20ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಫ್ ಸ್ಪರ್ಧೆ:ಅಫ್ಲಾ ಅಮನ್ ಮತ್ತು ಅಶ್ರೀಲ್ ಆಯಾನ್ ಗಂಜೀಮಠ ಪ್ರಥಮ ಸ್ಥಾನ

ಕರಾವಳಿ

ಇತ್ತೀಚೆಗೆ ಮೂಡುಬಿದಿರೆಯ ಶೋರಿನ್ ರಿಯೋ ಕರಾಟೆ ಅಸೋಸಿಯೇಶನ್ ಆಶ್ರಯದಲ್ಲಿ ಇಲ್ಲಿನ ಸ್ವಾಮೀಸ್ ಸೈಂಥ್ ಟ್ರೈನಿಂಗ್ ಎಂ.ಕೆ .ಅನಂತ್ರಾಜ್ ದೈಹಿಕ ಶಿಕ್ಷಣ ಸಂಸ್ಥೆ ಇದರ ಸಹಯೋಗದೊಂದಿಗೆ 20ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಫ್ ಸ್ಪರ್ಧೆ ನಡೆಯಿತು.ಕರಾಟೆ ಸ್ಪರ್ಧೆಯಲ್ಲಿ ಅಲ್ ಫುರ್ಖಾನ್ ಇಸ್ಲಾಮಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮೂಡಬಿದ್ರೆ,ಇದರ ವಿದ್ಯಾರ್ಥಿಗಳಾದ ಅಫ್ಲಾ ಅಮನ್ ಮತ್ತು ಅಶ್ರೀಲ್ ಆಯಾನ್ ಗಂಜೀಮಠ ಇವರು ಪ್ರಥಮ ಸ್ಥಾನವನ್ನು ಪಡಕೊಂಡರು.

ಅಲ್ ಅಮೀನ್ ಹಾಗೂ ರೆಹನಾ ದಂಪತಿಗಳ ಪುತ್ರರಾಗಿರುವ ಇವರು ಮೂಡಬಿದ್ರೆಯ ರೆನ್ಸಿ ಮುಹಮ್ಮದ್ ನದೀಮ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.ಮಕ್ಕಳ ಅಮೋಘ ಸಾಧನೆಯ ಬಗ್ಗೆ ಮಾರ್ಫ್ಖಾನ್ ಅಬ್ದುಲ್ಲಾ, ಸಲೀಮ್ ನಾರ್ಲಾಪದವು, ನವಾಜ್, ಸಮೀರ್,ಸಕೀರ್ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.