ಕೃಷ್ಣಾಪುರ: ಉದ್ಯಮಿ, ಸಮಾಜ ಸೇವಕ ಹಾಜಿ ಬಿ.ಎಂ ಹುಸೈನ್ (ಉತ್ತ ಹಾಜಿ) ವಿಧಿವಶ

ಕರಾವಳಿ

ಉದ್ಯಮಿ, ಸಮಾಜ ಸೇವಕ ಹಾಜಿ ಬಿ.ಎಂ ಹುಸೈನ್ (ಉತ್ತ ಹಾಜಿ) ಇಂದು ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ‌ನಿಧನರಾದರು.
ಇವರು ಕೃಷ್ಣಾಪುರ ಬದ್ರಿಯಾ ಜುಮಾ ಮಸ್ಜಿದ್ ಇದರ ಮಾಜಿ ಅಧ್ಯಕ್ಷರು,ಅಲ್ ಬದ್ರಿಯಾ ವಿದ್ಯಾ ಸಂಸ್ಥೆಯ ಸ್ಥಾಪಕ ಅಧ್ಯಕ್ಷರು, ಕಾಟಿಪಳ್ಳ ಚೈತನ್ಯ ಪಬ್ಲಿಕ್ ಸ್ಕೂಲ್ ಇದರ ಗೌರವಾಧ್ಯಕ್ಷರು, ಬದ್ರಿಯಾ ಅಸೋಸಿಯೇಷನ್ ಇದರ ಸ್ಥಾಪಕ ಅಧ್ಯಕ್ಷರಾಗಿ,ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ರಂಗದ ಸೇವೆಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.

ಇವರ ಪಾರ್ಥಿವ ಶರೀರವು ಕೃಷ್ಣಾಪುರ ಲಂಡನ್ ಪಾರ್ಕ್ ಬಳಿ ಇರುವ ಅವರ ಮನೆಯಲ್ಲಿ ಸಂದರ್ಶನಕ್ಕೆ ಇರಿಸಲಾಗಿದ್ದು, ಇಂದು ಸಂಜೆ ಕೃಷ್ಣಾಪುರದ ಈದ್ಗಾ ಮೈದಾನದಲ್ಲಿ ದಫನ ಕಾರ್ಯ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.