ಹಿಂಡೆನ್‌ಬರ್ಗ್ ಪ್ರಕರಣದ ಅರ್ಜಿದಾರರಲ್ಲೊಬ್ಬರು, ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ, ತನಿಖೆ ನಡೆಸುತ್ತಿರುವ ಸಮಿತಿ ವೈಫಲ್ಯವನ್ನು ಕಂಡಿದೆ ಮತ್ತು ಕಾನೂನು ಉಲ್ಲಂಘನೆಯ ಆರೋಪಗಳನ್ನು ಹೊಂದಿದೆ. ಆದ್ದರಿಂದ ತಜ್ಞರ ಸಮಿತಿಯನ್ನು ಪುನರ್‌ರಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ತನಿಖೆಗೆ ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಾರ್ಚ್ 2 ರಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆರು ಸದಸ್ಯರ ಸಮಿತಿಯನ್ನು ರಚಿಸಿತ್ತು.
ಸೋಮವಾರ ಅರ್ಜಿ ಸಲ್ಲಿಸಿದ ಅನಾಮಿಕಾ ಜೈಸ್ವಾಲ್ ರವರು ತನಿಖಾ ಸಮಿತಿಯಲ್ಲಿರುವ ಒ.ಪಿ ಭಟ್ (ಎಸ್ ಬಿ ಐ ಮಾಜಿ ಅಧ್ಯಕ್ಷ), ಕೆ.ವಿ ಕಾಮತ್ (ನುರಿತ ಬ್ಯಾಂಕರ್) ಮತ್ತು ಹಿರಿಯ ವಕೀಲ ಸೋಮಶೇಖರ್ ಸುಂದರೇಶನ್ ಅವರನ್ನು ತಜ್ಞರ ಸಮಿತಿಯಲ್ಲಿ ಸೇರಿಸುವುದು ಸೂಕ್ತವಲ್ಲ ಎಂದು ಪ್ರತಿಪಾದಿಸಿದರು.
ಅರ್ಜಿಯ ಪ್ರಕಾರ ಒ.ಪಿ ಭಟ್ ಪ್ರಸ್ತುತ ಗ್ರೀನ್‌ಕೊಡ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಇದು ಪ್ರಮುಖ ನವೀಕರಿಸಬಹುದಾದ ಇಂಧನ ಕಂಪನಿಯಾಗಿದ್ದು, ಇದು ಭಾರತದಲ್ಲಿ ಅದಾನಿ ಗುಂಪುಗಳಿಗೆ ಸೌಲಭ್ಯಗಳನ್ನು ಒದಗಿಸುತ್ತಿದೆ. ಮಾರ್ಚ್ 2022 ರಿಂದ ಅದಾನಿ ಗುಂಪಿನೊಂದಿಗೆ ನಿಕಟ ಪಾಲುದಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತಲೇ ಇದೆ ಎಂದು ವಾದಿಸಿದರು.ಮದ್ಯದ ದೊರೆ,ದೇಶ ಬಿಟ್ಟು ಪರಾರಿಯಾದ ವಿಜಯ್ ಮಲ್ಯ ಅವರಿಗೆ ಸಾಲ ವಿತರಿಸುವಲ್ಲಿ ಭಟ್ ಅಕ್ರಮ ಎಸಗಿದ್ದಾರೆ ಎಂಬ ಆರೋಪದ ಪ್ರಕರಣದಲ್ಲಿ ಅವರನ್ನು 2018 ರಲ್ಲಿ ಸಿಬಿಐ ತನಿಖೆಗೆ ಒಳಪಡಿಸಿತ್ತು