ಚೆಕ್ ಅಮಾನ್ಯ ಪ್ರಕರಣ: ಆರೋಪಿ ದೋಷಮುಕ್ತ

ರಾಜ್ಯ

ಸದಾನಂದ ಎಂಬವರು ಸುದೇಶ್ ಕೆ ಅವರಿಂದ ಟಿಪ್ಪರ್ ವಾಹನವನ್ನು ಖರೀದಿಸುವರೆ ಆರೋಪಿಯು ಅದರ ಬಾಬ್ತು ಎಗ್ರಿಮೆಂಟ್ ಮಾಡಿಕೊಂಡ ಪ್ರಕಾರ 2011 ರಲ್ಲಿ ರೂಪಾಯಿ 1,20,000 ಮೊತ್ತವನ್ನು ಸಾಲವಾಗಿ ಪಡಕೊಂಡಿದ್ದು, ಸದ್ರಿ ಸಾಲದ ಮರುಪಾವತಿಗಾಗಿ ಒಂದು ಚೆಕ್ಕನ್ನು ನೀಡಿರುತ್ತಾರೆ.ಪಿರ್ಯಾದಿ ಚೆಕ್ಕನ್ನು ಸದ್ರಿ ಹಣದ ಮರುಪಾವತಿಗಾಗಿ ದಿನಾಂಕ 25/09/2014ರ ತನ್ನ ಕೆನರಾ ಬ್ಯಾಂಕ್ ಪುತ್ತೂರು ಶಾಖೆಯಲ್ಲಿ ನಗದೀಕರಣಕ್ಕೆ ಸಲ್ಲಿಸಿದಾಗ ಸದ್ರಿ ಚೆಕ್ ಅಮಾನ್ಯವಾಗಿರುತ್ತದೆ.ಅದರಂತೆ ದೂರುದಾರರಾದ ಸುದೇಶ್ ಕೆ ರವರು ಮಾನ್ಯ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಖಾಸಗಿ ಪಿರ್ಯಾಧಿಯನ್ನು ಸಲ್ಲಿಸಿರುತ್ತಾರೆ.

ಸದ್ರಿ ಪಿರ್ಯಾದಿಗೆ ಸಂಬಂಧಿಸಿದಂತೆ ಪಿರ್ಯಾದಿ ಮತ್ತು ಆರೋಪಿಯ ಪರ ಸಾಕ್ಷಿ ವಿಚಾರಣೆ ನಡೆಸಿದ್ದು, ಆರೋಪಿ ಪರ ವಕೀಲರು ಸದರಿ ಪ್ರಕರಣದಲ್ಲಿನ ಸಾಲವು ಅವಧಿ ಬಾಧಿತವಾಗಿದ್ದು, ಪಿರ್ಯಾದಿಯು ಸದ್ರಿ ಹಣವನ್ನು ಯಾವ ಮೂಲದಿಂದ ಪಡೆದು ನೀಡಿದ್ದಾನೆಂದು ಹೇಳಿಕೊಂಡಿಲ್ಲ ಮತ್ತು ಬಹುಮುಖ್ಯವಾಗಿ ಚೆಕ್ಕಿನಲ್ಲಿ ಪಿರ್ಯಾದಿಯು ತಿದ್ದುಪಡಿ ಮಾಡಿರುವುದು ಕಂಡು ಬಂದಿರುತ್ತದೆ.ಎಂಬಿತ್ಯಾದಿಯಾಗಿ ವಾದ ಮಂಡಿಸಿದ್ದರು. ಪ್ರಕರಣದಲ್ಲಿ ಪಿರ್ಯಾದಿ ಮತ್ತು ಆರೋಪಿಯ ಪರ ವಾದ ವಿವಾದಗಳನ್ನು ಆಲಿಸಿದ ಮಾನ್ಯ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅರ್ಚನ ಉಣ್ಣಿತ್ತನ್ ರವರು ಆರೋಪಿಯನ್ನು ಈ ಪ್ರಕರಣದಿಂದ ದೋಷ ಮುಕ್ತನೆಂದು ತೀರ್ಪು ನೀಡಿರುತ್ತಾರೆ.ಆರೋಪಿತರ ಪರವಾಗಿ ಖ್ಯಾತ ವಕೀಲರಾದ ಶ್ರೀಯುತ ಮಹೇಶ್ ಕಜೆಯವರು ವಾದಿಸಿರುತ್ತಾರೆ.