ಕಟೀಲು ದೇಗುಲದ ಆಡಳಿತಕ್ಕಾಗಿ ಹಗ್ಗಜಗ್ಗಾಟ..!ದೇಗುಲದ ಟ್ರಸ್ಟಿ ಹಕ್ಕು ಕೊಡೆತ್ತೂರು ಗುತ್ತಿನವರದ್ದು: ಅರುಣ್ ಕುಮಾರ್ ಶೆಟ್ಟಿ

ಕರಾವಳಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಟ್ರಸ್ಟಿ ಆಗುವ ಹಕ್ಕು ಕೊಡೆತ್ತೂರು ಗುತ್ತು ಕುಟುಂಬದ ಹಿರಿಯ ಸದಸ್ಯರಿಗೆ ಸೇರಿದ್ದು ಎಂದು ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ ಎಂದು ಕೊಡೆತ್ತೂರು ಗುತ್ತಿನ ಅರುಣ್ ಕುಮಾರ್ ಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತಿಗೆ ಗುತ್ತಿನ ಸನತ್ ಕುಮಾರ್ ಶೆಟ್ಟಿ ಅವರು ತಾನೇ ಕೊಡೆತ್ತೂರು ಗುತ್ತಿನವ ಎಂದು ಹೇಳಿ ಕಟೀಲು ದೇಗುಲದ ಟ್ರಸ್ಟಿ ಆಗಲು ಪ್ರಯತ್ನಿಸಿ ಕೊಡೆತ್ತೂರು ಗುತ್ತಿಗೆ ಸಲ್ಲಬೇಕಾದ ಹಲವಾರು ಗೌರವ, ಮರ್ಯಾದೆ, ಮನ್ನಣೆಗಳನ್ನು ಅವರ ಸುಪರ್ದಿಗೆ ಪಡೆಯಲು ಯತ್ನಿಸಿದ್ದರು. ಅದನ್ನು ಪ್ರಶ್ನಿಸಿ ಕೊಡೆತ್ತೂರು ಗುತ್ತಿನವರು ನ್ಯಾಯಾಲಯದ ಮೊರೆ ಹೋಗಿದ್ದೆವು. ಇದೀಗ ಕೋರ್ಟ್ ತೀರ್ಪು ನೀಡಿದ್ದು ಕೊಡೆತ್ತೂರು ಗುತ್ತಿನವರಿಗೆ ಆನುವಂಶಿಕ ಆಡಳಿತ ಟ್ರಸ್ಟಿಯ ಅಧಿಕಾರ ಎಂದು ತೀರ್ಪು ನೀಡಿದ್ದಾರೆ. ಸನತ್ ಕುಮಾರ್ ಶೆಟ್ಟಿ ಅವರು ಪುತ್ತಿಗೆ ಗುತ್ತಿನವರು ಎಂದು ಘೋಷಿಸಿದ್ದು ಅವರು ಟ್ರಸ್ಟಿಯಾಗಲು ಅರ್ಹರಲ್ಲ, ಅಲ್ಲದೆ ಟ್ರಸ್ಟಿಯಾಗಿ ಮುಂದುವರಿಯಬಾರದೆಂದು ಆದೇಶಿಸಿದ್ದಾರೆ ಎಂದರು.

ಕೊಡೆತ್ತೂರು ಗುತ್ತಿನವರಾದ ಹರಿಶ್ಚಂದ್ರ ಆಳ್ವ, ಬಿ.ಆರ್. ಪ್ರಸಾದ್, ನಿತಿನ್ ಆಳ್ವ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.