ಬಿಜೆಪಿ ಸಂಬಂಧಿಕೆ ಶೆಟ್ಟಿ ಯದ್ದೇ ಅಂಧಾ ದರ್ಬಾರ್.!
ನಂಬ್ತೀರಾ..ಬಿಡ್ತೀರಾ ಗೊತ್ತಿಲ್ಲ. ಮಂಗಳೂರು ಮಿನಿ ಆಡಳಿತ ಸೌಧದ ಕಚೇರಿಯ ಒಂದೊಂದು ಗೋಡೆಗಳು ಸಾಕ್ಷಿ ನುಡಿಯುತ್ತಿದೆ. ಮಂಗಳೂರು ಮಿನಿ ಆಡಳಿತ ಸೌಧದ ಒಂದೊಂದು ಕಚೇರಿಯ ಒಳಗೆ ಹೋದರೆ ಗೊತ್ತಾಗುತ್ತದೆ. ಕಂಬ ಕಂಬಗಳು ಕೈ ಚಾಚುವಂತೆ ತಹಶೀಲ್ದಾರ್ ನಿಂದ ಹಿಡಿದು ಸಣ್ಣ ಮಟ್ಟದ ಗುಮಾಸ್ತ ನವರೆಗೂ ಕೈ ಚಾಚುವುದು ರೂಢಿಯಾಗಿದೆ. ಅಷ್ಟರಮಟ್ಟಿಗೆ ಲಂಚಕ್ಕಾಗಿ ಬಾಯಿ ಬಿಡುತ್ತಿದ್ದಾರೆ ಇಲ್ಲಿನ ಅಧಿಕಾರಿ ವರ್ಗ.ಮಾನ-ಮರ್ಯಾದೆ ಎಲ್ಲವನ್ನು ಬಿಟ್ಟು.!
ತಹಶೀಲ್ದಾರ್ ಕಚೇರಿಯಿಂದ ಹಿಡಿದು ಎಡಿಎಲ್ ಆರ್, ಉಪನೋಂದಣಿ ಕಚೇರಿ, ಜನನ, ಆಹಾರ ಇಲಾಖೆ, ಸರ್ವೇ ಕಚೇರಿ, ಅಭಿಲೇಖಾಲಯ ಕಚೇರಿ,ಒಂದಾ.. ಎರಡಾ.. ಮೂರಾ.. ದುಡ್ಡು ಕೊಡದಿದ್ದರೆ ಇಲ್ಲಿ ಕೆಲಸವೇ ಆಗಲ್ಲ. ಯಾವ ಫೈಲ್ ಹಣ ಕೊಡದೆ ಮುಂದೆ ಹೋಗಲ್ಲ. ಕುರುಡು ಕಾಂಚಣದ್ದೇ ದರ್ಭಾರ್.! ಅಷ್ಟರಮಟ್ಟಿಗೆ ಹಣಧಾಹಿಯಾಗಿಬಿಟ್ಟಿದೆ ತಾಲೂಕು ಕಚೇರಿ. ಇಲ್ಲಿ ಪ್ರತಿಯೊಂದಕ್ಕೂ, ಕುಂತಿದ್ದಕ್ಕೂ, ನಿಂತಿದ್ದಕ್ಕೂ ದುಡ್ಡು ಪೀಕಿಸಿಯೇ ಕೆಲಸ ಮಾಡುವ ಪಟಾಲಂಗಳಿರುವುದು ಸತ್ಯ. ನೀವು ಇದರ ಒಳ ಹೊಕ್ಕರೆ ಗಬ್ಬೆಂದು ಲಂಚದ ವಾಸನೆ ಮೂಗಿಗೆ ಬಡಿಯುತ್ತಿದೆ.
ಅಚ್ಚರಿ, ವಿಚಿತ್ರ ಅಂದರೆ ಅಧಿಕಾರಿಗಳನ್ನು ಹದ್ದು ಬಸ್ತಿನಲ್ಲಿಡಬೇಕಾದ ತಹಶೀಲ್ದಾರ್ ರವರೆ ಲಕ್ಷ ಲಕ್ಷ ಕಮಾಯಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಹಕ್ಕು ಪತ್ರಕ್ಕೆ ಒಂದು ರೇಟು.! ಅಕ್ರಮ-ಸಕ್ರಮದ ಪೈಲಿಗೆ ಒಂದು ರೇಟು.ಒಂದು ಸೆಂಟ್ಸ್ ಜಾಗಕ್ಕೆ ಇಂತಿಷ್ಟು ಮೊದಲೇ ಫಿಕ್ಸ್. ಬಡಜನರು ಮನೆ ಕಟ್ಟಲು ಫೈಲ್ ರೆಡಿಯಾಗಬೇಕಾದರೆ ತಹಶೀಲ್ದಾರರು ಕೈ ಬೆಚ್ಚ ಮಾಡಿದರೆ ಮಾತ್ರ ಫೈಲ್ ರೆಡಿಯಾಗುತ್ತದೆಯಂತೆ. ಇವರ ಊಟದ ಸ್ಪೀಡಿಗೆ ಬಡವರು, ಮಧ್ಯಮರು, ಶ್ರೀಮಂತರೆಂದು ಭೇದಭಾವ ಇಲ್ಲ. ಉಣ್ಣಲೆಂದೇ ಕುಂತವರಾಗಿದ್ದಾರೆ. ‘ಪ್ರಶಾಂತ’ ವಾಗಿದ್ದ ತಾಲೂಕು ಕಚೇರಿ ಈ ‘ಪಾಟೀಲ’ ನಿಂದಾಗಿ ಇಂದು ಹಂಡಾಲೆಬ್ಬಿದೆ.
