2019-2021ರ ಅವಧಿಯಲ್ಲಿ 13 ಲಕ್ಷಕ್ಕೂ ಹೆಚ್ಚು ಮಹಿಳೆಯರು, ಬಾಲಕಿಯರು ನಾಪತ್ತೆ.!

ರಾಜ್ಯ

ಕರ್ನಾಟಕ ರಾಜ್ಯದಿಂದ 40 ಸಾವಿರಕ್ಕೂ ಮಿಕ್ಕ ಮಹಿಳೆಯರು, ಯುವತಿಯರು ಕಣ್ಮರೆ.!

ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಅಘಾತಕಾರಿ ವರದಿಯೊಂದನ್ನು ಕೇಂದ್ರ ಸರಕಾರದ ಗೃಹ ಇಲಾಖೆ ಬಿಡುಗಡೆಗೊಳಿಸಿದೆ. ಸರಿ-ಸುಮಾರು 3 ವರ್ಷಗಳ ಅವಧಿಯಲ್ಲಿ 13 ಲಕ್ಷಕ್ಕೂ ಹೆಚ್ಚು ಮಹಿಳೆಯರು, ಬಾಲಕಿಯರು ನಾಪತ್ತೆಯಾಗಿದ್ದಾರೆ.

​ಕರ್ನಾಟಕ ರಾಜ್ಯವೊಂದರಲ್ಲಿಯೇ 40 ಸಾವಿರಕ್ಕೂ ಮಿಕ್ಕ ಮಹಿಳೆಯರು, ಯುವತಿಯರು ಕಣ್ಮರೆಯಾಗಿದ್ದಾರೆ. ದೇಶದಲ್ಲಿಯೇ ಅತೀ ಹೆಚ್ಚು ಮಹಿಳೆಯರ, ಬಾಲಕಿಯರ, ಯುವತಿಯರ ಕಣ್ಮರೆ ಪ್ರಕರಣ ಮಧ್ಯಪ್ರದೇಶದಲ್ಲಿ ದಾಖಲಾಗಿ ಒಂದನೇ ಸ್ಥಾನದಲ್ಲಿದೆ. ಮಹಿಳೆಯರ, ಯುವತಿಯ ನಾಪತ್ತೆ ಪ್ರಕರಣದಲ್ಲಿ ಪಶ್ಚಿಮ ಬಂಗಾಲ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಇದು 2019 ರಿಂದ 2021 ರ ನಡುವಿನ ಮೂರು ವರ್ಷದ ಅವಧಿಯಲ್ಲಿ ಕಣ್ಮರೆಯಾದ ಯುವತಿಯರ, ಬಾಲಕಿಯರ ಅಂಕಿ ಅಂಶದ ವರದಿ.

ದೇಶದಲ್ಲಿ ಒಟ್ಟು 13 ಲಕ್ಷದ 13 ಸಾವಿರ ಮಹಿಳೆಯರು, ಬಾಲಕಿಯರು, ಯುವತಿಯರು ನಾಪತ್ತೆಯಾಗಿದ್ದಾರೆ. ಇವರು ಎಲ್ಲಿದ್ದಾರೆ? ಎನಾದರು? ಎಂಬ ಮಾಹಿತಿ ಇಲ್ಲ. 18 ವರ್ಷ ಮೇಲ್ಪಟ್ಟ 10,61,638 ಮಂದಿ ಮಹಿಳೆಯರು, 18 ವರ್ಷಕ್ಕಿಂತ ಕೆಳಗಿನ 2,54,430 ಮಂದಿ ಬಾಲಕಿಯರು ಈ ಮೂರು ವರ್ಷದ ಅವಧಿಯಲ್ಲಿ ಕಣ್ಮರೆಯಾಗಿದ್ದಾರೆ ಎಂದು ರಾಷ್ಟೀಯ ಅಪರಾಧ ದಾಖಲೆಯನ್ನು ಆದರಿಸಿ ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ.

​ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಮಹಿಳೆಯರ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿದ್ದು, 2019 ರಲ್ಲಿ 703 ಬಾಲಕಿಯರು 12,247 ಮಹಿಳೆಯರು ನಾಪತ್ತೆಯಾಗಿರುತ್ತಾರೆ. 2020 ರಲ್ಲಿ 834 ಬಾಲಕಿಯರು 11,950 ಮಹಿಳೆಯರು, ಅದೇ ರೀತಿ 2021 ರಲ್ಲಿ 1,237 ಬಾಲಕಿಯರು 12,964 ಮಹಿಳೆಯರು ಕಣ್ಮರೆಯಾಗಿರುತ್ತಾರೆ. ಒಟ್ಟು ಈ 2 ವರ್ಷದ ಅವಧಿಯಲ್ಲಿ 38,935 ಕ್ಕೂ ಹೆಚ್ಚು ಮಹಿಳೆಯರು, ಬಾಲಕಿಯರು, ಕರ್ನಾಟಕ ರಾಜ್ಯದಿಂದ ಕಣ್ಮರೆಯಾಗಿರುತ್ತಾರೆ.

ಕರ್ನಾಟಕ ರಾಜ್ಯದ ಮುತ್ತಿನ ನಗರಿ ಮೈಸೂರಿನಿಂದ ಅತೀ ಹೆಚ್ಚು ಮಹಿಳೆಯರು, ಬಾಲಕಿಯರು ಕಣ್ಮರೆಯಾದ ಪ್ರಕರಣ ದಾಖಲಾಗಿರುತ್ತದೆ.18 ರಿಂದ 21 ವರ್ಷ ಪ್ರಾಯದ ಮಹಿಳೆಯರು ಅ ಅತೀ ಹೆಚ್ಚು ನಾಪತ್ತೆಯಾಗಲು ಕಾರಣ ಏನೆಂದರೆ, ಪ್ರೀತಿ, ಪ್ರೇಮದ ಹೆಸರಿನಲ್ಲಿ ಹಾಗೂ ಅರ್ಥಿಕತೆ, ಬಡತನ,ನಿರುದ್ಯೋಗದಂತ ಸಮಸ್ಯೆಯಿಂದ ಅತೀ ಹೆಚ್ಚು ಮಧ್ಯ ವಯಸ್ಕರು,ಬಾಲಕಿಯರು ಕಾಣೆಯಾಗುತ್ತಿದ್ದಾರೆ.ಇವರಲ್ಲಿ ಅತೀ ಹೆಚ್ಚಾಗಿ ಕಣ್ಮರೆಯಾಗುವ ಮಹಿಳೆಯರು, ಬಾಲಕಿಯರು, ಯುವತಿಯರು, ಹಿಂದುಳಿದ ವರ್ಗಕ್ಕೆ ಸೇರಿದವರಾಗಿರುತ್ತಾರೆ ಎಂಬುದು ಬಹಳ ಅಘಾತಕಾರಿಯಾದ ಸಂಗತಿ.!! ಇಂತಹ ಕಾಣೆಯಾಗುವಿಕೆಗೆ ಮತ್ತೊಂದು ಕಾರಣ ಹೆಣ್ಣು ಮಕ್ಕಳ ಮಾರಾಟ ಜಾಲ ಸಕ್ರಿಯವಾಗಿರುವುದು.ಇದೆಲ್ಲವೂ ಸರಕಾರದ ದಾಖಲೆ ಪ್ರಕಾರದ ಅಂಕಿ-ಅಂಶಗಳಾದರೆ, ಸರಕಾರದ ಗಮನಕ್ಕೆ ಬಾರದೆ ಇರುವ ಇನ್ನೂ ಹಲವಾರು ಕಣ್ಮರೆ ಪ್ರಕರಣಗಳು ಮುಚ್ಚಿ ಹೋಗಿರಬಹುದು.?