ಅಕ್ರಮ ಮರಳುಗಾರಿಕೆ ದಾಳಿಯ ಹಿಂದಿನ ಅಸಲಿಯತ್ತು.!

ಕರಾವಳಿ

ಗಣಿ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಸಾವಿರಾರು ಮೆಟ್ರಿಕ್ ಟನ್ ಮರಳು ವಶಪಡಿಸಿಕೊಂಡ ಘಟನೆಗೆ ಟ್ವಿಸ್ಟ್ ದೊರೆತಿದ್ದು, ಅಸಲಿಗೆ ಮೂಲರಪಟ್ನ ನಿವಾಸಿಗಳು ಯಾರೂ ಕೂಡ ಅಕ್ರಮ ಮರಳುಗಾರಿಕೆ ನಡೆಸುತ್ತಿರಲಿಲ್ಲ, ಮಾತ್ರವಲ್ಲ ಮೂಲರಪಟ್ನ ಸೇತುವೆಯ ತಳ ಭಾಗದಿಂದ ಮರಳು ಸಂಗ್ರಹಿಸಿದ್ದು ಅಲ್ಲ. ಬೇರೆಯೇ ಕಡೆಯಲ್ಲಿ ಮರಳು ಸಂಗ್ರಹ ಮಾಡಿ,ಅನ್ಯರು ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದು ಎಂಬುದು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಆದರೆ ಗಣಿ ಅಧಿಕಾರಿಗಳು ಮೂಲರಪಟ್ನ ದಲ್ಲಿ ಅಕ್ರಮ ಮರಳುಗಾರಿಕೆ ಜಪ್ತಿ ಮಾಡಿರುವುದಾಗಿ ಹೇಳಿಕೊಂಡಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಬಡಗಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರಟೀಲ್ ಬೆಟ್ಟು, ಗುಡಾಲಪಡ್ಪು, ಪಲ್ಲಿಪಾಡಿ ಮಳಲಿ ಡ್ಯಾಂ ಕಡೆಗಳಿಂದ ಮರಳು ತೆಗೆದು,ಬಡಗ ಬಳ್ಳೂರು ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ದಾಸ್ತಾನಿರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರಿಂದ ದೂರು ಬಂದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮರಳು ಜಪ್ತಿ ಮಾಡಿರುತ್ತಾರೆ.

ಮೂಲರಪಟ್ನದಲ್ಲಿ ಯಾರು ಅಕ್ರಮ ಮರಳುಗಾರಿಕೆಗೆ ನಡೆಸುತ್ತಿಲ್ಲ.ಅಲ್ಲಿನ ನಾಗರಿಕರು ಅದಕ್ಕೆ ಅಸ್ಪದವೂ ನೀಡುತ್ತಿಲ್ಲ.ಅಕ್ರಮ ಚಟುವಟಿಕೆಗಳನ್ನು ವಿರೋದಿಸುತ್ತಿದ್ದಾರೆ.ಆದರೆ ಅಧಿಕಾರಿಗಳು ದಾಳಿ ನಡೆಸಿರುವುದು ಎಲ್ಲಿಯೋ? ಹೆಸರು ಮಾತ್ರ ಮೂಲರಪಟ್ನಕ್ಕೆ ಎಂಬುದು ಇದೀಗ ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.