ಮುಂದಿನ ವರ್ಷ ಜೂನ್ ನಲ್ಲಿ ನಡೆಯಲಿರುವ ರಾಜ್ಯ ವಿಧಾನ ಪರಿಷತ್ ಪದವೀಧರ/ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪ್ರತಿಪಕ್ಷ ಈಗಿನಿಂದಲೇ ಸಿದ್ಧತೆ ನಡೆಸಿದ್ದು, ಅರ್ಹ ಮತದಾರರ ನೋಂದಣಿ ಪ್ರಕ್ರಿಯೆಗೆ ಪ್ರೇರಣೆ ಸೇರಿ ಹಲವು ಚಟುವಟಿಕೆಗಳ ಮೇಲ್ವಿಚಾರಣೆಗೆ ಉಸ್ತುವಾರಿಗಳನ್ನು ನೇಮಿಸಿದೆ.
ಮಾಜಿ ಸಚಿವರಿಗೆ ಕ್ಷೇತ್ರಾವರು ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಪದವೀಧರ ಕ್ಷೇತ್ರಗಳು: ಈಶಾನ್ಯ- ಬಿ. ಶ್ರೀರಾಮುಲು, ನೈರುತ್ಯ- ಸಿಟಿ ರವಿ, ದಕ್ಷಿಣ: ಕೆ ಎಸ್ ಈಶ್ವರಪ್ಪ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಡಾ. ಸಿ ಎನ್ ಅಶ್ವತ್ಥನಾರಾಯಣರನ್ನು ಉಸ್ತುವಾರಿಗಳನ್ನಾಗಿ ಪಕ್ಷದ ರಾಜ್ಯಾಧ್ಯಕ್ಷರು ನೇಮಿಸಿದ್ದಾರೆ.