ಇನ್ನು ಎಡಿಎಲ್ಆರ್ ಕಚೇರಿ ಕಥೆ ಕೇಳಿದರೆ ಗೋವಿಂದ. ಇಲ್ಲಿ ಸರ್ವೇಯರ್ ಗಳಿಗೆ ಒಂದು ಫೈಲಿಗೆ ಇಂತಿಷ್ಟು ರೇಟ್ ಫಿಕ್ಸ್ ಮಾಡಿಯೇ ಕೆಲಸ ನಡೆಯುವುದು.ಸರ್ವವೂ ಲಂಚಮಯ.! ಸರ್ವೆ ಕಚೇರಿಯ ಸೂಪರ್ ವೈಸರ್ ಅ ಮಹಿಳಾ ಮಹಾಮಣಿಯ ಬಗ್ಗೆ ಹೇಳುವುದೇ ಬೇಡ. ಈಕೆಯ ಕಮಾಯಿ ಸ್ಪೀಡ್ ತಹಶೀಲ್ದಾರ್ ರಿಗಿಂತ ಸೂಪರ್ ಸ್ಪೀಡ್ ಅಂತೆ.! ಲಂಚಕ್ಕಾಗಿ ಬಾಯಿ ಬಿಡುತ್ತಿದ್ದಾರೆ ಅನ್ನುವ ಆರೋಪ ಕೇಳಿ ಬರುತ್ತಿದೆ. ಬಿಜೆಪಿ ಮಾಜಿ ಮೇಯರ್ ರೊಬ್ಬರ ಹತ್ತಿರದ ಸಂಬಂಧಿಕೆ ಆದುದರಿಂದ ತಾಲೂಕು ಕಚೇರಿಯಲ್ಲಿ ಈಕೆಯದ್ದೇ ಅಂಧಾ ದರ್ಭಾರ್. ಬಿಜೆಪಿ ಹೋಗಿ ಕಾಂಗ್ರೆಸ್ ಬಂದರೂ ಈಕೆ ಆ ಸ್ಥಾನದಲ್ಲಿ ಗಟ್ಟಿಯಾಗಿ ಕುಂತಿದ್ದಾಳೆ. ಕಾಂಗ್ರೆಸ್ ನಾಯಕರನ್ನು ಯಾಮಾರಿಸಿ, ತನ್ನ ಆಟ ಆಡುತ್ತಿದ್ದಾರೆ ಅನ್ನುವ ಮಾತು ಕೇಳಿ ಬರುತ್ತಿದೆ. ಅಯ್ಯೋ.. ದೇವ ಡಿಡಿಎಲ್ ಆರ್ ನಲ್ಲಿರುವ,ಪದ ನಿಮಿತ್ತ ಭೂ ದಾಖಲೆಗಳ ಉಪ-ನಿರ್ದೇಶಕರ ಪಟ್ಟದಲ್ಲಿ ಕೂಂತ ಈ ಅಮ್ಮನ ಕತೆಯೇ ಡಿಫರೆಂಟ್.! ಲಕ್ಷ ಲಕ್ಷ ಪಡೆದು ಟ್ರಾನ್ಸ್ ಪರ್ ಡೀಲು,ಲೈಸನ್ಸ್ ಇರುವ ಸರ್ವೆಯವರನ್ನು ಯಮಾರಿಸಿ ಅವರಿಂದ ಲಕ್ಷಾಂತರ ಕಮಾಯಿಸುವುದೇ ಈ ಅಮ್ಮನ ಕಸುಬಾಗಿ ಬಿಟ್ಟಿದೆ.ಇತ್ತೀಚೆಗೆ ಜೈಲಿಗೆ ಹೋಗಿ ಮುದ್ದೆ ಮುರಿದು ಬಂದ ಸರ್ವೆಯರ್ ಒಬ್ಬ ಮತ್ತೆ ಅದೇ ತಾಲೂಕು ಸರ್ವೇಯರ್ ಸ್ಥಾನಕ್ಕೆ ವಕ್ಕರಿಸಿ,ತನ್ನ ಜೇಬು ತುಂಬುವ ಕಾಯಕದಲ್ಲಿ ನಿರತನಾಗಿದ್ದಾನೆ. ಈತ ಬಾಯಿ ಬಿಟ್ಟರೆ ಲಂಚದ ವಾಸನೆ ಮೂಗಿಗೆ ಬಡಿಯುತ್ತಿದೆ.ಇವರನ್ನು ಹಿಂಗೆ ಬಿಟ್ಟರೆ ಜಿಲ್ಲೆಯ ಭೂಮಿಗಳನ್ನೇ ನುಂಗಿ ಬಿಟ್ಟರು. ಇವರಿಗೆಲ್ಲ ಮಾನ-ಮರ್ಯಾದೆ ಇದ್ದರೆ ಕೆಲಸಕ್ಕೆ ರಾಜಿನಾಮೆ ಕೊಟ್ಟುಹೋಗುವುದೇ ಲೇಸು.! ನಾವುಗಳು ಮಂಗಳೂರಿಗರು ಸ್ವಾಮಿ.! ಅಯ್ಯೋ ಬುದ್ದಿವಂತ ಮೂರ್ಖರು.! ನೀವು ನಮ್ಮನ್ನೇ ನುಂಗಿದರೂ ನಾವು ಚಕಾರ ಎತ್ತಲ್ಲ.?
