ಮಂಗಳೂರು : ಜನರ ಸುಧೀರ್ಘ ಹೋರಾಟದ ಪ್ರತಿಫಲವಾಗಿ ನಿರ್ಮಾಣಗೊಳ್ಳುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿ ಒಂದು ವರ್ಷ ಕಳೆದರೂ ಪೂರ್ಣಗೊಂಡಿಲ್ಲ ಮೂಲ ನಕ್ಷಯಂತೆ ರಸ್ತೆ ನಿರ್ಮಿಸದೆ ಅಗಲ ಕಿರಿದಾಗಿ ರಸ್ತೆ ನಿರ್ಮಿಸಲಾಗುತ್ತಿದೆ ಮತ್ತು ಅತ್ಯಂತ ಕಳಪೆ ಗುಣಮಟ್ಟದ್ದಾಗಿದೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಆರೋಪಿಸಿದ್ದಾರೆ ಅವರು ಇಂದು ಕಾನ ಬಾಳ ಚತುಷ್ಪಥ ರಸ್ತೆ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು ರಸ್ತೆ ಕಾಮಗಾರಿ ಆರಂಭಿಸಿ ವರ್ಷ ದಾಟಿದರೂ ಚತುಷ್ಪಥ ರಸ್ತೆ ಇನ್ನೂ ಪೂರ್ಣಗೊಂಡಿಲ್ಲ, ರಸ್ತೆ ನಿರ್ಮಾಣಗೊಂಡಲ್ಲಿ ಚರಂಡಿ ನಿರ್ಮಿಸದೆ ಇರುವುದರಿಂದ ಅಕ್ಕಪಕ್ಕದ ಜನರಿಗೆ ತೊಂದರೆ ಆಗುತ್ತಿದೆ. ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡದೆ ರಸ್ತೆ ನಿರ್ಮಿಸುತ್ತಿದ್ದಾರೆ ಇದರಿಂದಾಗಿ ಟ್ರಾನ್ಸ್ಫರ್ಮರ್ ಕಂಬಗಳೇ ಬೀಳುವ ಅಪಾಯದಲ್ಲಿದೆ ಬಿಎಎಸ್ಎಫ್ ಕಂಪೆನಿ ಬಳಿ ಅಗಲೀಕರಣಕ್ಕೆ ಕೆಐಎಡಿಬಿ ಭೂಮಿ ಬಿಟ್ಟು ಕೊಡುತ್ತಿಲ್ಲ ಎಂಬ ಸಬೂಬು ಹೇಳಿ ರಸ್ತೆಯನ್ನು ಕಿರಿದುಗೊಳಿಸಿ ಕೈಗಾರಿಕೆಗಳ ಬೃಹತ್ ಲಾರಿಗಳು ಸಂಚರಿಸುವ ಈ ರಸ್ತೆಯನ್ನು ನಿತ್ಯ ಅಪಘಾತಗಳಿಗೆ ಸರಕಾರವೇ ಆಹ್ವಾನ ನೀಡಿದಂತೆ ಆಗಿದೆ ಎಂದರು ಅಲ್ಲದೆ ಕಾಂಕ್ರಿಟಿಕರಣ ಸಮತಟ್ಟು ಹೊಂದಿಲ್ಲ ಮತ್ತು ಕಾಂಕ್ರೀಟ್ ಹಾಕಿದ ವರ್ಷ ಆಗುವ ಮೊದಲೇ ಸಿಮೆಂಟ್ ಕಿತ್ತು ಹೋಗಿ ಜಲ್ಲಿಗಳು ಮೇಲೆದ್ದು ನಿಂತಿದೆ ಕಳಪೆ ಕಾಮಗಾರಿ ನಡೆಸಿರುವುದು ಕಣ್ಣಿಗೆ ರಾಚುತ್ತಿದೆ ಎಂದು ಆರೋಪಿಸಿದರು.
ಚುನಾವಣೆಯ ಹೊಸ್ತಿಲಲ್ಲಿ ಈ ರಸ್ತೆಗೆ ಶಂಕುಸ್ಥಾಪನೆ ನಡೆಸಿ ಹೋದ ಶಾಸಕರು ರಸ್ತೆ ಕಾಮಗಾರಿಯನ್ನು ಪರಿಶೀಲಿಸದೆ ಕಳಪೆ ಗುಣಮಟ್ಟದ ಮೌನವಾಗಿರುವುದು ಯಾಕೆ ಎಂದು ಪ್ರಶ್ನಿಸಿರುವ ಇಮ್ತಿಯಾಝ್ ಅವರು ರಸ್ತೆ ಕಾಮಗಾರಿಯಲ್ಲಿ ದೊಡ್ಡ ರೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದು ಸರಕಾರ ಕೂಡಲೇ ತನಿಖೆ ನಡೆಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಳಪೆ ಕಾಮಗಾರಿಗೆ ಸಹಕರಿಸಿದ ಲೋಕೋಪಯೋಗಿ ಇಲಾಖೆಯ ಇಂಜಿನಿಯರುಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ ಈ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ನೀಡಿದರು.
ಈ ಸಂಧರ್ಭದಲ್ಲಿ ಅಟೋರಿಕ್ಷಾ ಚಾಲಕರ ಸಂಘ ಕಾನ ಇದರ ಅಧ್ಯಕ್ಷರಾದ ಅಬ್ದುಲ್ ಬಷೀರ್, ಮುಖಂಡರಾದ ಪ್ರದೀಪ್, ಮಿಥುನ್, ಲಕ್ಷ್ಮೀಷ, ಹಂಝ ಮೈಂದಗುರಿ, ಸಿಪಿಐಮ್ ಮುಖಂಡ ಐ ಮೊಹಮ್ಮದ್, ಡಿವೈಎಫ್ಐ ಸುರತ್ಕಲ್ ಘಟಕದ ಅಧ್ಯಕ್ಷರಾದ ಬಿ.ಕೆ ಮಸೂದ್, ಪ್ರಮುಖರಾದ ರಾಜೇಶ್ ಕಾನ, ಆಸ್ಕರ್ ಜನತಾಕಾಲನಿ, ಮುನೀಬ್,ಮುಂತಾದವರು ಉಪಸ್ಥಿತರಿದ್ದರು
ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮತ್ತು ಬಿಎಎಸ್ಎಫ್ ಕಂಪೆನಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಆಕ್ಷೇಪಣೆ ಸಲ್ಲಿಸಲಾಯಿತು