ಖಾಸಗಿಯಾಗಿ ವೀಕ್ಷಣೆ ಮಾಡುವುದು ಐಪಿಸಿಯ ಅಡಿಯಲ್ಲಿ ಅಶ್ಲೀಲತೆಯ ಅಪರಾಧಕ್ಕೆ ಕಾರಣವಾಗುವುದಿಲ್ಲ. ಅಂತಹ ವಿಷಯವನ್ನು ವೀಕ್ಷಿಸುವುದು ವ್ಯಕ್ತಿಯ ಖಾಸಗಿ ಆಯ್ಕೆಯಾಗಿದೆ
ಖಾಸಗಿಯಾಗಿ ಅಶ್ಲೀಲ ವೀಡಿಯೋ ನೋಡುವುದು ಅಪರಾಧವಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪಾಡಿಗೆ ತಾನು ಮೊಬೈಲ್‌ನಲ್ಲಿ ಪೋರ್ನ್ ವೀಕ್ಷಣೆ ಮಾಡುತ್ತಿದ್ದ. ಆತನನ್ನು ಬಂಧಿಸಿದ್ದ ಕೇರಳ ಪೊಲೀಸರು ಅವನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದ್ದರು. ಆದರೆ ಕೇರಳ ಹೈಕೋರ್ಟ್ ನ ಆದೇಶದಿಂದಾಗಿ ಕೇರಳ ಪೊಲೀಸರಿಗೆ ಹಿನ್ನಡೆಯಾಗಿದೆ. ಕಳೆದ ವಾರ ಕೇರಳ ಹೈಕೋರ್ಟ್ ಈತನ ಮೇಲೆ ಹಾಕಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದು ಮಾಡಿದೆ.
ಪ್ರಕರಣವನ್ನು ರದ್ದು ಮಾಡುವ ವೇಳೆ ಅಭಿಪ್ರಾಯ ತಿಳಿಸಿದ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್, ಯಾರೊಬ್ಬರ ಫೋನ್‌ಗೂ ಅಶ್ಲೀಲ ಫೋಟೋಗಳನ್ನು ಅಥವಾ ವಿಡಿಯೋಗಳನ್ನು ವಿತರಣೆ ಮಾಡದೆ. ಸಾರ್ವಜನಿಕವಾಗಿ ಪ್ರದರ್ಶನ ಮಾಡದೇ, ತನ್ನ ಮೊಬೈಲ್‌ನಲ್ಲಿಯೇ ಖಾಸಗಿಯಾಗಿ ವೀಕ್ಷಣೆ ಮಾಡುವುದು ಐಪಿಸಿಯ ಅಡಿಯಲ್ಲಿ ಅಶ್ಲೀಲತೆಯ ಅಪರಾಧಕ್ಕೆ ಕಾರಣವಾಗುವುದಿಲ್ಲ. ಅಂತಹ ವಿಷಯವನ್ನು ವೀಕ್ಷಿಸುವುದು ವ್ಯಕ್ತಿಯ ಖಾಸಗಿ ಆಯ್ಕೆಯಾಗಿದೆ ಮತ್ತು ನ್ಯಾಯಾಲಯವು ಅವರ ಗೌಪ್ಯತೆಯನ್ನು ಅತಿಕ್ರಮಿಸುವಂತಿಲ್ಲ ಎಂದು ತಿಳಿಸಿದೆ.