ದೇವದಾಸ್ ಕೆ. ಪಾಂಡೇಶ್ವರ್ ( ದೇವು ಪಾಂಡೇಶ್ವರ್) ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಟೀಲೇಶ್ವರಿ ಫೈನಾನ್ಸ್ ಮಾಲಕರಾಗಿದ್ದ ಇವರು ತುಳು ಚಿತ್ರ ನಿರ್ಮಾಪಕರಾಗಿಯೂ ಪ್ರಸಿದ್ಧಿ ಪಡೆದಿದ್ದರು. ಇವರ ಮೊದಲ ಚಿತ್ರ ‘ರಂಗ್’ ಯಶಸ್ವಿ ಪ್ರದರ್ಶನ ಕಂಡಿತ್ತು. ಸಮಾಜಸೇವಕರಾಗಿಯೂ ಗುರುತಿಸಿಕೊಂಡಿದ್ದ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸುತ್ತಿದ್ದರು. ಕದ್ರಿ ದೇವಾಲಯದ ಸಮಿತಿಯಲ್ಲೂ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.