ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು, ಕ್ಯಾನ್ಸರ್ ಆಸ್ಪತ್ರೆ, ಉಳ್ಳಾಲ ತಾಲೂಕು ಕಚೇರಿ ಸಮಗ್ರವಾಗಿ ಕಾರ್ಯನಿರ್ವಹಿಸಲು ಒತ್ತಾಯಿಸಿ, ಸಿಪಿಐಎಂ ಬಹಿರಂಗ ಸಭೆ

ಕರಾವಳಿ

ಕೇಂದ್ರ ಸರಕಾರದ ಪ್ರಜಾಪ್ರಭುತ್ವ ಜನವಿರೋಧಿ ದೋರಣೆಯನ್ನು ಖಂಡಿಸಿ, ಬೆಲೆ ಏರಿಕೆ, ನಿರುದ್ಯೋಗ, ವಿದ್ಯುತ್ ಖಾಸಗೀಕರಣ ವಿರೋಧಿಸಿ, ದೇಶ ವ್ಯಾಪಿ ಪ್ರತಿಭಟನಾ ವಾರಾಚರಣೆ ನಡೆಯುತ್ತಿದ್ದು ಉಳ್ಳಾಲ ಸಿ.ಪಿ.ಐ.ಎಂ ಉಳ್ಳಾಲ ವಲಯ ಸಮಿತಿ ವತಿಯಿಂದ ಬಹಿರಂಗ ಸಭೆ ದೇರಳೆಕಟ್ಟೆ ಸಿಟಿ ಮೈದಾನದಲ್ಲಿ ಸೋಮವಾರ ನಡೆಯಿತು.

ದ.ಕ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು, ಕ್ಯಾನ್ಸರ್ ಆಸ್ಪತ್ರೆಯ ಸ್ಥಾಪನೆಯ ಆಗ್ರಹಿಸಿ, ಉಳ್ಳಾಲ ತಾಲೂಕು ಕಚೇರಿ ಸಮಗ್ರವಾಗಿ ಕಾರ್ಯನಿರ್ವಹಿಸಲು ಒತ್ತಾಯಿಸಿದರು.

ಸಿ.ಪಿ.ಐ.ಎಂ ರಾಜ್ಯ ಸಮಿತಿ ಸದಸ್ಯರಾದ ಮುನೀರ್ ಕಾಟಿಪಳ್ಳ ಮಾತನಾಡಿ ಬಿ.ಜೆ.ಪಿಯವರ ಡಬಲ್ ಇಂಜಿನ್ ಸರಕಾರ ಇತ್ತು 40% ಕಮೀಷನ್ ಆರೋಪದಿಂದಾಗಿ ಜನಸಾಮಾನ್ಯರು ಸೋಲಿಸಿದರು, ಇವರಿಗೆ ಪ್ರಾಮಾಣಿಕತೆ, ದೇಶ ಪ್ರೇಮ, ಜನಗಳ ಬದುಕಿನ ಬಗ್ಗೆ ಬದ್ದತೆಯೂ ಇಲ್ಲ, ಈ ದೇಶ ‘ಕನಿಷ್ಠ ಭಾರತ’ ಭಾರತವಾಗಿ ಉಳಿಯಬೇಕು, ಇಲ್ಲಿ 140ಕೋಟಿ ಜನರು ಉತ್ತಮವಾಗಿ ಬದುಕುವ ಯೋಜನೆಯನ್ನು ತನ್ನಿ, ಹೆಸರು ಬದಲು ಮಾಡುವುದು ನಂತರ, ನಮಗೆ ಭಾರತ ಎನ್ನುವಾಗಲೂ ರೋಮಾಂಚನವಾಗುತ್ತದೆ, ಇಂಡಿಯಾ ಎನ್ನುವಾಗಲೂ ರೋಮಾಂಚನವಾಗುತ್ತದೆ, ನೀವು ಜನರ ದಿಕ್ಕು ತಪ್ಪಿಸುವ ಕೆಲಸಮಾಡುವುದು ಬೇಡ, 10ವರ್ಷದಲ್ಲಿ ನೀವು ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿದ್ದೀರಾ? ಇಲ್ಲವಾದಲ್ಲಿ ಜನರ ಬಳಿ ಕ್ಷಮೆ ಕೇಳಿ ಎಂದರು.

ಸಿ.ಪಿ.ಐ.ಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ರಾಜ್ಯದಲ್ಲಿ ಬಿ.ಜೆ.ಪಿ ಪರಿಸ್ಥಿತಿ ಅಧೋ ಗತಿಗೆ ಬಂದಿದೆ, ಕಳೆದ ಮೇ ತಿಂಗಳಲ್ಲಿ ಚುನಾವಣೆ ನಡೆದು ವಿರೋಧ ಪಕ್ಷದ ನಾಯಕ ಮಾಡಲು ಇವತ್ತಿನ ವರೆಗೆ ಆಗಿಲ್ಲ, ಅಂತಹ ಹೀನಾಯ ಪರಿಸ್ಥಿತಿ ಕರ್ನಾಟಕ ರಾಜ್ಯದಲ್ಲಿ ಬಿ.ಜೆ.ಪಿಗೆ ಬಂದಿದೆ. ಮತ್ತಷ್ಟು ಪ್ರಭಲವಾದ ಪೆಟ್ಟನ್ನು ಕರ್ನಾಟಕದ ಜನತೆ ಬಿ.ಜೆ.ಪಿಗೆ ನೀಡಬಾಕಾಗಿದೆ, ಮಂಗಳೂರು ವಿ.ವಿ. ಯಲ್ಲಿ ವಿದ್ಯಾರ್ಥಿಗಳನ್ನು ಛೂ ಬಿಟ್ಟು ಜಿಲ್ಲೆಯ ಸೌಹಾರ್ದತೆಯನ್ನು ಕದಡಲು ನೋಡುತ್ತಿದ್ದಾರೆ ಎಂದರು.

ಸಿ.ಪಿ.ಐ.ಎಂ ಜಿಲ್ಲಾ ಸದಸ್ಯ ಕೃಷ್ಣಪ್ಪ ಸಾಲಿಯಾನ್ ಅಧ್ಯಕ್ಷತೆವಹಿಸಿದರು, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುಕುಮಾರ್ ತೊಕ್ಕೋಟ್ಟು, ಪದ್ಮಾವತಿ ಎಸ್ ಶೆಟ್ಟಿ, ಸಿ.ಪಿ.ಐ.ಎಂ ಉಳ್ಳಾಲ ವಲಯ ಕಾರ್ಯದರ್ಶಿ ಯು.ಜಯಂತ್ ನಾಯಕ್, ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ದೆಪ್ಪೇಲಿಮಾರ್, ಮಾಜಿ ಉಪಾಧ್ಯಕ್ಷೆ ರಾಜೇಶ್ವರೀ, ಹರೇಕಳ ಪಂಚಾಯತ್ ಸದಸ್ಯರಾದ ಅಶ್ರಪ್ ಮೊದಲಾದವರು ಉಪಸ್ಥಿತರಿದ್ದರು.