲ ಅನ್ನುತ್ತಿದ್ದೆ. ಕಳೆದ ಎರಡು ತಿಂಗಳಿದೀಚೆಗೆ ಕರಾವಳಿಯಲ್ಲಿ ಹತ್ತಾರು ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು ನಡೆದಿದೆ.ಯಾವುದೇ ವಿಂಗ್ ಬಂದರೂ ಸಮಾಜ ವಿದ್ರೋಹಿಗಳಿಗೆ ಭಯವೇ ಇಲ್ಲದಂತಾಗಿದೆ. ಇದೀಗ ಆ್ಯಂಟಿ ಕಮ್ಯುನಲ್ ವಿಂಗ್ ಗೆ ಮೇಜರ್ ಸರ್ಜರಿ ಮಾಡುವ ಅಗತ್ಯತೆ ಇದೆ ಅನ್ನುವ ಕೂಗು ನಾಗರೀಕ ವಲಯಗಳಿಂದ ಕೇಳಿ ಬರುತ್ತಿದೆ. ಕೇವಲ ನಾಮಕಾವಸ್ಥೆ ಆ್ಯಂಟಿ ಕಮ್ಯುನಲ್ ವಿಂಗ್ ರಚಿಸಿ ಯಾವುದೇ ಪ್ರಯೋಜನಗಳಿಲ್ಲ. ದಕ್ಷ, ಪ್ರಾಮಾಣಿಕ, ಸೂಪರ್ ಕಾಫ್ ಅಧಿಕಾರಿಗಳ ಹೆಗಲಿಗೆ ಜವಾಬ್ದಾರಿ ಕೊಟ್ಟರಷ್ಟೇ ಮಾತ್ರ ಅನೈತಿಕ ಪೊಲೀಸ್ ಗಿರಿಯನ್ನು ತಡೆಯಬಹುದಷ್ಟೇ.. ಅದೂ ಅಲ್ಲದೇ ಎಕ್ಸ್ ಫರ್ಟ್ ಸಿಬ್ಬಂದಿಗಳನ್ನು ವಿಂಗ್ ಗೆ ಸೇರ್ಪಡೆ ಮಾಡಿದರೇ ಮಾತ್ರ ಇಂತಹ ಅನೈತಿಕ ಪೊಲೀಸ್ ಗಿರಿಗೆ ಕಡಿವಾಣ ಬೀಳಬಹುದು ಅನ್ನುವ ಮಾತುಗಳು ಈಗ ಎಲ್ಲೆಡೆ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಸೋಮವಾರ ರಾತ್ರಿ ಮೂಡುಬಿದಿರೆ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣ ಎದುರು ಬೆಂಗಳೂರು ಬಸ್ಸು ಹತ್ತಲು ನಿಂತಿದ್ದ ವಿದ್ಯಾರ್ಥಿನಿಯೊಂದಿಗೆ ಅದೇ ಕಾಲೇಜಿನ ಸಹಪಾಠಿ ವಿದ್ಯಾರ್ಥಿಯೊಬ್ಬ ಮಾತನಾಡಿದ ಅನ್ನುವ ಕಾರಣಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ವಿದ್ಯಾರ್ಥಿ ಮುಸ್ಲಿಂ ಅನ್ನುವ ಏಕೈಕ ಕಾರಣಕ್ಕೆ ಅಲ್ಲೇ ಇದ್ದ ಪುಂಡರು ಹಲ್ಲೆ ಮಾಡಿರುವುದಾಗಿ ತಿಳಿದುಬಂದಿದೆ. ವಿದ್ಯಾರ್ಥಿ ಕೋಟೆ ಬಾಗಿಲು ನಿವಾಸಿಯಾಗಿದ್ದು, ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯಾದ ಎನ್ ಎಸ್ ಯು ಐ ಪದಾಧಿಕಾರಿ ಎಂದು ತಿಳಿದುಬಂದಿದೆ.
ಘಟನೆ ನಡೆದ ಕೂಡಲೇ ಸ್ಥಳಕ್ಕಾಗಮಿಸಿದ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿಯ ಮಾಹಿತಿಯನ್ನಾಧರಿಸಿ ಪ್ರೇಮ್, ಅಭಿಲಾಷ್, ಸಂಜಯ್ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ. ವಿಷಯ ತಿಳಿದು ಸ್ಥಳೀಯ ಕಾಂಗ್ರೆಸ್ ಮುಖಂಡರು ಠಾಣೆಗೆ ತೆರಳಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.
ಒಂದೇ ಕಾಲೇಜಿನಲ್ಲಿ ಕಲಿಯುತ್ತಿದ್ದ ಸಹಪಾಠಿಯೊಂದಿಗೆ ಮಾತನಾಡುವುದು ತಪ್ಪಾ? ಕರಾವಳಿಯನ್ನು ಯಾರು ಆಳುತ್ತಿದ್ದಾರೆ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಅನೈತಿಕ ಪೊಲೀಸರ ವಿರುದ್ಧ ಯಾಕೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ? ಅನ್ನುವ ಪ್ರಶ್ನೆಗಳು ಇದೀಗ ಕೇಳಿ ಬರುತ್ತಿದೆ.