ಸರಕಾರಿ ಜಾಗದಲ್ಲಿ ಮನೆ ಕಟ್ಟಿಸಿ ವಾಸವಿರುವವರಿಗೆ ಇತ್ತೀಚೆಗೆ ಅಧಿಕಾರಕ್ಕೆ ಬಂದಿರುವ ಹೊಸ ಸರ್ಕಾರ ಶುಭಸುದ್ದಿಯೊಂದನ್ನು ನೀಡಿದೆ. ಅಕ್ರಮ ಸಕ್ರಮ ಎನ್ನುವ ಯೋಜನೆಯ ಮೂಲಕ ಸರ್ಕಾರಿ ಸ್ಥಳದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡಲು ಸರ್ಕಾರ ತೀರ್ಮಾನಿಸಿದೆ. ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ಬಡತನದಲ್ಲಿರುವ ಜನರಿಗೆ ಹಕ್ಕು ಪತ್ರ ನೀಡಿ, ಆ ಜಾಗವನ್ನು ಅವರಿಗೆ ಸೂಕ್ತ ಎನ್ನುವ ಹಾಗೆ ಮಾಡಬೇಕು ಎಂದು ಸರ್ಕಾರ ನಿರ್ಧಾರ ಮಾಡಿದೆ.
ಹಕ್ಕುಪತ್ರ ನೀಡಲು ಒಂದು ಕಂಡೀಷನ್ ಇಡಲಾಗಿದೆ.ಆ ವ್ಯಕ್ತಿಯ ವಾರ್ಷಿಕ ಆದಾಯ ಎಷ್ಟಿದೆ ಎಂದು ಪರಿಶೀಲಿಸಿ, ಅವರು ಬಡವರು ಎಂದು ಗೊತ್ತಾದರೆ ಅಂಥವರಿಗೆ ಹಕ್ಕುಪತ್ರ ನೀಡಲಾಗುತ್ತದೆಯಂತೆ. ಸರ್ಕಾರಿ ಜಮೀನಿನಲ್ಲಿ 30 ವರ್ಷಗಳ ಹಿಂದಿನಿಂದ ಮನೆ ಕಟ್ಟಿರುವವರು ಅಕ್ರಮ ಸಕ್ರಮ ಯೋಜನೆಗೆ ಅರ್ಹತೆ ಹೊಂದುತ್ತಾರೆ ಎಂದು ಹೇಳಲಾಗುತ್ತಿದೆ.ಈ ಮೂಲಕ ಹಕ್ಕುಪತ್ರ ಪಡೆಯಲು ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಈ ವೇಳೆ 20×30 ಜಾಗದಲ್ಲಿ ಮನೆ ಕಟ್ಟಿರುವವರು, SC/ST ಜನರಿಗೆ 2500 ರೂಪಾಯಿ ನೋಂದಣಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಸಾಮಾನ್ಯ ವರ್ಗರ ಜನರು 5000 ನೋಂದಣಿ ಶುಲ್ಕ ಕಟ್ಟಬೇಕಾಗುತ್ತದೆ. ಈ ಮೊತ್ತವನ್ನು ಪಾವತಿ ಮಾಡಿದರೆ, ನೀವು ಮನೆ ಕಟ್ಟಿಕೊಂಡಿರುವ ಜಾಗವನ್ನು ನಿಮ್ಮ ಹೆಸರಿಗೆ ಸರ್ಕಾರವೇ ರಿಜಿಸ್ಟರ್ ಮಾಡಿಸಿಕೊಡುತ್ತದೆ ಎಂದು ಹೇಳಲಾಗುತ್ತಿದೆ. ಈ ಸೌಕರ್ಯ ಪಡೆಯಲು ನೀವು ಮನೆ ಕಟ್ಟಿಸಿ 10 ವರ್ಷಗಳಿಂದ 30 ವರ್ಷಗಳ ಸಮಯ ಆಗಿರಬೇಕು.10 ಸಾವಿರ ಜನರಿಗೆ ಈ ರೀತಿ ಹಕ್ಕು ಪತ್ರ ನೀಡಲು ಸರ್ಕಾರ ತೀರ್ಮಾನ ಮಾಡಲಾಗಿದ್ದು, ಬಡಜನರಿಗೆ ಶುಭ ಸುದ್ದಿಯಾಗಿರುತ್ತದೆ.