ಹಲ್ಲೆಪ್ರಕರಣ: ಆರೋಪಿಗಳು ದೋಷಮುಕ್ತ; ಆರೋಪಿಗಳ ಪರ ವಾದ ಮಂಡಿಸಿದ ನ್ಯಾಯವಾದಿ ಮಹೇಶ್ ಕಜೆ

ಕರಾವಳಿ

ಪುತ್ತೂರು:ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಚಾಲಕ ರಾಮಕೃಷ್ಣ ಜೊತೆ ನಿರ್ವಾಹಕರಾಗಿ ರಿಯಾಜ್ ಮುಲ್ಲಾರ್ ಮಂಗಳೂರು ಸ್ಟೇಟ್ ಬ್ಯಾಂಕ್ ನಿಂದ ಹೊರಟು ಪುತ್ತೂರು ಕಡೆಗೆ ಬರುವ ಹೊತ್ತು,ರಾತ್ರಿ ಕಬಕ ಗ್ರಾಮದ, ನೆಹರೂ ನಗರ ಎಂಬಲ್ಲಿ ಖಾಸಗಿ ಬಸ್ಸನ್ನು ಅದರ ಚಾಲಕ ಆರೋಪಿ ಪಿ.ಎ ಜೋಯ್ ಎಂಬವರು ಒಮ್ಮೆಲೇ ಬ್ರೆಕ್ ಹಾಕಿ ರಾಮಕೃಷ್ಣರವರ ಬಸ್ಸಿಗೆ ಅಡ್ದವಾಗಿ ನಿಲ್ಲಿಸಿ,ರಾಮಕೃಷ್ಣರವರು ಆರೋಪಿ ಬಸ್ಸಿನ ಚಾಲಕರಲ್ಲಿ “ನಮ್ಮ ಬಸ್ಸಿಗೆ ಯಾಕೆ ಈ ರೀತಿ ಅಡ್ಡ ನಿಲ್ಲಿಸಿದ್ದೀರಿ” ಎಂದು ಕೇಳಿದರು, ಆಗ ಆರೋಪಿ ಬಸ್ಸಿನ ಚಾಲಕ ತನ್ನ ಬಸ್ಸನ್ನು ನಿಲ್ಲಿಸಿ ಬಂದು ಬಸ್ಸಿನ ಚಾಲಕರಾದ ರಾಮಕೃಷ್ಣರವರನ್ನು ಉದ್ದೇಶಿಸಿ ಆವಾಚ್ಯ ಶಬ್ದಗಳಿಂದ ಬೈದು ಅವರ ಸಮವಸ್ತ್ರಕೈ ಹಾಕಿ ಕೊರಳಪಟ್ಟಿ ಹಿಡಿದು,ಅರೋಪಿ ಬಸ್ಸಿನ ಚಾಲಕರ ಜೊತೆ ಬಂದ ಇತರ 3 ಮಂದಿ ಸೇರಿಕೊಂಡು ಚಾಲಕ ರಾಮಕೃಷ್ಣರವರ ಕಾಲನ್ನು ತಿರುಚಿ, ಮುಖಕ್ಕೆ ಹೊಡೆದು, ಕಾಲಿನಿಂದ ಹೊಟ್ಟೆಗೆ, ಸೊಂಟಕ್ಕೆ ತುಳಿದಿರುವುದನ್ನು ನೋಡಿದ ನಿರ್ವಾಹಕ ರಿಯಾಜ್ ಮುಲ್ಲಾರ್ ರವರು ಈ ಹಲ್ಲೆಯನ್ನು ತಡೆದಾಗ ಆರೋಪಿಗಳು “ಇನ್ನು ಮುಂದಕ್ಕೆ ಈ ಮಾರ್ಗದಲ್ಲಿ ಬಸ್ಸ್ ಚಲಾಯಿಸಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಕೊಲೆ ಬೆದರಿಕೆ ಹಾಕಿ, ಕರ್ತವ್ಯಕ್ಕೆ ಅಡ್ಡಿಯಾಗಿದೆ ಎಂದು ಆರೋಪ ಮಾಡಿ ರಿಯಾಜ್ ಮುಲ್ಲಾರ್ ರವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿದ್ದರು ಮತ್ತು ಆರೋಪಿಗಳ ವಿರುದ್ಧ ಪುತ್ತೂರು ನಗರ ಪೊಲೀಸರು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ, ದೋಷಾರೋಪಣಾ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸದ್ರಿ ಪ್ರಕರಣದಲ್ಲಿ ಅಭಿಯೋಜನ ಪರ ಸುಮಾರು 13 ಸಾಕ್ಷಿಗಳನ್ನು ವಿಚಾರಣೆ ನಡೆಸಿ,ಅಂತಿಮವಾಗಿ 2ನೇ ಮತ್ತು 3ನೇ ಆರೋಪಿಗಳ ಪರ ವಕೀಲರು, ಆರೋಪಿ ಧನಂಜಯ ಮತ್ತು ಇಬ್ರಾಹಿಂ ಹೆಸರುಗಳೇ ಪ್ರಥಮ ವರ್ತಮಾನ ವರದಿಯಲ್ಲಿ ಕಂಡುಬರುವುದಿಲ್ಲ. ಆರೋಪಿಗಳ ಸಂಖ್ಯೆ ಒಮ್ಮೆ 3, ಒಮ್ಮೆ 4, ಮತ್ತು ಒಮ್ಮೆ 5 ಎಂದು ಬೇರೆ ಬೇರೆ ರೀತಿಯಾಗಿ ಹೇಳಿರುತ್ತಾರೆ. ಆರೋಪಿಗಳ ಚಹರೆಯ ಬಗ್ಗೆ ಎಲ್ಲೋ ವಿವರ ಇರುವುದಿಲ್ಲ, ಮತ್ತು ಅವರ ಗುರುತಿಸುವ ಬಗ್ಗೆ ಯಾವುದೇ ಕವಾಯತು ಮಾಡಿರುವುದಿಲ್ಲ. ಯಾವ ಆಧಾರದಲ್ಲಿ ಈ ಕೇಸಿನಲ್ಲಿ ಅವರನ್ನು ಸೇರಿಸಲ್ಪಟ್ಟಿದೆ ಎಂಬುವುದಕ್ಕೂ ಸೂಕ್ತವಾದಂತಹ ಮಾಹಿತಿ ಇಲ್ಲ. ಅದೇ ಪ್ರಕಾರ ಆರೋಪಿಗಳ ಬಂದಿಸಿದ ನಂತರ ಅವರ ಗುರುತಿಸುವಿಕೆಯ ಬಗ್ಗೆ ರಿಯಾಜ್ ಮುಲ್ಲಾರ್ ರವರು ಹೇಳಿದಂತೆ ಕಂಡು ಬರುತ್ತದೆ. ಇದಕ್ಕೆಲ್ಲ ಕಲಶಪ್ರಾಯವಾಗಿ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ರಾಮಕೃಷ್ಣ ರವರು ಘಟನೆ ನಡೆದಿದೆ ಎನ್ನಲಾದ ಸಮಯ ಕರ್ತವ್ಯದಲ್ಲಿ ಇದ್ದರು ಎಂಬುವುದರ ಬಗ್ಗೆ ಸೂಕ್ತ ದಾಖಲಾತಿಗಳು ಇರುವುದಿಲ್ಲ, ಎಂಬುದಾಗಿ ವಾದಿಸಿದ್ದರು.

2ನೇ ಮತ್ತು 3ನೇ ಅರೋಪಿಗಳ ಪರ ಹಿರಿಯ ವಕೀಲರಾದ ಕಜೆ ಲಾ ಚೇಂಬರ್ಸ್ ನ ಶ್ರೀಯುತ ಮಹೇಶ್ ಕಜೆ ಮತ್ತು 1ನೇ ಆರೋಪಿ ಪರ ವಕೀಲರಾದ ಮಾಧವ ಪೂಜಾರಿಯವರ ವಾದ ವಿವಾದಗಳನ್ನು ಅಲಿಸಿ, ದಾಖಲೆಗಳನ್ನು ಪರಿಶೀಲಿಸಿ, ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸ0ಶಯಾತೀತವಾಗಿ ಸಾಭೀತುಪಡಿಸಲು ವಿಫಲವಾಗಿದೆ ಎ0ದೂ ತೀರ್ಮಾನಿಸಿ,ಮಾನ್ಯ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗಳನ್ನು ನಿರಪರಾಧಿಗಳೆಂದು ಬಿಡುಗಡೆಗೊಳಿಸಿರುತ್ತಾರೆ.