ಮಹತ್ವದ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶದಲ್ಲಿ ಮಾಜಿ ಆರ್ ಎಸ್ ಎಸ್ ಸ್ವಯಂ ಸೇವಕರಿಂದ ಹೊಸ ಪಕ್ಷ ಘೋಷಿಸುವ ಮೂಲಕ ಶ್ರೀಘ್ರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಟಾಂಗ್ ನೀಡುವ ಸೂಚನೆ ನೀಡಿದೆ.
ಬಿಜೆಪಿ ಅಧಿಕಾರದಲ್ಲಿರುವ, ಹಿಂದುತ್ವದ ಪ್ರಮುಖ ನಾಯಕರು ತುಂಬಿರುವ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಎದುರಾಳಿಯಾಗಿ ‘ಜನಹಿತ್’ ಅನ್ನುವ ಪಕ್ಷವನ್ನು ಮಾಜಿ ಆರ್ ಎಸ್ ಎಸ್ ಸ್ವಯಂ ಸೇವಕರು ಘೋಷಿಸಿದ್ದಾರೆ.
ಆರ್ ಎಸ್ ಎಸ್ ಮಾಜಿ ಪ್ರಚಾರಕ ಅಭಯ್ ಜೈನ್ ನೇತೃತ್ವದಲ್ಲಿ ಮಾಜಿ ಸಹೋದ್ಯೋಗಿಗಳು ಭೋಪಾಲ್ ಮಿಸ್ರೋಡ್ ನಲ್ಲಿ ನಡೆದ ಸಭೆಯಲ್ಲಿ ಜನಹಿತ್ ಪಾರ್ಟಿ ಘೋಷಿಸಿದ್ದಾರೆ. ರಾಜ್ಯದ ಸ್ಥಳೀಯ ಮುಖಂಡರು ಹಾಗೂ ಜಾರ್ಖಂಡ್ ಮೂಲದ ಆರ್ ಎಸ್ ಎಸ್ ಹಿನ್ನೆಲೆ ಹೊಂದಿದವರು ಈ ಪಕ್ಷದ ಸಾರಥ್ಯ ಹೊಂದಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ 230 ಸ್ಥಾನಗಳಲ್ಲಿ ಜನಹಿತ್ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಸೂಕ್ತ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿದೆ. ಮಾಜಿ ಆರ್ ಎಸ್ ಎಸ್ ಮುಖಂಡರ ಈ ನಿರ್ಧಾರ ಬಿಜೆಪಿಯನ್ನು ಪೇಚಿಗೆ ಸಿಲುಕಿಸಿದೆ. ಬಿಜೆಪಿ ಮತಕ್ಕೆ ಕನ್ನ ಹಾಕುವ ಸಾಧ್ಯತೆಗಳಿವೆ.