ಎಚ್ ಎಸ್ ಆರ್ ಪಿ ಆದೇಶ ಕಾನೂನು ಬಾಹಿರ

ರಾಜ್ಯ

ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್ ಎಸ್ ಆರ್ ಪಿ) ಅಳವಡಿಕೆ ಕುರಿತ ಸರಕಾರದ ಆದೇಶವು ಕಾನೂನು ಬಾಹಿರ ಎಂದು ಕರ್ನಾಟಕ ವಾಹನ ನಂಬರ್ ಪ್ಲೇಟ್ಸ್ ತಯಾರಕರು ಮತ್ತು ಮಾರಾಟಗಾರರ ಸಂಘವು ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಸುಮಾರು 25 ಸಾವಿರ ಜನರು ವಾಹನಗಳಿಗೆ ಎಚ್ ಎಸ್ ಆರ್ ಪಿ ಅಳವಡಿಸುವ ಕೆಲಸ ಮಾಡುತ್ತಿದ್ದಾರೆ. ವಾಹನ ತಯಾರಕರ ಡೀಲರ್ಸ್ ಶಿಪ್ ನೆಟ್ವರ್ಕ್ ಮೂಲಕ ಮಾತ್ರ ಎಚ್ ಎಸ್ ಆರ್ ಪಿ ಅಳವಡಿಸಿಕೊಳ್ಳಬೇಕೆಂದು ಸರಕಾರ ಸೂಚಿಸಿದೆ. ಸರಕಾರ, ಬೆರೆಳೆಣಿಕೆ ಏಜೆನ್ಸಿಗಳ ಹಿತ ರಕ್ಷಣೆಗಾಗಿ 25 ಸಾವಿರ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ಪ್ರಕಟಣೆಯಲ್ಲಿ ದೂರಿದ್ದಾರೆ.

ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದ 23 ಎಚ್ ಎಸ್ ಆರ್ ಪಿ ತಯಾರಕರಿದ್ದರೂ ರಾಜ್ಯ ಸರಕಾರದ ಆದೇಶವು ಓಇಎಂ ( ನೋಂದಾಯಿತ ಪ್ರಾಧಿಕಾರ, ಮೂಲ ಉಪಕರಣಗಳ ಉತ್ಪಾದಕರು) ಗಳ ಜತೆ ಒಪ್ಪಂದ ಮಾಡಿಕೊಂಡಿರುವ ನಾಲ್ಕು ಏಜೆನ್ಸಿಗಳ ಪರವಾಗಿ ಮಾತ್ರ ಇದೆ. ಈ ಆದೇಶದಿಂದ ರಾಜ್ಯದ ಆರ್ಥಿಕತೆಗೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಸರಕಾರ ತನ್ನ ಆದೇಶ ಹಿಂಪಡೆದು ಸ್ಥಳೀಯ ಎಚ್ ಎಸ್ ಆರ್ ಪಿ ತಯಾರಕರ ಹಿತ ಕಾಯಬೇಕು ಎಂದು ಆಗ್ರಹಿಸಿದ್ದಾರೆ.