ಮಂಗಳೂರು ತಾಲೂಕು ಕಚೇರಿಗೆ ನಾಗರೀಕರು ಕೆಲಸಕ್ಕೆ ಹೋದರೆ ಕಿಸೆಯಲ್ಲಿ ಗಾಂಧಿ ತಾತನ ದೊಡ್ಡ ದೊಡ್ಡ ಕಂತೆ ಇಟ್ಟುಕೊಂಡೇ ಹೋಗಬೇಕಾಗಿದೆ. ರಿಜಿಸ್ಟ್ರಾರ್ ಕಚೇರಿಯದ್ದು ದೊಡ್ಡ ಕಥೆ.ಬರೆದರೆ ಕಾದಂಬರಿಯಾದೀತು.(ಮುಂದೆ ನೋಡುವ) ಆಹಾರ ಇಲಾಖೆಯಲ್ಲಿ ಗಡವಗಳೆ ತುಂಬಿಕೊಂಡಿದ್ದಾರೆ. ಭೂತ ಕನ್ನಡಿ ಹಿಡಿದು ನೋಡಿದರೂ ಇಲ್ಲಿ ಪ್ರಾಮಾಣಿಕರು ಕಾಣ ಸಿಗುವುದು ಅಪರೂಪ. ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ ಕೇಳಿದರೆ ತಿಂಗಳುಗಳ ಕಾಲ ನಿಮ್ಮನ್ನು,ಸತಾಯಿಸಿ,ದಾರಿ ತಪ್ಪಿಸಿ,ಮಾಹಿತಿ ನೀಡದೆ ದಾರಿ ತಪ್ಪಿಸಿಕೊಳ್ಳುತ್ತಿದ್ದಾರೆ.ಇಲ್ಲಿ ಮಾಹಿತಿ ಹಕ್ಕು ಕಾಯ್ದೆಗೆ ಬೆಲೆನೇ ನೀಡುತ್ತಿಲ್ಲ. ತಾಲೂಕು ಕಛೇರಿಯಲ್ಲಿ ಕೆಲವೇ ಕೆಲವರು ಮಾತ್ರ ತಮ್ಮ ನಿಯತ್ತಿನ ಕಾಯಕದಲ್ಲಿದ್ದಾರೆ. ಈ ಲಂಚ ಭಾಕರಿಂದ ಅವರಿಗೂ ಪಾಪ ಕಳಂಕ ತಪ್ಪಿದ್ದಲ್ಲ. ಉತ್ತಮವಾಗಿ ಜನರೊಂದಿಗೆ ಸ್ಪಂಧಿಸಿ,ಯಾವುದೇ ಆಪೇಕ್ಷೆ ಇಲ್ಲದೆ,ಹಿರಿಯ ನಾಗರಿಕರ, ಹಳ್ಳಿಯಿಂದ ಬರುವಂತ ಅಮಾಯಕ ಜನರ ಕೆಲಸ ಕಾರ್ಯವನ್ನು ಮಾಡಿ,ಅವರಿಗೆ ಸೂಕ್ತ ಮಾಹಿತಿ ನೀಡುವ ಬೆರಳೆಣಿಕೆಯ ಅಧಿಕಾರಿಗಳು ಈ ಲಂಚದ ಕೋಟೆಯಲ್ಲಿ ನಿಯತ್ತಿನಿಂದ ಸರಕಾರದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಲೋಕಾಯುಕ್ತ ಎಲ್ಲೆಲ್ಲೊ ರೈಡ್ ಮಾಡುವ ಬದಲು ತಾಲೂಕು ಕಚೇರಿಯಲ್ಲೆ ಝಂಡಾ ಹೂಡಿದರೆ ದೊಡ್ಡ ದೊಡ್ಡ ತಿಮಿಂಗಿಲಗಳು ಬಲೆಗೆ ಬೀಳಬಹುದು.